ಗಣರಾಜ್ಯೋತ್ಸವದಲ್ಲಿ ಕರುನಾಡ ಜೀವವೈಭವ
Team Udayavani, Jan 18, 2018, 6:00 AM IST
ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದ ಪಶ್ಚಿಮಘಟ್ಟದ ಜೀವವೈವಿಧ್ಯತೆಯ ಪ್ರತಿರೂಪ ಅನಾವರಣಗೊಳ್ಳಲಿದೆ. ಪಥ ಸಂಚಲನದ ರಾಜಮಾರ್ಗದಲ್ಲಿ ಹುಲಿ, ಸಿಂಹ, ಆನೆ ಸೇರಿದಂತೆ ಪ್ರಾಣಿಗಳ ಧ್ವನಿ, ಪಕ್ಷಿಗಳ ನೀನಾದದ ಹಿಮ್ಮೇಳವೂ ಮೊಳಗಲಿದೆ.
ರಾಜ್ಯದ ಪರಿಸರ ಮತ್ತು ವನ್ಯಜೀವಿಯ ಶ್ರೀಮಂತಿಕೆಯನ್ನು ಗಣರಾಜ್ಯೋತ್ಸವದ ಮೂಲಕ ವಿಶ್ವಕ್ಕೆ ಪರಿಚಯಿಸುವ ಪ್ರಯತ್ನವಾಗಿ ಕರ್ನಾಟಕದ ವನ್ಯಜೀವಿ ಸಂಪತ್ತಿನ ವೈಭವ ಸಾರುವ ಪರಿಕಲ್ಪನೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಾರಿಯ ಸ್ತಬ್ಧಚಿತ್ರ ನಿರ್ಮಿಸುತ್ತಿದೆ. ಖ್ಯಾತ ಕಲಾವಿದ ಶಶಿಧರ ಅಡಪ ಮಾರ್ಗದರ್ಶನದಲ್ಲಿ ಪ್ರತಿರೂಪಿ ತಂಡ ಸ್ಥಬ್ಧಚಿತ್ರ ತಯಾರಿಯಲ್ಲಿದ್ದು, ಪ್ರವೀಣ್ ರಾವ್ ಅವರ ಹಿನ್ನೆಲೆ ಸಂಗೀತವೂ ಇದೆ.
50 ಲಕ್ಷ ರೂ. ವೆಚ್ಚದಲ್ಲಿ ಸ್ಥಬ್ಧಚಿತ್ರ ನಿರ್ಮಾಣವಾಗುತ್ತಿದ್ದು, ಜ.24 ರಂದು ತಾಲೀಮು ನಡೆಯಲಿದೆ.
ಕರ್ನಾಟಕದ ರಾಷ್ಟ್ರೀಯ ಉದ್ಯಾವನಗಳು, ದೇಶದ ಶೇ.70 ರಷ್ಟು ಹುಲಿ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಐದನೇ ಸ್ಥಾನ ಪಡೆದಿರುವುದು ಸ್ಥಬ್ಧ ಚಿತ್ರದಲ್ಲಿ ಬಿಂಬಿತವಾಗಲಿದೆ. ಜತೆಗೆ ಕರ್ನಾಟಕದ ಪಕ್ಷಿ ಪ್ರಪಂಚದ ಹೆಮ್ಮೆಯಾದ ರಾಷ್ಟ್ರೀಯ ಪಕ್ಷಿ ನವಿಲು, ಹಾರ್ನ್ಬಿಲ್ (ಮಂಗಟ್ಟೆ), ಕಿಂಗ್ ಫಿಶರ್ (ಮಿಂಚುಳ್ಳಿ) ಹಕ್ಕಿಗಳ ಪ್ರತಿರೂಪ ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.