ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಬಿರುಸಿನ ಸ್ಪರ್ಧೆ ನೀಡಬೇಕು : ಸಿಎಂ ಬೊಮ್ಮಾಯಿ
Team Udayavani, Oct 4, 2021, 8:55 PM IST
ಬೆಂಗಳೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಇಂದು ಎಫ್ಐಸಿಸಿಐ, ಫೆಡರೇಶನ್ ಆಫ್ ಲೇಡೀಸ್ ಆರ್ಗನೈಜೇಶನ್ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿನ ಎಲ್ಲಾ ಮಹಿಳೆಯರು ದುಡಿಯುವಂತಾಗಬೇಕು. ದುಡಿಯುವ ಕೈಗಳು ಹೆಚ್ಚಾದರೆ ದೇಶದ ಆರ್ಥಕತೆ ಕೂಡ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಹಿಳಾ ಉದ್ಯಮಿಗಳ ಪರವಾಗಿ ಇರುತ್ತದೆ. ಸರ್ಕಾರ ನೀಡುವ ಹಲವು ಸಬ್ಸಿಡಿ ಮತ್ತು ಸವಲತ್ತುಗಳನ್ನು ಪಡೆದು ಮಹಿಳೆಯರು ಸಾಧನೆ ಮಾಡಬೇಕು. ಸಾಧನೆಯನ್ನು ಯಶಸ್ಸಿನ್ನಾಗಿ ಪರಿವರ್ತಿಸಬೇಕು. ಎಲ್ಲಾ ಮಹಿಳೆಯರು ಯಶಸ್ವಿ ಆಗಬೇಕು ಎಂದು ಅವರು ಕರೆ ನೀಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಹೆಚ್ಚಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆಗ ದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಮಹಿಳೆಯರು ಪುರುಷರಿಗಿಂತ ಸೂಕ್ಷ್ಮಜೀವಿಗಳು. ಆದರೆ ಅಷ್ಟೇ ಶಕ್ತಿಶಾಲಿ ಕೂಡ ಹೌದು. ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವಂತಹ ಶಕ್ತಿ ಇರುವುದು ಮಹಿಳೆಯರಿಗೆ ಮಾತ್ರ. ಪುರುಷರಿಗೆ ಆ ಶಕ್ತಿ ಇಲ್ಲ. ಹೀಗಾಗಿ ಮಹಿಳಾ ಶಕ್ತಿ ಮತ್ತಷ್ಟು ಹೆಚ್ಚಬೇಕಾದರೆ ಆರ್ಥಿಕ ಸಬಲೀಕರಣ ಆಗಬೇಕು. ಹಣಕಾಸಿನ ವಿಚಾರದಲ್ಲಿ ಪುರುಷರ ಮೇಲೆ ಅವಲಂಬನೆ ಕಡಿಮೆ ಆಗಬೇಕು. ಮಹಿಳೆಯರು ಸಶಕ್ತರಾಗಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕು ಎಂಬ ಆಶಯವನ್ನು ಸಿಎಂ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಎಫ್ ಎಲ್ ಒ ಅಧ್ಯಕ್ಷೆ ರೇವತಿ ರಾಜು ಮತ್ತು ಹಲವಾರು ಜನ ಮಹಿಳಾ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಬಿರುಸಿನ ಸ್ಪರ್ಧೆ ನೀಡಬೇಕು. ಆಗ ಪುರುಷರೂ ಕೂಡ ಮಹಿಳೆಯರಿಗಿಂತ ಹೆಚ್ಚು ಪರಿಶ್ರಮ ಪಡುತ್ತಾರೆ. ಕೆಲಸ ಮಾಡುತ್ತಾರೆ. ಇದರಿಂದ ದೇಶ ಪ್ರಗತಿ ಆಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.