ವಯಾಡಕ್ಟ್ ಬಿರುಕಿಗೆ ಹೊಣೆ ಯಾರು?

Team Udayavani, Dec 14, 2018, 11:24 AM IST

vayadact.jpg

ಬೆಂಗಳೂರು: ನೂರಾರು ವರ್ಷ ಬಾಳ ಬೇಕಾದ ಕಾಮಗಾರಿ ಅದು. ಆದರೆ, ಕೇವಲ ಹತ್ತು ವರ್ಷ ಗಳಲ್ಲಿ ಅದರಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ಯಾರು  ಹೊಣೆ? ಕಾಮಗಾರಿ ಮಾಡಿದವರಾ? ಅದನ್ನು ತಪಾಸಣೆ ಮಾಡಿ “ಸೈ’ ಎಂದವರಾ? ಅಥವಾ ಇಡೀ ಮಾರ್ಗಕ್ಕೆ ಹಸಿರು ನಿಶಾನೆ ತೋರಿದವರಾ? “ನಮ್ಮ  ಮೆಟ್ರೋ’ದಲ್ಲಿ ಕಾಣಿಸಿಕೊಂಡ ಒಂದು ಸಣ್ಣ ಬಿರುಕು ಇಂತಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 2007-08ರಲ್ಲೇ ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ವೃತ್ತದ  ನಡುವೆ ನಿರ್ಮಿಸ ಲಾದ ಮೆಟ್ರೋ ಮಾರ್ಗದ ಸಿವಿಲ್‌ ಕಾಮ ಗಾರಿಗೆ ನವ  ಯುಗ ಕಂಪನಿಯು ಅತ್ಯಂತ ನುರಿತ ಎಂಜಿ ನಿಯರ್‌ಗಳನ್ನು ನಿಯೋಜಿಸಿತ್ತು  (ಡಿಎಲ್‌ಪಿ ಅವಧಿ ಎರಡು ವರ್ಷ ಇತ್ತು). ಆ ಕಾಮಗಾರಿ ಯನ್ನು ಇಂಚಿಂಚೂ ಪರಿಶೀಲಿಸಿ “ಓಕೆ’ ಎಂದು ಹೇಳಿದ್ದು ರೈಟ್ಸ್‌ ಸಂಸ್ಥೆ.

ತದ ನಂತರ ನಿರ್ವಹಣೆ  ಮಾಡುತ್ತಿರುವುದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ). ಇಡೀ ಯೋಜ ನೆಗೆ ಹಸಿರು ನಿಶಾನೆ ತೋರಿಸಿದ್ದು ರೈಲ್ವೆ ಸುರಕ್ಷತಾಯುಕ್ತರು. ಇಷ್ಟೆಲ್ಲ ಆಗಿಯೂ, ಈ ಬಿರುಕು ಕಾಣಿಸಿ ಕೊಂಡಿದೆ. ಈಗ ಇದನ್ನು ಸರಿಪಡಿಸುವು ದರ ಜತೆಗೆ ಈ ಲೋಪಕ್ಕೆ ಯಾರು ಹೊಣೆ ಎಂಬ  ಪ್ರಶ್ನೆಗೂ ಉತ್ತರ ಬೇಡಿಕೆ. 

ಆಗಬಾರದಿತ್ತು ಆಗಿದೆ; ಎಂಡಿ: “ಇದು ಆಗಬಾರದಾಗಿತ್ತು. ಆದರೆ ಆಗಿಬಿಟ್ಟಿದೆ. ಈಗ ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡ ಬೇಕಾಗಿದೆ.  ಹಾಗಂತ ಇದರಿಂದ ಮೆಟ್ರೋ ಸುರಕ್ಷಿತ ಪ್ರಯಾಣಕ್ಕೆ ಯಾವುದೇ ತೊಂದರೆ ಇಲ್ಲ. ದುರಸ್ತಿ ಸಂದರ್ಭದಲ್ಲಿ ಸೇವೆ ಯಲ್ಲಿ ಸ್ವಲ್ಪ ವ್ಯತ್ಯಯ  ಉಂಟಾಗಬಹುದಷ್ಟೇ’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸುತ್ತಾರೆ. 

ಆದರೆ, 42 ಕಿ.ಮೀ.  ಉದ್ದದ ಮೊದಲ ಹಂತ ದಲ್ಲಿ 1,100ಕ್ಕೂ ಅಧಿಕ ವಯಾಡಕ್ಟ್ಗಳು ಬರುತವೆ. ಹತ್ತು ಸಾವಿರಕ್ಕೂ ಅಧಿಕ ಕಂಬಗಳಿವೆ. ಪ್ರತಿಯೊಂದನ್ನೂ  ಎಂಜಿನಿಯರ್‌ಗಳು ತಮಗೆ ಸೂಚಿಸಿದ ಪದ್ಧತಿಯಲ್ಲೇ ಪರೀಕ್ಷೆ ನಡೆಸಿರು ತ್ತಾರೆ. ಅಷ್ಟಾದರೂ, ಕಣ್ತಪ್ಪಿನಿಂದ ಇಂತಹ ಲೋಪ ಆಗಿರುವ ಸಾಧ್ಯತೆ ಇದೆ.  ಇನ್ನು ಪ್ರತಿ  ಯೊಂದು ಕಂಬ ವನ್ನು ರೈಲ್ವೆ ಸುರಕ್ಷತಾ ಆಯು ಕ್ತರು ಪರಿ ಶೀಲನೆ ಮಾಡಲಾಗದು.

ಒಂದು ಮಾದರಿ ಯನ್ನು ಆ ಅಧಿಕಾರಿಗಳು  ಪರಿಶೀಲಿಸ ಬಹುದು. ಅದೇನೇ ಇರಲಿ, ಘಟನೆಗೆ ಹೊಣೆಗಾರರನ್ನು ಹುಡುಕುವ ಬದಲಿಗೆ ಪರೀಕ್ಷಾ ವಿಧಾನಗಳನ್ನು ಮತ್ತಷ್ಟು  ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಪುನರಾವರ್ತನೆ ಆಗದಂತೆ ಉಳಿದೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೆಸರು  ಹೇಳ ಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

ಕಾಂಕ್ರೀಟ್‌ ಶಿಥಿಲಗೊಂಡಿರುವ ಸಾಧ್ಯತೆ: ನಿಗಮದ ಮೂಲಗಳ ಪ್ರಕಾರ, ಟ್ರಿನಿಟಿ ನಿಲ್ದಾಣದ ಸಮೀಪದ ವಯಾಡಕ್ಟ್ ಕೆಳಗೆ ಅಳವಡಿಸಲಾಗಿರುವ ನಾಲ್ಕು  ಗರ್ಡರ್‌ಗಳನ್ನು ಜೋಡಿಸಿ ಹಾಕಲಾಗಿ ರುವ 200 ಟನ್‌ ತೂಕದ ಡಯಾಫ್ರೆಮ್‌ (diaphragm)ನಲ್ಲಿ ಕಾಂಕ್ರೀಟ್‌ ಶಿಥಿಲಗೊಂಡಿರುವ ಸಾಧ್ಯತೆ ಇದೆ. 

ಪರಿಣಾಮ ಆ ಕಾಂಕ್ರೀಟ್‌ ಮೇಲಿದ್ದ ಬೇರಿಂಗ್‌ ಸುಮಾರು 15 ಮಿ.ಮೀ.ನಷ್ಟು ಕೆಳಗೆ ಕುಸಿದಿದೆ. ಅದಕ್ಕೆ ಕಬ್ಬಿಣದ ಕಂಬಿಗಳನ್ನು ಆಧಾರವಾಗಿ  ಇಡಲಾಗಿದೆ. ಇನ್ನು ಆ ಮಾರ್ಗದಲ್ಲಿ ರೈಲು ಹಾದುಹೋದಾಗ, ಅದರ ಭಾರ ಕಂಬದ ಮೇಲೆ ಬೀಳುವ ಕಾರಣ, ಉದ್ದೇಶಿತ ಮಾರ್ಗದಲ್ಲಿ ಗಂಟೆಗೆ ಕೇವಲ  20 ಕಿ.ಮೀ. ವೇಗದಲ್ಲಿ ಮೆಟ್ರೋ ಸಂಚರಿಸುತ್ತಿದೆ. 

ಸಾಮಾನ್ಯವಾಗಿ ಮೆಟ್ರೋ ಮಾರ್ಗದಲ್ಲಿ ಪ್ರಿ-ಕಾಸ್ಟ್‌ ಸ್ಪ್ಯಾನ್‌ (ಮೊದಲೇ ನಿರ್ಮಿಸಿದ  ವಯಾಡಕ್ಟ್ಗಳು)ಗಳನ್ನು ಹಾಕಲಾಗುತ್ತದೆ. ಆದರೆ, ಮೊದಲ ಹಂತದ ರೀಚ್‌-1 (ಎಂ.ಜಿ. ರಸ್ತೆ-ಬೈಯಪ್ಪನಹಳ್ಳಿ) ಮತ್ತು 2 (ಕುಷ್ಟರೋಗ ಆಸ್ಪತ್ರೆ-ಮೈಸೂರು  ರಸ್ತೆ)ರಲ್ಲಿ ನಿಲ್ದಾಣಗಳ ಅಂಚಿನಲ್ಲಿ ಸಣ್ಣ ಸ್ಪ್ಯಾನ್‌ಗಳನ್ನು ಅಲ್ಲಿಯೇ “ಮೋಲ್ಡ್‌’ ಮಾಡಿ ನಿರ್ಮಿಸಲಾಗಿದೆ. ಇದು ದೆಹಲಿ ಮೆಟ್ರೋದ ಮಾದರಿ.  ಈಗ ಈ ಪದ್ಧತಿಯನ್ನು ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  

ದೆಹಲಿ ಮೆಟ್ರೋ ವಯಾಡಕ್ಟ್‌ನಲ್ಲೂ ಕಾಣಿಸಿತ್ತು ಸಮಸ್ಯೆ: ಈ ಹಿಂದೆ ದೆಹಲಿ ಮೆಟ್ರೋದ ವಯಾಡಕ್ಟ್‌ನಲ್ಲಿ ಕೂಡ ಸಮಸ್ಯೆ ಕಾಣಿಸಿಕೊಂಡಿತ್ತು. ಏರ್‌ಪೋರ್ಟ್‌ ಮಾರ್ಗದ ಮೆಟ್ರೋ ಸೇತುವೆಯ ವಯಾಡಕ್ಟ್ ಮತ್ತು ಕಂಬದ ನಡುವಿನ ಬೇರಿಂಗ್‌ ಕಿತ್ತು ಹೊರ ಬಂದಿತ್ತು. ಇದರಿಂದ ಏರ್‌ಪೋರ್ಟ್‌ ಮಾರ್ಗದ ಮೆಟ್ರೋ ಸೇವೆ ಕೆಲ ದಿನಗಳ ಮಟ್ಟಿದೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ದೆಹಲಿ ಮೆಟ್ರೋದಲ್ಲಿ ಆಗ ಕಾಣಿಸಿಕೊಂಡಿದ್ದ ಸಮಸ್ಯೆಗೆ ಹೋಲಿಸಿದರೆ, “ನಮ್ಮ ಮೆಟ್ರೋ’ದಲ್ಲಿ ಈಗ ಉದ್ಭವಿಸಿರುವ ಸಮಸ್ಯೆಯ ಗಂಭೀರತೆ ತೀವ್ರ ಸ್ವರೂಪದ್ದಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

BJP-BYV–Muni

Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

BJP-BYV–Muni

Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.