ಹೆಣ್ಣಿನ ಮೇಲೆ ದೌರ್ಜನ್ಯವಾದಾಗ ಅಸಹಾಯಕಳಾಗಿ ಅಳುತ್ತಿದ್ದೆ
Team Udayavani, Mar 12, 2017, 11:54 AM IST
ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ನಾನೊಬ್ಬ ಒಂಟಿ ಮಹಿಳೆ, ಒಬ್ಬಳೇ ಏನು ಮಾಡಬಲ್ಲೆ ಎಂದು ಯೋಚಿಸಿ ಅಳು ಬರುತ್ತಿತ್ತು. ಜತೆಗೆ ರೋಷವೂ ಬರುತ್ತಿತ್ತು ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು.
ಬಿಜೆಪಿ ಶಿವಾಜಿನಗರ ಮಂಡಲ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಧನೆ ಮಾಡುವ ಕೆಚ್ಚು, ಕಿಚ್ಚು ನಮ್ಮಲ್ಲಿದೆ. ಹಾಗಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆದಾಗ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಎನಿಸುತ್ತದೆ. ಮೇಲಾಗಿ ಇಂತಹ ದೌರ್ಜನ್ಯ ನಡೆದಾಗ ಆರೋಪಿಗಳ ವಿರುದ್ಧ ಪೊಲೀಸರು ಸರಿಯಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸದೆ ಅವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಕರುಣೆ ತೋರಿಸುವ ಪುರುಷರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಮಗೆ ಪುರುಷರ ಕರುಣೆ ಬೇಕಾಗಿಲ್ಲ. ನಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ ಬೇಕು. ಶಿಕ್ಷಣ, ಆರ್ಥಿಕ ಸದೃಢತೆ ಬೇಕು. ಅದಕ್ಕೆ ಪುರುಷರು ಸಹಕರಿಸಿದರೆ ಸಾಕು ಎಂದರು. ಸಂಸದ ಪಿ.ಸಿ.ಮೋಹನ್, ಬೆಂಗಳೂರು ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.
ರುದ್ರೇಶ್ ಹತ್ಯೆಗೆ ಸೇಡು ತೀರಿಸಿಕೊಳ್ಳಬೇಕು: ರಾಜಕೀಯ ಕಾರಣಕ್ಕೆ ನಮ್ಮ ಅಣ್ಣನಂತಿದ್ದ ರುದ್ರೇಶ್ ಅವರನ್ನು ಕೊಲೆ ಮಾಡಲಾಯಿತು. ರುದ್ರೇಶ್ ಅವರ ಸಾವು ವ್ಯರ್ಥವಾಗಬಾರದು. ಇದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು. ಅವರನ್ನು ರಾಜಕೀಯವಾಗಿ ಹತ್ಯೆ ಮಾಡಿದವರನ್ನು ಸಮ್ಮನೆ ಬಿಡಬಾರದು. ಆ ನಿಟ್ಟಿನಲ್ಲಿ ರುದ್ರೇಶ್ ಅವರ ಪತ್ನಿಗೆ ಶಕ್ತಿ ತುಂಬುವುರದ ಜತೆಗೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಮ್ಮವರನ್ನೇ ಆಯ್ಕೆ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
MUST WATCH
ಹೊಸ ಸೇರ್ಪಡೆ
Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್ ಅಳವಡಿಕೆ
Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.