ಮಾತೃಭಾಷೆ ಯಾವುದಿದ್ದರೂ, ಕನ್ನಡಕ್ಕಿರಲಿ ಆದ್ಯತೆ
Team Udayavani, Jun 11, 2017, 12:23 PM IST
ಬೆಂಗಳೂರು: “ಮಾತೃ ಭಾಷೆ ಯಾವುದೇ ಇರಲಿ ಆದರೆ, ನಾಡಿನ ಭಾಷೆಯಾದ ಕನ್ನಡವನ್ನು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕಲಿಯಲೇಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶಿವಾಜಿನಗರದಲ್ಲಿ “ಐ ಮಾನಿಟರಿ ಅಡ್ವೆಸರಿ ಕೌನ್ಸಿಲ್ ಚಾರಿಟೇಬಲ್ ಸೊಸೈಟಿ’ ವತಿಯಿಂದ 16 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾದ ವಿ.ಕೆ.ಉಬೇದುಲ್ಲಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪಿಯು ಕಾಲೇಜಿನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
“ಇಲ್ಲಿ ಯಾರು ಯಾವ ಭಾಷೆ ಕಲಿತರೂ ಅದಕ್ಕೆ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ, ಕನ್ನಡವನ್ನೂ ಕಲಿಯಬೇಕು. ಅದರ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಕನ್ನಡ ಕಲಿಸಬೇಕು ಎಂಬ ಆದೇಶವನ್ನು ಹೊರಡಿಸಲಾಗಿದೆ,’ ಎಂದು ತಿಳಿಸಿದರು. “ಕೆಲವರು ಸಮಾಜವನ್ನು ಹಿಂದು, ಮುಸಲ್ಮಾನರು, ಜೈನರು, ಕ್ರೈಸ್ತರು, ಬೌದ್ಧರು ಎಂದು ಬೇರ್ಪಡಿಸಲು ಯತ್ನಿಸುತ್ತಿದ್ದಾರೆ. ಆದರೆ, ನಾವು ಮೊದಲು ಭಾರತೀಯರು ನಂತರ ನಮ್ಮ ನಮ್ಮ ಧರ್ಮಕ್ಕೆ ಸೇರಿದವರು,’ ಎಂದರು.
“ಸರ್ಕಾರಿ ಶಾಲೆಗಳು, ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಳ್ಳುವವರ ನಡುವೆ ಐಎಂಎ ಮುಖ್ಯಸ್ಥ ಮಹಮ್ಮದ್ ಮನ್ಸೂರ್ ಖಾನ್, ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ. ಅವರು ಇದೇ ಮಾದರಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಿ ಎಂದು ಸಲಹೆ ನೀಡಿದರು.
ನವೀಕೃತ ಶಾಲೆಯಲ್ಲಿ ಅತ್ಯುತ್ತಮ ಗ್ರಂಥಾಲಯ, ಪ್ರಯೋಗಾಲಯ, ತರಗತಿ ಕೊಠಡಿಗಳಿವೆ. ಜತೆಗೆ ಶಾಲೆಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಪೋಷಕರು ಮೊಬೈಲ್ ಮೂಲಕ ಶಾಲೆಯ ಚಟುವಟಿಕೆಗಳನ್ನು ವೀಕ್ಷಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಸಚಿವ ತನ್ವೀರ್ ಮಾತನಾಡಿ, ಉಬೇದುಲ್ಲಾ ಶಾಲೆಯಲ್ಲಿ ಕಳೆದ ವರ್ಷ ಕೇವಲ 70 ಮಕ್ಕಳು ಮಾತ್ರ ದಾಖಲಾಗಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಸುಮಾರು 1500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ,’ ಎಂದು ಹೇಳಿದರು. ರಾಜ್ಯದಾದ್ಯಂತ 1 ರಿಂದ 12ನೇ ತರಗತಿ ಹೊಂದಿರುವ ಕ್ಲಸ್ಟರ್ ಶಾಲೆಗಳನ್ನು ರಾಜ್ಯದ 176 ಸರ್ಕಾರಿ ಕ್ಯಾಂಪಸ್‌ಗಳಲ್ಲಿ ಆರಂಭಿಸುವ ಉದ್ದೇಶವಿದೆ. ಇಂದು ಯೋಜನೆಗೆ ಚಾಲನೆ ಸಿಕ್ಕಿದೆ.
ರಾಜ್ಯ ಸರ್ಕಾರದಿಂದ ಈ ಶಾಲೆಗೆ 40 ಮತ್ತು ಐಎಂಎ ಸಂಸ್ಥೆಯಿಂದ 60 ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು. ಸಚಿವ ಆರ್.ರೋಷನ್ ಬೇಗ್, ಐಎಂಎ ಮುಖ್ಯಸ್ಥ ಮಹಮ್ಮದ್ ಮನ್ಸೂರ್ ಖಾನ್, ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಪಾಲಿಕೆ ಸದಸ್ಯ ಶಕೀಲ್ ಅಹ್ಮದ್ ಹಾಜರಿದ್ದರು.
ಹಿಂದಿ ಥೋಡಾ ಥೋಡಾ ಆತ ಹೈ: ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಿಎಂ, “ಹಿಂದಿ ಮುಜೆ ಥೋಡಾ ಥೋಡಾ ಆತೇ ಹೈ… ಗಲತ್ ಬಹುತ್ ಹೋತೆ ಹೈ…,’ ಎಂದಾಗ ಕಾರ್ಯಕ್ರಮದಲ್ಲಿದ್ದವರು ನಗೆಗಡಲಲ್ಲಿ ತೇಲಿದರು. ನಂತರ ಕನ್ನಡದಲ್ಲಿ ಮಾತನಾಡಿದ ಅವರು, “ರೋಷನ್ ಬೇಗ್ ಉರ್ದು ಮಾಧ್ಯಮದಲ್ಲಿ ಓದಿರುವುದರಿಂದ ಕನ್ನಡ ಸರಿಯಾಗಿ ಉಚ್ಛಾರ ಆಗುವುದಿಲ್ಲ. ಅದೇ ತನ್ವೀರ್ ಕನ್ನಡಗೇ… ಚೆನ್ನಾಗಿ ಬರುತ್ತದೆ. ಆದರೆ, ಅವರ ತಂದೆಗೆ ಬರುತ್ತಿರಲಿಲ್ಲ,’ ಎಂದು ನಕ್ಕರು.
ನೀನು ಪಾರ್ಲಿಮೆಂಟ್‌ಗೆ ಹೋಗು!: “ನೀನು ಪಾರ್ಲಿಮೆಂಟ್‌ಗೆ ಹೋಗಪ್ಪ, ನಿನ್ನ ಮಗನನ್ನು ವಿಧಾನಸಭೆ ಚುನಾವಣೆಗೆ ನಿಲ್ಲಿಸು’ ಎಂದು ಸಿಎಂ ಸಿದ್ದರಾಮಯ್ಯ ರೋಷನ್ ಬೇಗ್ ಅವರಿಗೆ ಸೂಚಿಸಿದರು. ರೋಷನ್ ಬೇಗ್ ಅವರ ಪುತ್ರ ರಾಜಕೀಯವಾಗಿ ಬೆಳೆಯುತ್ತಿದ್ದು, ಅವರನ್ನು ಶಾಸಕರನ್ನಾಗಿ ಮಾಡಿ, ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲುವಂತೆ ನಾನೇ ರೋಷನ್ ಬೇಗ್‌ಗೆ ಸಲಹೆ ನೀಡಿದ್ದೇನೆ ಎಂದು ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.