ಮೂರು ತಿಂಗಳಲ್ಲಿ ವೈಟ್ ಟಾಪಿಂಗ್ ಪೂರ್ಣ
Team Udayavani, Feb 9, 2022, 12:38 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರ ಉದ್ದೇಶದಿಂದ ಪ್ರಾರಂಭವಾದ ವೈಟ್ ಟಾಪಿಂಗ್ ಕಾಮಗಾರಿ ಅಂತೂ ಇಂತೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ನಗರದ ಹೃದಯಭಾಗ, ವಾಣಿಜ್ಯ ಪ್ರದೇಶ, ಸಂಚಾರ ಒತ್ತಡದ ಮಾರ್ಗಗಳಲ್ಲಿ ನಡೆಯುತ್ತಿರುವವೈಟ್ ಟಾಪಿಂಗ್ ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 152.24 ಕಿ.ಮೀ.ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ.ಇದರಿಂದಾಗಿ ಎರಡು ವರ್ಷಗಳಿಂದಕಾಮಗಾರಿ ಕಿರಿಕಿರಿಯಿಂದ ತೊಂದರೆಗೊಳಗಾಗಿದ್ದ ವಾಹನ ಸವಾರರು ಹಾಗೂ ಸಾರ್ವ ಜನಿಕರು ನಿಟ್ಟುಸಿರು ಬಿಡುವಂತಾಗಲಿದೆ. ಈಗಾಗಲೇ ನಗರಾದ್ಯಂತದ ಪ್ರಮುಖ ರಸ್ತೆಗಳಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಶೇ.80ಪೂರ್ಣ ಗೊಂಡಿದೆ.
ಒಟ್ಟಾರೆ, 152.24 ಕಿ.ಮೀ. ಉದ್ದದರಸ್ತೆಯಲ್ಲಿ 103.68 ಉದ್ದದ ರಸ್ತೆಗಳಕಾಮಗಾರಿ ಸಂಪೂರ್ಣಗೊಂಡಿದ್ದು, 48.56 ಕಿ.ಮೀ. ಉದ್ದದ ಶೇ.20 ರಷ್ಟು ಕಾಮಗಾರಿ ಬಾಕಿ ಇದ್ದು 3ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ವೈಟ್‌ಟಾಪಿಂಗ್ ಕಾಮಗಾರಿಯಿಂದಾಗಿ ಮುಂದಿನ20-30 ವರ್ಷಗಳ ಕಾಲ ರಸ್ತೆಗಳು ಯಾವುದೇ ಸಮಸ್ಯೆ ಇಲ್ಲದೆ ನಿರ್ವಹಣೆಯಾಗಲಿದ್ದು,ಪದೇ ಪದೆ ಅಥವಾ ಪ್ರತಿ ವರ್ಷ ಕಾಮಗಾರಿ, ದುರಸ್ತಿಯ ಪ್ರಮೇಯವೇ ಇರುವುದಿಲ್ಲ ಎಂದಿದ್ದಾರೆ.2018ರಲ್ಲಿ ವೈಟ್‌ಟಾಪಿಂಗ್ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಕೊರೊನಾ ಲಾಕ್‌ಡೌನ್, ಕಾರ್ಮಿಕರ ಅಭಾವದಿಂದಾಗಿ ಒಂದಷ್ಟು ದಿನ ಕಾಮಗಾರಿಗೆ ಅಡ್ಡಿಯಾಗಿತ್ತು. ಮುಖ್ಯಮಂತ್ರಿಯವರ ನಗರೋತ್ಥಾನದಡಿ ಲಭ್ಯವಿದ್ದ ಅನುದಾನವನ್ನೂ ವೈಟ್ ಟಾಪಿಂಗ್ ಯೋಜನೆಗೆ ಬಳಸಲಾಗಿದ್ದು, ಇತ್ತೀಚಿಗೆ ಕಾಮಗಾರಿ ಚುರುಕುಗೊಂಡಿದೆ. ಹೀಗಾಗಿ, 2022ರಡಿಸೆಂಬರ್ ಅಂತ್ಯಕ್ಕೆ ಮುಗಿಯಬೇಕಾದ ಕಾಮಗಾರಿಏಪ್ರಿಲ್ ಅಥವಾ ಮೇ ಅಂತ್ಯಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಮೈಸೂರು ರಸ್ತೆಯಿಂದ ಹಳೆಯ ಹೊರವರ್ತುಲ ರಸ್ತೆ ಮಾರ್ಗವಾಗಿ ವಿಶ್ವವಿದ್ಯಾಲಯ ದ್ವಾರದವರೆಗಿನ 7.58 ಕಿ.ಮೀ, ಹೊಸೂರು ರಸ್ತೆ 5.55 ಕಿ.ಮೀ,ಸರ್ಜಾಪುರ ರಸ್ತೆಯ 5.30ಕಿ.ಮೀ. ಉದ್ದದ ರಸ್ತೆಸೇರಿದಂತೆ ಬಹುತೇಕ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಆದರೆ, ಬನ್ನೇರುಘಟ್ಟ ರಸ್ತೆಯ 4.20 ಕಿ.ಮೀ, ವಿಲ್ಸನ್ ಗಾರ್ಡನ್ ರಸ್ತೆಯ 1.42, ಲ್ಯಾವೆಲ್ಲಿ ರಸ್ತೆಯ1.38 ಕಿ.ಮೀ, ಇಂದಿರಾ ನಗರದ ಮೂಲಕ ಹಳೆಯವಿಮಾನ ನಿಲ್ದಾಣದವರೆಗಿನ 1.96ಕಿ.ಮೀ. ಸೇರಿಇಪ್ಪತ್ತು ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಇದೀಗ ಬಾಕಿ ಇದೆ.
22 ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ :
ಸ್ಮಾರ್ಟ್ ಸಿಟಿ ಯೋಜನೆಯಡಿ ಎಂ.ಜಿ.ರಸ್ತೆಯಿಂದ ಕಾಮರಾಜ್ ಮಾರ್ಗವಾಗಿ ಕಮರ್ಷಿಯಲ್ ಸ್ಟ್ರೀಟ್‌ವರೆಗೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಿಂದ ಸೆಂಟ್‌ಜಾನ್ಸ್ ಚರ್ಚ್ ರಸ್ತೆವರೆಗೆ ರೂ.25.72 ಕೋಟಿ ವೆಚ್ಚದ1.83 ಕಿ.ಮೀ ರಸ್ತೆ ಕಾಮಗಾರಿ ಸೇರಿದಂತೆ ಒಟ್ಟು460.02 ಕೋಟಿ ರೂ. ವೆಚ್ಚದ 27.80 ಕಿಮೀ ಉದ್ದದ,32 ರಸ್ತೆಗಳನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. 22 ರಸ್ತೆಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಐದುರಸ್ತೆಗಳು ಡಾಂಬರೀಕರಣ ಆಗಬೇಕಿದೆ. ಇದೂ ಪೂರ್ಣಗೊಂಡರೆ ನಗರದಲ್ಲಿ ಸಂಚಾರ ಸುಗಮವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಲವು ಕಾಮಗಾರಿ ಮುಕ್ತಾಯ :
ನಗರದ ಪ್ರಮುಖ ರಸ್ತೆಗಳಲ್ಲಿ ಒಟ್ಟು ನೂರು ರಸ್ತೆಗಳನ್ನು ವೈಟ್ ಟಾಪಿಂಗ್‌ಗೆಆಯ್ಕೆಮಾಡಿಕೊಳ್ಳಲಾಗಿತ್ತು. ಆ ಪೈಕಿ ಬಿಇಎಲ್‌ವೃತ್ತದಿಂದ ಹೆಬ್ಟಾಳದ ಮೂಲಕ ಬೆನ್ನಿಗಾನಹಳ್ಳಿಮೇಲ್ಸೇತುವೆವರೆಗಿನ 11ಕಿ.ಮೀ, ಮೈಸೂರುರಸ್ತೆಯಿಂದ ಸುಮನಹಳ್ಳಿ ಜಂಕ್ಷನ್ ಮೂಲಕತುಮಕೂರು ರಸ್ತೆವರೆಗಿನ 9.66 ಕಿ.ಮೀ, ನಾಗಾವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆಯ ಮಾರ್ಗದ 8.65 ಕಿ.ಮೀ. ಉದ್ದದರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣಗೊಂಡಿದೆ.
ಮಳೆಗಾಲದಲ್ಲಿ ಜಲಾವೃತ, ಡಾಂಬರು ಕಿತ್ತು ಬರುವುದು, ರಸ್ತೆಗುಂಡಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂಬಂತೆ ರೂಪಿಸಲಾಗಿರುವ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡರೆ ನಗರದ ಸಂಚಾರ ದಟ್ಟಣೆ ನಿವಾರಣೆಗೂ ಸಹಕಾರಿಯಾಗಲಿದೆ. –ಲೋಕೇಶ್ , ಬಿಬಿಎಂಪಿ ಮುಖ್ಯ ಎಂಜಿನಿಯರ್
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.