ಏರ್‌ಪೋರ್ಟಲ್ಲಿ ಮಹಿಳೆಯರ ಹವಾ


Team Udayavani, Mar 9, 2018, 11:52 AM IST

airport.jpg

ಬೆಂಗಳೂರು: ದಕ್ಷಿಣ ಭಾರತದ ಅತಿಹೆಚ್ಚು ವಿಮಾನಗಳ ದಟ್ಟಣೆ ಇರುವ ನಿಲ್ದಾಣ ಅದು. ಅಲ್ಲಿ ಗಂಟೆಗೆ ಸರಾಸರಿ 35 ವಿಮಾನಗಳು ಹಾರಾಡುತ್ತವೆ ಮತ್ತು 35 ಸಾವಿರ ಪ್ರಯಾಣಿಕರು ಬಂದು-ಹೋಗುತ್ತಾರೆ. ಪ್ರತಿ 50 ಸೆಕೆಂಡ್‌ಗಳ ಅಂತರದಲ್ಲಿ ವಿಮಾನಗಳ ಚಲನವಲನ ಅಲ್ಲಿರುತ್ತದೆ. ಗುರುವಾರ ಇದೆಲ್ಲದರ ರಿಮೋಟ್‌ ಕಂಟ್ರೋಲ್‌ ಇದ್ದದ್ದು ಮಹಿಳೆಯರ ಬೆರಳತುದಿಯಲ್ಲಿ!

ದೇಶ-ವಿದೇಶಗಳಿಂದ ಬರುವ ಲೋಹದ ಹಕ್ಕಿಗಳು ಕೆಳಗಿಳಿಯಲು ಮಹಿಳೆಯರ ಸೂಚನೆಗಾಗಿ ಕಾಯುತ್ತಿದ್ದವು. ಮತ್ತೆ ಆಗಸಕ್ಕೆ ಚಿಮ್ಮಲು ಮಹಿಳೆಯರ ಗ್ರೀನ್‌ ಸಿಗ್ನಲ್‌ನ ಎದುರು ನೋಡುತ್ತಿದ್ದವು. “ರೆಡ್‌ ಸಿಗ್ನಲ್‌’ ಬಿದ್ದರೆ ಜಾಗಬಿಟ್ಟು ಕದಲುತ್ತಿರಲಿಲ್ಲ. ಹೀಗೆ ಪ್ರತಿಯೊಂದೂ ಮಹಿಳೆಯ ಅಣತಿಯಂತೆ ನಡೆಯುತ್ತಿತ್ತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಕಂಡುಬಂದ ದೃಶ್ಯವಿದು. ವಿಶ್ವ ಮಹಿಳಾ ದಿನದ ಅಂಗವಾಗಿ ಮಾಹಿತಿ ಕೌಂಟರ್‌ನಿಂದ ಹಿಡಿದು ವಿಮಾನ ಹಾರಾಟದವರೆಗೂ ಪ್ರತಿಯೊಂದು ಮಹಿಳಾಮಯವಾಗಿತ್ತು. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ನಡೆದಿದ್ದು, ಇದನ್ನು ಮಹಿಳೆಯರು ಯಶಸ್ವಿಯಾಗಿ ಪೂರೈಸಿದರು. 

ಇಡೀ ನಿಲ್ದಾಣದಲ್ಲಿ ಒಟ್ಟಾರೆ ಸಿಬ್ಬಂದಿ ಪೈಕಿ ಮಹಿಳೆಯರ ಪ್ರಮಾಣ ಶೇ.15 ಮಾತ್ರ. ಅಂದರೆ, 36 ಮಹಿಳೆಯರು ನಿಲ್ದಾಣದ ಭದ್ರತೆ ಮತ್ತು ಸುರಕ್ಷತೆ, ವಿಚಕ್ಷಣೆ, ವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕ್‌ಆಫ್, ನಿಲುಗಡೆ ಹೀಗೆ ಎಲ್ಲ ಪ್ರಮುಖ ಜವಾಬ್ದಾರಿಗಳನ್ನು ಒಂದು ದಿನದ ಮಟ್ಟಿಗೆ ಸಮರ್ಥವಾಗಿ ನಿಭಾಯಿಸಿದರು.

ಭಯ ಇತ್ತು; ಆತ್ಮವಿಶ್ವಾಸವೂ ಇತ್ತು: ವಿಮಾನ ನಿಲ್ದಾಣ ನಿರ್ವಹಣಾ ನಿಯಂತ್ರಣ ಕೇಂದ್ರ (ಎಒಸಿಸಿ) ವಿಮಾನಗಳ ಸಂಚಾರ ನಾಡಿ. ಹಾಗಾಗಿ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದ್ದರಿಂದ ತುಸು ಭಯ ಇರುತ್ತದೆ. ಆದರೆ, ಆರು ತಿಂಗಳು ಮೊದಲೇ ತರಬೇತಿ ಪಡೆದಿದ್ದರಿಂದ ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದೆ,’ ಎಂದು ವಿಭಾಗದ ಮುಖ್ಯಸ್ಥೆ ಬೀನಾ ಜಯಚಂದ್ರನ್‌ ತಿಳಿಸಿದರು.

ಇರುವುದು ಒಂದೇ ರನ್‌ ವೇ. ಅದರಲ್ಲೇ ನಿತ್ಯ ಸರಾಸರಿ 660 ವಿಮಾನಗಳು ಹಾರಾಟ ನಡೆಸುತ್ತವೆ. “ಪೀಕ್‌ ಅವರ್‌’ನಲ್ಲಿ ಗಂಟೆಗೆ 35 ವಿಮಾನಗಳ ಚಲನ-ವಲನ ಇರುತ್ತದೆ. ಬಂದಿಳಿಯುವ ಮತ್ತು ಏರುವ ವಿಮಾನಗಳಿಗೆ ಎಟಿಎಂನಿಂದಲೇ (ಏರ್‌ ಟ್ರಾಫಿಕ್‌ ಮೂವ್‌ಮೆಂಟ್‌) ಸೂಚನೆಗಳು ಹೋಗಬೇಕು. 55 ಸೆಕೆಂಡ್‌ಗಳ ಅಂತರದಲ್ಲಿ ವಿಮಾನಗಳ ಚಲನ-ವಲನ ಇರುವುದರಿಂದ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ.

ಇದೊಂದು ಸವಾಲಿನ ಕೆಲಸ. ಸಾಮಾನ್ಯವಾಗಿ ಈ ವಿಭಾಗದಲ್ಲಿ ನಿತ್ಯ 5ರಿಂದ 6 ಜನ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲ 14 ಮಹಿಳೆಯರೂ ಮೊದಲ ಪಾಳಿಯಲ್ಲಿದ್ದೇವೆ ಎಂದು ಎಟಿಎಂ ಜಂಟಿ ಪ್ರಧಾನ ವ್ಯವಸ್ಥಾಪಕಿ ಜಮೀರಾ ಯಾಸಿನ್‌ ಹೇಳುತ್ತಾರೆ. 

ಸಮಯಪ್ರಜ್ಞೆ ಮೆರೆದ ಕನ್ನಡತಿ: ರನ್‌ವೇಯಲ್ಲಿ ಗುರುವಾರ ಬೆಳಗ್ಗೆ 11.34ರ ಸುಮಾರಿಗೆ ಬಂದಿಳಿದ ಸೌದಿಯಾ ವಿಮಾನ, ನಿಗದಿಪಡಿಸಿದ ದ್ವಾರದ ಬದಲಿಗೆ ಬೇರೊಂದು ನಿರ್ಗಮನ ದ್ವಾರದಲ್ಲಿ ತಿರುವು ಪಡೆಯಿತು. ಆದರೆ, ಅಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದುದರಿಂದ ಅಪಾಯದ ಸಂಭವವಿತ್ತು. ಆಗ ಸಮಯ ಪ್ರಜ್ಞೆ ಮೆರೆದು ಅಪಾಯ ತಪ್ಪಿಸಿದ್ದು ಅಪ್ಪಟ ಕನ್ನಡತಿ ರಚನಾ ಕಟ್ಟಿಮನಿ. ಸಾಮಾನ್ಯವಾಗಿ ಟ್ಯಾಕ್ಸಿ ವೇ ಅಲ್ಫಾ-4 ಅಥವಾ 5ರಲ್ಲಿ ನಿರ್ಗಮನ ದ್ವಾರ ಇರುತ್ತದೆ.

ಆದರೆ, ಸೌದಿಯಾ ವಿಮಾನ ಅಲ್ಫಾ-1ರಲ್ಲಿ ತಿರುವು ಪಡೆಯಿತು. ಅಲ್ಲಿ ಬಿಐಎಎಲ್‌ನಿಂದ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆ ಮಾರ್ಗದಲ್ಲೇ ವಿಮಾನ ಸಾಗಿದ್ದರೆ, ಅಲ್ಲಿ ಸಮಸ್ಯೆ ಆಗುತ್ತಿತ್ತು. ತಕ್ಷಣ ರಚನಾ ಎಟಿಸಿಗೆ ಸುದ್ದಿ ಮುಟ್ಟಿಸಿದರು. ನಂತರ “ಫಾಲೋ ಮಿ’ ಕಾರು ಸ್ಥಳಕ್ಕೆ ತೆರಳಿತು. ಕಾರನ್ನು ಹಿಂಬಾಲಿಸಿದ ವಿಮಾನ, ಸುರಕ್ಷಿತ ಸ್ಥಳಕ್ಕೆ ಬಂದು ನಿಂತಿತು. ಅಂದಹಾಗೆ ಈ ವಿಮಾನದಲ್ಲಿ 238 ಪ್ರಯಾಣಿಕರಿದ್ದರು.

ಸೆಲ್ಫ್ ಬ್ಯಾಗ್‌ ಡ್ರಾಪ್‌: ವಿಮಾನ ಪ್ರಯಾಣಿಕರು ಕೆಐಎಎಲ್‌ನಲ್ಲಿ ಬ್ಯಾಗ್‌ ಟ್ಯಾಗ್‌ ಸಲುವಾಗಿ ಇನ್ಮುಂದೆ ಕಾಯಬೇಕಿಲ್ಲ. ಇದಕ್ಕಾಗಿ “ಸೆಲ್ಫ್ ಬ್ಯಾಗ್‌ ಡ್ರಾಪ್‌’ ವ್ಯವಸ್ಥೆ ಪರಿಚಯಿಸಲಾಗಿದೆ. ಈ ಯಂತ್ರದಲ್ಲಿ ಸ್ವತಃ ಪ್ರಯಾಣಿಕರು ಮುದ್ರಿತ ಬ್ಯಾಗ್‌ ಟ್ಯಾಗ್‌ ಪಡೆದು, ಬ್ಯಾಗ್‌ಗೆ ಗಂಟು ಹಾಕಿ, ರೇಸ್‌ ಟ್ರ್ಯಾಕ್‌ನಲ್ಲಿ ಇಟ್ಟರೆ ಸಾಕು.

ಅಟೋಮೆಟಿಕ್‌ ಆಗಿ ತಪಾಸಣೆಗೊಳಪಟ್ಟು ಬ್ಯಾಗ್‌ ಹೊರಬರುತ್ತದೆ. ಇದರಿಂದ ಪ್ರಯಾಣಿಕರ ಸಮಯ ಅರ್ಧಕ್ಕರ್ಧ ಕಡಿಮೆ ಆಗುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆಗೆ 90 ಸೆಕೆಂಡ್‌ ಹಿಡಿಯುತ್ತದೆ. ಈಗ 45 ಸೆಕೆಂಡ್‌ ಸಾಕು ಎಂದು ಡೈಲಿ ಆಪರೇಷನ್ಸ್‌ ಪ್ರಧಾನ ವ್ಯವಸ್ಥಾಪಕ ಎಸ್‌.ವಿ. ಅರುಣಾಚಲಂ ತಿಳಿಸಿದರು.

* ವಿಜಯಕುಮಾರ ಚಂದರಗಿ 

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.