ನುಡಿದದ್ದು ನಡೆದದ್ದು’ ಹೊತ್ತಿಗೆ ಬಿಡುಗಡೆ
Team Udayavani, Apr 28, 2018, 6:45 AM IST
ಬೆಂಗಳೂರು: “ನುಡಿದಂತೆ ನಡೆದಿದ್ದೇವೆ’ ಎಂಬ ಕಾಂಗ್ರೆಸ್ ಘೋಷಣೆಗೆ ಪ್ರತಿಯಾಗಿ ಬಿಜೆಪಿ ಶುಕ್ರವಾರ “ನುಡಿದದ್ದು ನಡೆದದ್ದು’ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದು, “2013ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ಯಾವುದನ್ನೂ ಮಾಡಿಲ್ಲ. ಇದು ಮಾತು ತಪ್ಪಿದ ಸರ್ಕಾರ’ ಎಂದು ಆರೋಪಿಸಿದೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ದಿನವೇ ಹೊರತಂದ ಈ ಕಿರುಹೊತ್ತಿಗೆಯಲ್ಲಿ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಇಲಾಖಾವಾರು ನೀಡಿದ್ದ ಒಟ್ಟಾರೆ 269 ಭರವಸೆಗಳು ಮತ್ತು ಅವುಗಳ ಸದ್ಯದ ಸ್ಥಿತಿಗತಿಯನ್ನು ಪಟ್ಟಿಮಾಡಿರುವ ಬಿಜೆಪಿ,ಈವರೆಗೆ ಪ್ರಣಾಳಿಕೆಯಲ್ಲಿನ ಯಾವೊಂದೂ ಅಂಶಗಳೂ ಈಡೇರಿಲ್ಲ ಎಂದು ದೂರಿದೆ.
ಶುಕ್ರವಾರ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಸಂಸದೆ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಗೃಹ ಇಲಾಖೆ ಬಲವರ್ಧನೆ ಮಾಡುವುದಾಗಿ ಹೇಳಲಾಗಿತ್ತು. ಆದರೆ, ವಾಸ್ತವವಾಗಿ ಬಲವರ್ಧನೆಯನ್ನು ಮತ್ತಷ್ಟು ಕುಗ್ಗಿಸಲಾಗಿದೆ.
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ, ಎಚ್.ವೈ. ಮೇಟಿ ಲೈಂಗಿಕ ಹಗರಣ, ಮುಖ್ಯಮಂತ್ರಿ ಪುತ್ರನ ವಿರುದಟಛಿದ ದೂರು, ಹ್ಯೂಬ್ಲೆಟ್ ವಾಚ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ತನ್ನ ಇಚ್ಛೆಯಂತೆ ವರದಿ ನೀಡಲು ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಮತ್ತು ಭಾರತಿ ಶೆಟ್ಟಿ,ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ
ಮಂಜುಳಾ ಇದ್ದರು.
ವಿಶೇಷ ಕಾನೂನು ಪ್ರಸ್ತಾಪವೇ ಇಲ್ಲ: ಬೆಂಗಳೂರು ನಗರ ಆಡಳಿತಕ್ಕಾಗಿ ವಿಶೇಷ ಕಾನೂನು ರಚಿಸುವುದಾಗಿ ಕಾಂಗ್ರೆಸ್
ಹೇಳಿಕೊಂಡಿತ್ತು. ಆದರೆ, 5 ವರ್ಷಗಳಲ್ಲಿ ಇದರ ಪ್ರಸ್ತಾಪವೇ ಆಗಲಿಲ್ಲ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿ, ಕಿಕ್ ಬ್ಯಾಕ್ ಪಡೆದ ಆರೋಪ ಸರ್ಕಾರದ ಮೇಲಿದೆ. ವೃಕ್ಷ ಸಂವರ್ಧನೆ ಮಾಡುವುದಾಗಿ ಹೇಳಿತ್ತು. ಆದರೆ,ಮೆಟ್ರೋ, ಸ್ಟೀಲ್ ಬ್ರಿಡ್ಜ್, ವೈಟ್‌ಟಾಪಿಂಗ್‌ಗಾಗಿ ಮರ ಕಡಿದರೆ ಹೊರತು, ಮರನೆಟ್ಟಿದ್ದು ಕಾಣಲಿಲ್ಲ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧದ ಟಿವಿ ಜಾಹಿರಾತಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಸಲಹೆ-ಸೂಚನೆಯಂತೆ ಮಾರ್ಪಾಡು ಮಾಡಿಕೊಂಡು, ಅದಕ್ಕೆ ಲಿಖೀತ ಅನುಮತಿ ಪಡೆಯಲಾಗಿದೆ. ತದನಂತರವೇ ಪ್ರಸಾರ ಮಾಡಲಾಗುತ್ತಿದೆ. ಆದಾಗ್ಯೂ ತಡೆ ನೀಡಿರುವುದು ಸರಿ ಅಲ್ಲ. ಇದರ ವಿರುದಟಛಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು. ಶುಕ್ರವಾರ ಸಮಾವೇಶವೊಂದರಲ್ಲಿ ವಂದೇ ಮಾತರಂ ಹಾಡುವಾಗ ಸಿಎಂ ಸಿದ್ದರಾಮಯ್ಯ ಅವರು ಎದ್ದುನಿಲ್ಲದೆ ಅಗೌರವ ಸೂಚಿಸಿದ್ದಾರೆ. ಇದಕ್ಕಾಗಿ ರಾಜ್ಯದ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.