ಒಬ್ಬ ವೈದ್ಯನ ತಪ್ಪಗೆ ಎಲ್ಲರಿಗೂ ದೂಷಣೆಗೆ ಏಕೆ?
Team Udayavani, Jun 23, 2017, 12:17 PM IST
ಮಹದೇವಪುರ: “ಯಾರೋ ಒಬ್ಬ ವೈದ್ಯ ಮಾಡುವ ತಪ್ಪಿಗೆ ಎಲ್ಲಾರನ್ನೂ ಕೆಟ್ಟ ದೃಷ್ಟಿಯಿಂದ ನೋಡುವುದು ಸಮಂಜಸವಲ್ಲ,’ ಎಂದು ಆಕ್ಸಿಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಾಂಭಶಿವ ಬೇಸರ ವ್ಯಕ್ತಪಡಿಸಿದ್ದಾರೆ.
ಹೂಡಿ ವಾರ್ಡ್‌ನ ಬೆಳತೂರು ಬಳಿ ಆರಂಭವಾದ ನೂರು ಹಾಸಿಗೆಗಳ “ಆಕ್ಸಿಸ್ ಆಸ್ಪತ್ರೆ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಇತ್ತೀಚೆಗೆ ಆಸ್ಪತ್ರೆಗಳು ದರ ಪಟ್ಟಿ ಪ್ರಕಟಿಸಬೇಕು ಎಂಬ ವಿದೇಯಕ ಜಾರಿಗೆ ತರಲು ನಿರ್ಧರಿಸಿದೆ. ಯಾವುದೋ ಆಸ್ಪತ್ರೆಯಲ್ಲಿನ ಒಬ್ಬ ವೈದ್ಯ ತಪ್ಪು ಮಾಡಿದ್ದಕ್ಕೆ ಎಲ್ಲರನ್ನೂ ತಪ್ಪು ದೃಷ್ಟಿಯಿಂದ ನೋಡುವುದು,’ ಸರಿಯಲ್ಲ ಎಂದು ಅವರು ಹೇಳಿದರು.
ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ತುಮಕೂರಿನ ಸಿದ್ಧಗಂಗ ಮಠದ ಸಿದ್ದಲಿಂಗಸ್ವಾಮಿ “ಆಸ್ಪತ್ರೆಗಳು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸ ಬೇಕು. ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಸದೃಢರಾಗುವಂತೆ ಮಾಡಬೇಕು. ಬಡ ರೋಗಿಗಳೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಬೇಕು,’ ಎಂದು ಸಲಹೆ ನೀಡಿದರು.
ಹೃದ್ರೋಗ, ಕಾರ್ಡಿಯೋಥೊರಾಸಿಸ್ ಶಸ್ತ್ರ ಚಿಕಿತ್ಸೆ, ನರವಿಜಾnನ, ನೇತ್ರವಿಜಾನ, ಮೂಳೆ ಚಿಕಿತ್ಸೆ, ಶಿಶು ಆರೈಕೆ, ಪ್ಲಾಸ್ಟಿಕ್ ಸರ್ಜರಿ, ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಮುಂತಾದ ಚಿಕಿತ್ಸೆಗಳು ಈ ಆಸ್ಪತ್ರೆಯಲ್ಲಿ ಸಿಗಲಿದೆ ಎಂದು ಡಾ.ಮಹಂತೇಶ್ ತಿಳಿಸಿದರು. ಪಾಳಿಕೆ ಸದಸ್ಯ ಎ.ಸಿ.ಹರಿಪ್ರಸಾದ್, ಡಾ, ಶ್ರೀನಿವಾಸ್, ಡಾ. ಶ್ರೀಹರಿ, ಡಾ. ರಾಜಣ್ಣ, ಡಾ. ಶ್ರೀಸಾಯಿ ಪ್ರಸಾದ್ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.