ಅಂಚೆ ಕಚೇರಿಗಳಲ್ಲಿ ವೈಫೈ ಸೌಲಭ್ಯ
Team Udayavani, Mar 6, 2019, 6:20 AM IST
ಬೆಂಗಳೂರು: ದೇಶದ ಎಲ್ಲ ಅಂಚೆ ಕಚೇರಿಗಳಲ್ಲೂ 2020ರ ವೇಳೆ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರದ ಅಂಕಿ- ಅಂಶ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಅಂಚೆ ವಿಭಾಗದಿಂದ ಮಂಗಳವಾರ ಜಾಲಹಳ್ಳಿ ಮುಖ್ಯ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ಸೇವೆ, ವಿಮಾ ಯೋಜನೆ, ಆಯುಷ್‌ಮಾನ್ ಭಾರತ್ ಸೇರಿದಂತೆ ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳನ್ನು ಅಂಚೆ ಕಚೇರಿ ಮೂಲಕ ದೇಶ ಜನತೆಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಅಂಚೆ ಕಚೇರಿಯ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಂಪರ್ಕಿಸುವುದು ಸುಲಭ. ಆಡಳಿತ ಯಂತ್ರ ಮತ್ತು ಜನತೆಯೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅಂಚೆ ಇಲಾಖೆಯ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, 2020ರ ವೇಳೆಗೆ ದೇಶದ ಎಲ್ಲ ಅಂಚೆ ಕಚೇರಿಗಳಲ್ಲೂ ವೈಪೈ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ ಎಂದರು.
ಜಾಲಹಳ್ಳಿಯಲ್ಲಿ ತೆರೆಯಲಾಗಿರುವ ಪಾಸ್‌ಪೋರ್ಟ್ ಕೇಂದ್ರದಲ್ಲಿ ಈಗ ಒಂದು ದಿನಕ್ಕೆ 20 ಜನರಿಗೆ ಪಾಸ್‌ಪೋರ್ಟ್ ಸೇವೆ ಒದಗಿಸಬಹುದು. ಮುಂದಿನ ದಿನದಲ್ಲಿ 80 ಜನರಿಗೆ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು. ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿ ಭರತ್‌ಕುಮಾರ್ ಕುಥಟಿ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.