ದೌರ್ಜನ್ಯಗಳನ್ನು ಎದುರಿಸುವ ಧೈರ್ಯ ಹೆಣ್ಣುಮಕ್ಕಳಿಗೆ ಅಗತ್ಯ
Team Udayavani, Mar 15, 2017, 11:45 AM IST
ಯಲಹಂಕ: “ಮಹಿಳಾ ಸಬಲೀಕರಣಕ್ಕೆ ಶಿಕ್ಷಣ, ಸ್ವಾವಲಂಬನೆ, ಸ್ವಾಸ್ಥ್ಯ, ಸಂವೇದನೆ, ಸಮಾಜಿಕ ನ್ಯಾಯ ಅತ್ಯವಶ್ಯಕ. ಜತೆಗೆ ಹೆಣ್ಣು ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸುವ ಮತ್ತು ಎದುರಿಸುವ ಮನೋಭಾವ ಹೊಂದಬೇಕು,” ಎಂದು ವೈದ್ಯೆ ಡಾ.ರಕ್ಷಾಆನಂದ್ ಹೇಳಿದರು.
ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಪಾಂಚಜನ್ಯ ಪ್ರತಿಷ್ಠಾನದಿಂದ “ವಿದ್ಯಾರ್ಥಿನಿಯರ ಸ್ವಾಸ್ಥ್ಯ ಸಲಹೆ – ಸಂವಾದ’ದಲ್ಲಿ ಮಾತನಾಡಿದ ಅವರು “ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಆತ್ಮಹತ್ಯೆ, ಹದಿಹರೆಯದ ಸಮಸ್ಯೆ, ಮಾದಕವಸ್ತುಗಳಿಗೆ ಬಲಿ ಸೇರಿ ಲಿಂಗ ಸಮಾನತೆ ಇಲ್ಲದೆ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.
ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳು ದೌರ್ಜನ್ಯವನ್ನು ಪ್ರಶ್ನಿಸುವ ಮನೋಭಾ ವವನ್ನು ಬೆಳೆಸಿಕೊಳ್ಳಬೇಕು,” ಎಂದರು. ಹದಿಹರೆಯದ ಸಮಸ್ಯೆಗಳ ಕುರಿತು ಮಾತನಾಡಿದ ವೈದ್ಯ ಡಾ. ಕಾರ್ತೀಕ್ ವಿ ಬಾದರಾಯಣ್, “ಹದಿಹರೆಯದಲ್ಲಿ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಮಕ್ಕಳು ಖನ್ನತೆಗೆ ಒಳಗಾಗಿ ಮೂಲ ಪ್ರತಿಭೆಯ ಅನಾವರಣಕ್ಕೆ ತೊಂದರೆ ಅನುಭವಿಸುತ್ತಾರೆ,” ಎಂದರು.
ವೈಯಕ್ತಿಕ ಸ್ವಚ್ಚತೆ, ದೈಹಿಕ ಬೆಳವಣಿಕೆ, ಖುತುಚಕ್ರ, ಗರ್ಭಕೋಶ ಹಾಗೂ ಸ್ಥನ ಕ್ಯಾನ್ಸರ್, ಮಗು ಬೆಳವಣಿಗೆಗಳ ಕುರಿತು ಅವರು ಉಪನ್ಯಾಸ ನೀಡಿದರು. ವಿದ್ಯಾರ್ಥಿನಿಯರು ವೈದ್ಯರೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು. ವಿದ್ಯಾರ್ಥಿನಿಯರಿಗೆ ಅಗತ್ಯವಾದ ಶೌಚಾಲಯ ಕಿಟ್ ಅನ್ನು ಸಂವಾದದಲ್ಲಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಓಂಕಾರ್ ನಾಯ್ಕರವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.