ಗೋಮಾಂಸ ತಿಂದರೆ ತಪ್ಪೇನು? ಸಿಎಂ ಪ್ರಶ್ನೆ
Team Udayavani, Mar 12, 2018, 12:23 PM IST
ಬೆಂಗಳೂರು: “ನಾನು ಗೋ ಮಾಂಸ ತಿನ್ನುವುದರಿಂದ ಆಕಾಶ ಬಿದ್ದು ಹೋಗುತ್ತಾ? ನಾನು ಗೋ ಮಾಂಸ ತಿನ್ನಲ್ಲ. ತಿನ್ನಬೇಕು ಎನಿಸಿದರೇ ತಿಂದೇ ತಿನ್ನುತ್ತೇನೆ. ಗೋ ಮಾಂಸ ತಿಂದರೆ ತಪ್ಪೇನು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯಿಂದ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ “ಎತ್ತ ಸಾಗುತ್ತಿದೆ ಭಾರತ?’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣ ಗೋ ಹತ್ಯೆ ನಿಷೇಧಕ್ಕೆ ಮುಂದಾಗಿತ್ತು. ವಿರೋಧ ಪಕ್ಷದಲ್ಲಿದ್ದ ನಾವು ಅದನ್ನು ವಿರೋಧಿಸಿದ್ದೆವು.
ಗೋಮಾಂಸ ಸೇವನೆ ಆಹಾರ ಪದ್ಧತಿ ಅಂಥ ಹೇಳಿದ್ದಕ್ಕೆ ನಾನೂ ಗೋಮಾಂಸ ತಿನ್ನುತ್ತೇನೆ ಎಂದು ಎಲ್ಲೆಡೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧವಾಗಿದೆ ಎಂದು ದೂರಿದರು.
ಗೋಮಾಂಸ ಸೇವನೆ ಅಥವಾ ಸೇವಿಸದೇ ಇರುವುದು ನನ್ನ ಆಹಾರದ ಹಕ್ಕು. ನಾನೇನು ತಿನ್ನಬೇಕು ಮತ್ತು ತಿನ್ನಬಾರದು ಎಂದು ನಿರ್ಧರಿಸಲು ಅವರು ಯಾರು? ಅಲ್ಲಿರೋರು ಎಷ್ಟು ಮಂದಿ ಗೋಮಾಂಸ ತಿನ್ನುತ್ತಾರೋ ಗೊತ್ತಿಲ್ಲ. ತಿಂದರೆ ಏನಾಗುತ್ತೆ? ಇದು ತಪ್ಪಾ ಎಂದು ಪ್ರಶ್ನಿಸಿದರು.
ಗೋಹತ್ಯೆ ಹಾಗೂ ಗೋಮಾಂಸ ಸೇವನೆ ನಿಷೇಧಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಒತ್ತಾಯಿಸುತ್ತಾರೆ. ಬಿಜೆಪಿ ಆಡಳಿತವಿರುವ ಗೋವಾ ಮತ್ತು ಈಶಾನ್ಯ ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿಲ್ಲ. ಬದಲಾಗಿ ಗೋಮಾಂಸದ ರಫ್ತಿನಿಂದ ಕೋಟ್ಯಂತರ ರೂ. ಆದಾಯ ಪಡೆಯುತ್ತಿದ್ದಾರೆ ಎಂದರು.
ಜಾತ್ಯತೀತತೆ ಪ್ರತಿಪಾದನೆ ಮಾಡುವ ಅವಕಾಶವಾದಿಗಳ ಬಗ್ಗೆಯೂ ಎಚ್ಚರ ಇರಬೇಕು. ಕರ್ನಾಟಕದ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು. ಸಾಮಾಜಿಕ ನ್ಯಾಯದ ಪರ ಇರುವವರನ್ನು ಮತ್ತು ಸಂವಿಧಾನವನ್ನು ಗೌರವಿಸಿ ಪ್ರಜಾಪ್ರಭುತ್ವ ಉಳಿಸುವವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿಯವರು ದೇಶದ ಬಹುತ್ವವನ್ನು ನಾಶಮಾಡಿ ಸಂವಿಧಾನದ ಮೇಲೆ ಗದಪ್ರಹಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳಿಗೆ ಮತ್ತೇ ತಲೆ ಎತ್ತುಲು ಬಿಡ ಬಾರದು. ರಾಜ್ಯ ವಿಧಾನಸಭೆ ಚುನಾವಣೆ ದೇಶದ ರಾಜಕೀಯ ಮತ್ತು ಪ್ರಜಾಭುತ್ವ ವ್ಯವಸ್ಥೆಯ ಭವಿಷ್ಯ ನಿರ್ಧರಿಸಲಿದೆ ಎಂದರು.
ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ರೈತ ಸಂಘದ ಪ್ರಧಾನ ಕಾಯರದರ್ಶಿ ಬಡಗಲಪುರ ನಾಗೇಂದ್ರ, ದಲಿತ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್ ಮತ್ತು ಲಕ್ಷ್ಮೀನಾರಾಯಣ ನಾಗವಾರ ಮೊದಲಾದವರು ಇದ್ದರು.
ನಿರ್ಣಯಗಳು: 2018ರ ರಾಜ್ಯ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕದಲ್ಲಿ ಜಾತ್ಯಾತೀತೆ, ಪ್ರಜಾಸತಾತ್ಮಕತೆ ಮತ್ತು ರಾಜಕೀಯ ಜಾಗೃತಿ ಮೂಡಿಸುವುದು. ಪ್ರಜಾಪ್ರಭುತ್ವ ಉಳಿವಿಗೆ ಮತ್ತು ಜಾತಿ ರಾಜಕೀಯದ ವಿರುದ್ಧ ಅರಿವು ಮೂಡಿಸುವ ನಿರ್ಣಯವನ್ನು ವಿಚಾರ ಸಂಕಿರಣದಲ್ಲಿ ಕೈಗೊಳ್ಳಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರೋದು ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಕೋಮುವಾದಿಗಳು ಇಡೀ ದೇಶವನ್ನೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಅವರ ಮುಂದಿನ ಗುರಿ. ಕೊಳಕು ಮನಸ್ಸಿನ ಆ ಕೋಮುವಾದಿಗಳು ಅಧಿಕಾರಕ್ಕೆ ಏರದಂತೆ ನೋಡಿಕೊಳ್ಳಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.