ಸಾಯಲೆಂದೇ ಹೂ ಬಿಟ್ಟ ಸೆಂಚುರಿ ಪಾಮ್
Team Udayavani, Feb 2, 2017, 12:04 PM IST
ಬೆಂಗಳೂರು: ದೀಪ ನಂದಿ ಹೋಗುವ ಮುನ್ನ ಜೋರಾಗಿ ಉರಿಯುತ್ತದೆ ಎಂಬ ಗಾದೆ ಮಾತು ಅಕ್ಷರಶಃ “ಸೆಂಚೂರಿ ಪಾಮ್’ ಮರಕ್ಕೆ ಅನ್ವಯಿಸುತ್ತದೆ. ಸೆಂಚೂರಿ ಪಾಮ್ ಮರ ಹೂವು ಬಿಟ್ಟು ಸುಂದರವಾಗಿ ಕಂಗೊಳಿಸುತ್ತಿದೆ ಎಂದರೆ ಆ ಮರಕ್ಕೆ ಅದುವೇ ಕೊನೆಗಾಲ. ಹೌದು. ನಗರದಲ್ಲಿ ಬೇರೆಲ್ಲೂ ಕಾಣ ಸಿಗದ ಈ ಸೆಂಚೂರಿ ಪಾಮ್ ಮರ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮಾತ್ರ ಇದೆ.
ಹೆಸರೇ ಹೇಳುವಂತೆ ಈ ಮರದ ಆಯಸ್ಸು ನೂರು ವರ್ಷ. ಲಾಲ್ ಬಾಗ್‌ನಲ್ಲಿ ಈ ಜಾತಿಯ ಸುಮಾರು 15 ಮರಗಳಿದ್ದು ಈಗ ಬ್ಯಾಂಡ್‌ಸ್ಟಾಂಡ್, ಲಾಲ್‌ಬಾಗ್ ನಿರ್ದೇಶಕ ಕಚೇರಿ ಮತ್ತು ಕೃಂಬಿಗಲ್ ಹಾಲ್ ಸಮೀಪವಿರುವ ಮೂರು ಸೆಂಚೂರಿ ಪಾಮ್ ಮರಗಳು ಹೂವು ಬಿಟ್ಟಿವೆ. ಒಂದೆಡೆ ಹೂವು ಕಂಡು ಸಂತಸವಾದರೆ, ಮತ್ತೂಂದೆಡೆ ಮರಗಳ ಅವಸಾನ ಪರಿಸರ ಪ್ರೇಮಿಗಳಲ್ಲಿ ನಿರಾಸೆ ಮೂಡಿಸುತ್ತದೆ.
ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಹೂವು ಬಿಟ್ಟರು ಅದು ವರ್ಷವಿಡೀ ಮರದಲ್ಲಿ ಕಂಗೊಳಿಸುತ್ತದೆ. ಹಳದಿ ಮಿಶ್ರಿತ ತಿಳಿ ಬಣ್ಣದ ಹೂವುಗಳ ಗೊಂಚಲು ನೋಡಲು ಬಲು ಆಕರ್ಷಣೀಯ. ಮರದ ತುಂಬಾ ಹೂವಿದ್ದು, ಗಾಳಿಗೆ ಉದುರಿದ ಪುಷ್ಪಗಳು ಹೂವಿನ ಹಾಸಿಗೆಯನ್ನೇ ಹಾಸಿದಂತೆ ಕಂಗೊಳಿಸಿ ಸೆಳೆಯುತ್ತವೆ. ಆದರೆ, ನಂತರ ಮರದ ಅವಸಾನ ಪ್ರಾರಂಭವಾಗುತ್ತದೆ.
ಶ್ರೀಲಂಕಾದ ರಾಷ್ಟ್ರೀಯ ಮರ ಇದು: ಶ್ರೀಲಂಕಾ ಮೂಲದ ಈ ಮರಗಳು ಪಾಮ್ ಜಾತಿಗೆ ಸೇರಿದವು. ಸುಮಾರು 80 ರಿಂದ 100 ವರ್ಷ ಆಯಸ್ಸು. ಈ ಮರ ನಿಜಕ್ಕೂ ಸಸ್ಯಶಾಸ್ತ್ರದ ಅದ್ಭುತ ಎಂದು ವರ್ಣಿಸಲಾಗಿದೆ. ಸುಮಾರು 50ರಿಂದ 75 ಅಡಿಗಳವರೆಗೆ ಬೆಳೆಯುವ ಸೆಂಚುರಿ ಪಾಮ್ ಶ್ರೀಲಂಕಾದ ರಾಷ್ಟ್ರೀಯ ಮರ. ಇದರ ವೈಜ್ಞಾನಿಕ ಹೆಸರು ಕೊರಿಫಾ ಅಂಬ್ರಾಕ್ಯುಲಿಫೆರಾ. ಇಷ್ಟೊಂದು ವೈವಿಧ್ಯಮಯವಾದ ಮರಗಳನ್ನು ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳ ಹಿಂದೆಯೇ ಬೆಳೆಸಲಾಗಿದ್ದು, ಮೂರು ಮರಗಳಿಗೆ ಶತಾಯಸ್ಸು.
ಲಾಲ್‌ಬಾಗ್‌ನಲ್ಲಿ ಸುಮಾರು 15 ಸೆಂಚೂರಿ ಪಾಮ್ ಗಿಡಗಳಿವೆ. ಅವುಗಳನ್ನು ಸೀತಾಳೆ ಎಂದು ಕೂಡ ಕರೆಯುತ್ತಾರೆ. ನೋಡಲು ತಾಳೆ ಮರದಂತೆ ಕಂಡರೂ ಅತ್ಯಂತ ವಿಶಿಷ್ಟವಾದ ಮರ. ಗೊಂಚಲು ಗೊಂಚಲು ಹೂವು ಬಿಟ್ಟು ಸೆಳೆಯುವ ಈ ಮರ ನಂತರ ಸಾಯುತ್ತದೆ ಎನ್ನುವುದೇ ವಿಪರ್ಯಾಸ. ಇಂತಹ ವಿಶಿಷ್ಟ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ಕಾಣಬಹುದು.
-ಚಂದ್ರಶೇಖರ್, ಉಪ ನಿರ್ದೇಶಕ, ಲಾಲ್‌ಬಾಗ್.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.