ಹೊರೆಯಾಗುವುದೇ ಕೇಬಲ್‌, ಡಿಟಿಎಚ್‌ ಹೊಸ ದರ?


Team Udayavani, Dec 21, 2018, 11:40 AM IST

blore-5.jpg

ಬೆಂಗಳೂರು: ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜನವರಿ 1ರಿಂದ ಕೇಬಲ್‌ ಹಾಗೂ ಡಿಟಿಎಚ್‌ಗಳಿಗೆ ಹೊಸದರ ನಿಗದಿಪಡಿಸಿರುವ ಕ್ರಮಕ್ಕೆ ಕೇಬಲ್‌ ಹಾಗೂ ಡಿಟಿಎಚ್‌ ಆಪರೇಟರ್ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಟ್ರಾಯ್‌ ಹೊಸದರ ನಿಗದಿ ನಿರ್ಧಾರವನ್ನು ಹಿಂಪಡೆಯಬೇಕು, ಇಲ್ಲವೇ ಹೊಸದರ ನಿಗದಿ ಕ್ರಮದಿಂದ ಗ್ರಾಹಕರಿಗೆ ಯಾವ ರೀತಿಯ ಅನುಕೂಲ ಆಗಲಿದೆ ಎಂಬುದನ್ನು ಬಹಿರಂಗಗೊ ಳಿಸಬೇಕು. ಈ ಕುರಿತು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸೂಕ್ತ ಕ್ರಮವಹಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕೇಬಲ್‌ ಟಿವಿ ಆಪರೇಟರರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ವಿ.ಎಸ್‌ ಫ್ಯಾಟ್ರಿಕ್‌ ರಾಜು ತಿಳಿಸಿದ್ದಾರೆ.

ಟ್ರಾಯ್‌ ನಿಗದಿಪಡಿಸಿರುವ ಹೊಸ ದರದ ಅನ್ವಯ ಹೊಸ ವ್ಯವಸ್ಥೆಯಲ್ಲಿ 100 ಚಾನೆಲ್‌ ಆಯ್ಕೆಗೆ ಅವಕಾಶ ಇರುತ್ತದೆ. ಅದರಲ್ಲಿ ದೂರದರ್ಶನದ 26 ಚಾನೆಲ್‌ಗ‌ಳು ಕಡ್ಡಾಯವಾಗಿರಲಿವೆ. ಜತೆಗೆ, ಶೇ 18ರಷ್ಟು ಜಿಎಸ್‌ಟಿ ತೆರಿಗೆ ಒಳಗೊಂಡು ರೂ. 130 ರೂ ಪಾವತಿಸಬೇಕು. ಹೆಚ್ಚುವರಿಯಾಗಿ 20ರೂ ನೀಡಿದರೆ ಹೆಚ್ಚುವರಿಯಾಗಿ 25 ಚಾನೆಲ್‌ಗ‌ಳನ್ನು ಪ್ರಸಾರ ಸಿಗಲಿದೆ. ಉಳಿದಂತೆ ಯಾವುದೇ ಹೊಸ ಚಾನೆಲ್‌ ನಿಗದಿ ಪಡಿಸಿದರೂ ಟ್ರಾಯ್‌ ದರ ಹೊಸದಾಗಿ ಪಾವತಿಸಬೇಕು.

 ಟ್ರಾಯ್‌ನ ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚು ಹೊರೆ ಬೀಳಲಿದೆ. ಉದಾಹರಣೆಗೆ 10 ಚಾನೆಲ್‌ ಗಳನ್ನು ಗ್ರಾಹಕ ಖರೀದಿಸಿದರೆ ರೂ. 19 ರೂಗಳಂತೆ 190 ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದ ಈ ಹಿಂದೆ ಆಪರೇಟರ್ಸ್‌ಗಳು ನಗರ ಭಾಗದಲ್ಲಿ 300ರೂಗಳಿಗೆ 400 ಚಾನೆಲ್‌ ನೀಡುತ್ತಿದ್ದರು, ಇದಕ್ಕೆ ಹೋಲಿಸಿಕೊಂಡರೆ ಹೊಸ ದರ ನಿಗದಿ ಗ್ರಾಹಕರಿಗೆ ಸಂಕಷ್ಟ ಎಂಬುದು ಕೇಬಲ್‌ ಆಪರೇಟರ್ಸ್‌ ವಾದವಾಗಿದೆ.
 
ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ. ಬಹುತೇಕ ಅನಕ್ಷರಸ್ಥರಾಗಿರುವ ಗ್ರಾಹಕರಿಗೆ ಹೊಸ ದರವ್ಯವಸ್ಥೆ, ತಮಗಿಷ್ಟ ಬಂದ ಚಾನೆಲ್‌ ಬೇಕು ಎಂದರೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಬೇಕು ಎಂಬುದು ಹೇಗೆ ಅರ್ಥವಾಗಲಿದೆ ಎನ್ನುವ ಅಂಶವನ್ನೂ ಮುಂದಿಡುತ್ತಾರೆ. ಟ್ರಾಯ್‌ ದೇಶದ ಕೇಬಲ್‌ ಆಪರೇಟರ್ಸ್‌ ಅಥವಾ ತಜ್ಞರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿಲ್ಲ. ಕಾರ್ಫೋರೇಟ ಸಂಸ್ಥೆಗಳಿಗೆ ಅನುಕೂಲ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ. ಇದರ ಪರಿಣಾಮ ರಾಜ್ಯದ 17 ಸಾವಿರ ಕೇಬಲ್‌ ಆಪರೇಟರ್ಸ್‌ ಹಾಗೂ ಅವರ ಜತೆ ಕೆಲಸ ಮಾಡುವ ಹುಡುಗರ ಉದ್ಯೋಗದ ಮೇಲೆ ನೇರ ಪರಿಣಾಮ ಬೀಳಲಿದೆ ಎಂದು ಫ್ಯಾಟ್ರಿಕ್‌ ರಾಜು ಆರೋಪಿಸಿದರು.

ಟ್ರಾಯ್‌ ಏನು ಹೇಳುತ್ತಿದೆ?
ಗ್ರಾಹಕರ ಆಯ್ಕೆಯ ಚಾನೆಲ್‌ಗ‌ಳನ್ನು ಮಾತ್ರವೇ ನೀಡುವ ಉದ್ದೇಶ ಅನಗತ್ಯವಾಗಿ ಚಾನೆಲ್‌ಗ‌ಳು ಹೇರುವ ಪದ್ಧತಿಗೆ
ಕಡಿವಾಣ ಹಾಕುವ ಸಲುವಾಗಿ ಹೊಸ ದರ ನಿಗದಿಪಡಿಸಲಾಗಿದೆ, ಇದರಿಂದ ಗ್ರಾಹಕನ ಆಯ್ಕೆ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ. ಗ್ರಾಹಕರ ಹಿತಾಸಕ್ತಿಯ ಉದ್ದೇಶವೇ ಇದರ ಮೂಲ ಉದ್ದೇಶವಾಗಿದೆ. ಹೊಸ ದರ ನಿಗದಿ ಕುರಿತ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಟ್ರಾಯ್‌ ಹೇಳುತ್ತಿದೆ.

ಡಿ29ರಿಂದ ಗ್ರಾಹಕರಿಗೆ ಶಾಕ್‌!
ಹೊಸದರ ನಿಗದಿ ಹಿನ್ನೆಲೆಯಲ್ಲಿ ಡಿ29ರಿಂದ ಉಚಿತವಾಗಿ ನೀಡಲಾಗುತ್ತಿರುವ 26 ಚಾನೆಲ್‌ಗ‌ಳನ್ನು ಹೊರತು ಪಡಿಸಿ ಬೇರೆ ಯಾವುದೇ ಚಾನೆಲ್‌ಗ‌ಳು ಬರುವುದಿಲ್ಲ. ಈ ಸಂಬಂಧ ಟ್ರಾಯ್‌, ಗ್ರಾಹಕರ ಆಯ್ಕೆ ಚಾನೆಲ್‌ಗ‌ಳ ದರವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು. ಗ್ರಾಹಕರು ಡಿ.29ಕ್ಕೂ ಮುನ್ನವೇ ಡಿಜಿಟಲ್‌ ಹಾಗೂ ಕೇಬಲ್‌ ಆಪರೇಟರ್ಸ್‌ಗಳ ಮೊದಲೇ ಹಣ ಪಾವತಿಸಿ ರಿಚಾರ್ಜ್‌ ಮಾಡಿಸಿಕೊಳ್ಳಬೇಕಿದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.