ಬೆಂಗಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆಗೆ ಸಾರ್ವಜನಿಕ ಆಹ್ವಾನ: ಪತಿಯಿಂದಲೇ ವಿಡಿಯೋ ಚಿತ್ರೀಕರಣ!
Team Udayavani, Feb 4, 2022, 1:35 PM IST
ಬೆಂಗಳೂರು: ತನ್ನ ಹೆಂಡತಿಯತ್ತ ಕೆಟ್ಟ ದೃಷ್ಟಿ ಬೀರಿದರೆ ಅವರ ಮೇಲೆ ಹಗೆ ಸಾಧಿಸುವ ಜನರ ಬಗ್ಗೆ ನಾವು ಸುದ್ದಿಗಳನ್ನು ಕೇಳಿರುತ್ತೇವೆ. ಪತ್ನಿಯ ಮೇಲೆ ಕಣ್ಣು ಹಾಕಿದ ವಿಚಾರಕ್ಕೆ ಕಲಹ- ಕಾಳಗಗಳೇ ನಡೆದಿದೆ. ಆದರೆ ತನ್ನ ಹೆಂಡತಿಯನ್ನು ಬೇರೊಬ್ಬನ ಜೊತೆ ಲೈಂಗಿಕ ದಂಧೆಗೆ ಇಳಿಸಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡುವ ವಿಲಕ್ಷಣ ಮನಸ್ಥಿತಿಯ ಬಗ್ಗೆ ಕೇಳಿದ್ದೀರಾ? ಇಂಥಹ ಘಟನೆಯೊಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ತಾಳಿ ಕಟ್ಟಿಸಿಕೊಂಡ ಹೆಂಡತಿಯನ್ನೇ ಪರಪುರುಷರ ಜೊತೆ ಲೈಂಗಿಕ ಕ್ರಿಯೆ ಮಾಡಿಸಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹಣ ಮಾಡುವ ದಾರಿ ಕಂಡುಕೊಂಡಿದ್ದ ವ್ಯಕ್ತಿಯೋರ್ವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ‘ವೈಫ್ ಸ್ವಾಪಿಂಗ್’ ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಅಹ್ವಾನ ನೀಡಿ ದಂಧೆ ನಡೆಸುತ್ತಿದ್ದಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಲೇ ವೃದ್ಧೆಯನ್ನ ಸಾಯಿಸಿದ ಸಂಬಂಧಿಕರು
ಕೆಲ ದಿನಗಳ ಹಿಂದೆ ಕೇರಳ ರಾಜ್ಯದಲ್ಲಿ ಸುದ್ದಿಯಾಗಿದ್ದ ‘ವೈಫ್ ಸ್ವಾಪಿಂಗ್’ ದಂಧೆ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮಂಡ್ಯ ಮೂಲದ ವಿನಯ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಪತ್ನಿಯೂ ಒಪ್ಪಿದ್ದಳು!
ಮಂಡ್ಯ ಮೂಲದ ವಿನಯ್ ಕುಮಾರ್, ಎಲೆಕ್ಟ್ರಾನಿಕ್ ಶಾಪೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ. ಮಾಗಡಿಯ ಶಿಲ್ಪಾ (ಹೆಸರು ಬದಲಿಸಲಾಗಿದೆ) ಕೂಡಾ ಅಲ್ಲೇ ಕೆಲಸ ಮಾಡುತ್ತಿದ್ದಳು. ಈ ವೇಳೆ ಪ್ರೀತಿಸಿ 2019ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ಸಿಂಗಸಂದ್ರದಲ್ಲಿ ವಾಸವಾಗಿದ್ದ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಪೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ ಆರೋಪಿ ವಿನಯ್ ಕೆಲವು ವಿಡಿಯೋಗಳನ್ನು ನೋಡಿ ಪ್ರೇರಣೆಗೊಂಡು ಪತ್ನಿಗೂ ತೋರಿಸಿದ್ದ. ಆಕೆಯನ್ನು ಒಪ್ಪಿಸಿ ಮುಖ ಚಹರೆ ಬರದ ಹಾಗೇ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ಹಂತದಲ್ಲಿ ಪತ್ನಿಯನ್ನು ಪ್ಯಾಂಟಸಿ ಲೈಂಗಿಕ ಕ್ರಿಯೆಗೆ ಒಳಪಡಿಸುವ ಇಂಗಿತ ವ್ಯಕ್ತಪಡಿಸಿದ್ದ.
ಇದನ್ನೂ ಓದಿ:ಹಿಜಾಬ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು, ಎಲ್ಲೂ ಸಮವಸ್ತ್ರ ಕಡ್ಡಾಯ ಮಾಡಿಲ್ಲ: ಸಿದ್ದರಾಮಯ್ಯ
ವಿಚಿತ್ರ ಎಂದರೆ ಪತಿಯ ಈ ವಿಚಿತ್ರ ಆಸೆಗೆ ಪತ್ನಿಯೂ ಸಮ್ಮತಿ ನೀಡಿದ್ದಳು. ‘ಹೈಟೆಕ್ ಮಾದರಿಯಲ್ಲಿ ವೈಫ್ ಸ್ವಾಪಿಂಗ್ ಗೆ ಅಸ್ತು ಎಂದಿದ್ದಳು. ಗಂಡ ಟೆಲಿಗ್ರಾಂ ಮೂಲಕ ದಂಧೆಯ ಬಗ್ಗೆ ಹಲವರಿಗೆ ಮಾಹಿತಿ ನೀಡುತ್ತಿದ್ದ. ನಂತರ ಸ್ನೇಹಿತನೊಬ್ಬನ ಸೂಚನೆ ಮೇರೆಗೆ ಇತ್ತೀಚೆಗೆ ಟ್ವಿಟರ್ ನಲ್ಲಿ ಜಾಹ್ನವಿ ಹೆಸರಿನಲ್ಲಿ ಖಾತೆ ತೆರೆದು ವೈಫ್ ಸ್ವಾಪಿಂಗ್ ಬಗ್ಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದ.
ಟ್ವಿಟ್ಟರ್ ನಲ್ಲಿ ವೈಫ್ ಸ್ವಾಪಿಂಗ್ ಆಹ್ವಾನದ ಬಗ್ಗೆ ತಿಳಿದ ಸಾರ್ವಜನಿಕರೊಬ್ಬರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಡ್ಯ ಮೂಲದ ವಿನಯ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವು ತಿಂಗಳಿಂದ ಪ್ಯಾಂಟಸಿಗಾಗಿ ದಂಧೆ ನಡೆಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಲವ್ ವಿಡಿಯೋ ಮಾಡುತ್ತಿದ್ದ
ಸಾಮಾಜಿಕ ಜಾತಾಣಗಳಲ್ಲಿನ ಮಾಹಿತಿ ಕಂಡು ಹಲವು ಗ್ರಾಹಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಬಳಿಕ ಸಿಂಗಸಂದ್ರ ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಿದ್ದ ವಿನಯ್ ತನ್ನದೇ ಪತ್ನಿಯ ಜೊತೆ ಪರ ಪುರುಷ ಲೈಂಗಿಕ ಕ್ರಿಯೆ ಮಾಡುವಾಗ ಲೈವ್ ವಿಡಿಯೋ ಮಾಡಲು ಮುಂದಾಗುತ್ತಿದ್ದ
ಗ್ರಾಹಕರು ಒಪ್ಪಿಕೊಂಡರೆ ಮೊಬೈಲ್ ನಲ್ಲಿ ವಿಡಿಯೋ ಮಾಡಿ ತನ್ನ ವಿಕೃತ ಬಯಕೆ ಈಡೇರಿಸಿಕೊಂಡಿದ್ದ. ಅದಲ್ಲದೆ ಹಣಕ್ಕಾಗಿ ಗ್ರಾಹಕರಿಗೆ ಹೆಚ್ಚಿನ ಬೇಡಿಕೆ ನೀಡದೆ ಅವರು ನೀಡುವ ಹಣ ಪಡೆದುಕೊಂಡು ತೃಪ್ತನಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.