ಕಾರ್ಮಿಕರಿಗೆ ಬೇಡವಾದ ಫ್ರೀ ಪಾಸ್
Team Udayavani, Jun 17, 2018, 11:26 AM IST
ಬೆಂಗಳೂರು: ರಾಜ್ಯದಲ್ಲೀಗ “ಉಚಿತ ಬಸ್ ಪಾಸ್’ ಕೂಗು ಜೋರಾಗೇ ಕೇಳುತ್ತಿದೆ. ಒಂದೆಡೆ, ಉಚಿತ ಬಸ್ ಪಾಸ್ ಕೊಡಿ ಎಂದು ರಾಜ್ಯಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ, ಮತ್ತೂಂದೆಡೆ ಉಚಿತ ಬಸ್ ಪಾಸು ಕೊಡುತ್ತೇವೆ, ಎಂದು ಕರೆದು ಕೊಡಲು ಹೊರಟರೂ ಕಾರ್ಮಿಕರು ಬೇಡ ಎನ್ನುತ್ತಿದ್ದಾರೆ!
ಹೌದು, ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಮೂರು ತಿಂಗಳ ಹಿಂದೆಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯಲ್ಲಿ ಉಚಿತ ಬಸ್ ಪಾಸ್ ವಿತರಣೆ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ, ಈ ಪಾಸುಗಳನ್ನು ಪಡೆಯುವವರೇ ಇಲ್ಲ. ಬೆಂಗಳೂರಲ್ಲಿ 3 ಲಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ ಎಂಬ ಅಂದಾಜಿದೆ. ಆದರೆ, ಇದುವರೆಗೆ ಪಾಸು ಪಡೆದವರ ಸಂಖ್ಯೆ ಕೇವಲ 260. à ನೀರಸ ಪ್ರತಿಕ್ರಿಯೆಗೆ ಮಾಹಿತಿ ಕೊರತೆ ಕಾರಣ.
ಕಟ್ಟಡಗಳ ನಿರ್ಮಾಣ, ರಸ್ತೆ, ಸರ್ಕಾರಿ ಯೋಜನೆಗಳ ಕಾಮಗಾರಿಗಳಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರನ್ನು ಕಾರ್ಮಿಕ ಇಲಾಖೆಯಲ್ಲಿ “ಕಟ್ಟಡ ಕಾರ್ಮಿಕರು’ ಎಂದು ನೋಂದಣಿ ಮಾಡಲಾಗಿದೆ. ಇಲಾಖೆ ಪ್ರಕಾರ ಅಂದಾಜು ಮೂರು ಲಕ್ಷ ನೋಂದಾಯಿತ ಕಾರ್ಮಿಕರಿದ್ದು, ಅವರೆಲ್ಲರಿಗೂ ಉಚಿತ ಪಾಸು ನೀಡಲು ನಿರ್ಧರಿಸಿ, ಮಾರ್ಚ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಪಾಸು ಉಳ್ಳವರು ನಗರದಾದ್ಯಂತ ಬಿಎಂಟಿಸಿ ಬಸ್ (ವೋಲ್ವೊ ಹೊರತುಪಡಿಸಿ)ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಪಾಸಿನ ಮೊತ್ತವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣಗಳ ಕಾರ್ಮಿಕರ ಕಲ್ಯಾಣ ಮಂಡಳಿ ನೇರವಾಗಿ ಬಿಎಂಟಿಸಿಗೆ ಪಾವತಿಸುತ್ತದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾರ್ಮಿಕರು ಪಾಸುಗಳನ್ನು ಪಡೆಯಲು ಆಸಕ್ತಿ ತೋರಿಲ್ಲ ಎಂದು ಮಂಡಳಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಲಕ್ಷಾಂತರ ನೋಂದಾಯಿತ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಮಿಕರಿದ್ದರೂ, ಸ್ಮಾರ್ಟ್‌ಕಾಡ್ ನೀಡಿರುವುದು 2,300 ಕಾರ್ಮಿಕರಿಗೆ ಮಾತ್ರ. ಆ ಕಾರ್ಮಿಕರ ಪಟ್ಟಿ ಆಧರಿಸಿ ಅರ್ಹರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇದುವರೆಗೆ ಆ 2,300ರ ಪೈಕಿ 261 ಜನ ಪಾಸು ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಪ್ರತಿ ಪಾಸಿಗೆ ತಲಾ 1,050 ರೂ.ಗಳನ್ನು ಮಂಡಳಿಯು ನಿಗಮಕ್ಕೆ ಪಾವತಿಸಿದೆ ಎಂದು ಬಿಎಂಟಿಸಿ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ನೀತಿಸಂಹಿತೆ ಅಡ್ಡಿ?: ಚುನಾವಣಾ ಪೂರ್ವದಲ್ಲೇ ಕಾರ್ಮಿಕರಿಗೆ ಉಚಿತ ಪಾಸು ವಿತರಣೆ ಯೋಜನೆ ಘೋಷಣೆ ಆಗಿತ್ತು. ಆದರೆ, ಉದ್ಘಾಟನೆ ಹೊತ್ತಿಗೆ ಚುನಾವಣೆ ಘೋಷಣೆಯಾಗಿದ್ದರಿಂದ ಮಾದರಿ ನೀತಿಸಂಹಿತೆ ಜಾರಿಯಾಯಿತು. ಇದರಿಂದ ಆರಂಭದಲ್ಲೇ ಬ್ರೇಕ್ ಬಿದ್ದಿತು ಎಂದು ಮಂಡಳಿ ಕಾರ್ಯದರ್ಶಿ ಸುನೀಲ್‌ಕುಮಾರ್ ಸ್ಪಷ್ಟಪಡಿಸಿದರು.
ಪಾಸ್ ಅಗತ್ಯವಿಲ್ಲ: ಆದರೆ, ಬಹುತೇಕ ಕಾರ್ಮಿಕರಿಗೆ ಈ ಯೋಜನೆ ಬಗ್ಗೆ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಹಿಂದೆಬಿದ್ದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾರ್ಮಿಕರಿಗೆ ಬಸ್ ಪಾಸ್‌ಗಳ ಅವಶ್ಯಕತೆ ಇಲ್ಲ. ಏಕೆಂದರೆ, ಎಲ್ಲ ಗುತ್ತಿಗೆದಾರರು ಕಾರ್ಮಿಕರನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಿರುತ್ತಾರೆ. ಇನ್ನೂ ಕೆಲವರು ಕಾಮಗಾರಿ ನಡೆಯುವ ಸ್ಥಳದಲ್ಲೇ ವಾಸ ಇರುತ್ತಾರೆ ಅಥವಾ ಸ್ವಂತ ದ್ವಿಚಕ್ರ ವಾಹನಗಳನ್ನು ಹೊಂದಿರುತ್ತಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಎನ್.ಪಿ. ಸ್ವಾಮಿ ಆರೋಪಿಸುತ್ತಾರೆ.
ಲಕ್ಷಾಂತರ ಕಾರ್ಮಿಕರಲ್ಲಿ ಬಹುತೇಕರು ನೋಂದಣಿ ಆಗದಿರುವುದಕ್ಕೂ ಮಂಡಳಿಯ ಪ್ರಚಾರದ ಕೊರತೆಯೇ ಕಾರಣ. ಜತೆಗೆ ನೋಂದಣಿ ಪ್ರಕ್ರಿಯೆ ಕೂಡ ಗೊಂದಲದಿಂದ ಕೂಡಿದೆ. ಇದರಿಂದ ಕಾರ್ಮಿಕರು ಹಿಂದೇಟು ಹಾಕುತ್ತಾರೆ ಎಂದು ಎನ್.ಪಿ. ಸ್ವಾಮಿ ದೂರಿದರು. ಉಚಿತ ಪಾಸು ಯೋಜನೆ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ಳಲಾಗುತ್ತಿದೆ.
ಈ ಹಿಂದೆಯೇ ಬಿಎಂಟಿಸಿಯ 11 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಸಂಬಂಧ ಅಭಿಯಾನ ನಡೆಸಲಾಗಿದ್ದು, ಸ್ಥಳದಲ್ಲೇ ಅರ್ಜಿ ಭರ್ತಿ ಮಾಡಿ, ಪಾಸು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗ ಮತ್ತೆ ವಿವಿಧೆಡೆ ಅಭಿಯಾನ, ಕರಪತ್ರಗಳ ಹಂಚಿಕೆ ಮೂಲಕ ಮಾಹಿತಿ ನೀಡಲು ಮಂಡಳಿ ಯೋಜನೆ ರೂಪಿಸಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದರು.
ಬಿಎಂಟಿಸಿಗೂ ಆದಾಯ: ಈ ಯೋಜನೆ ಅಡಿ ಬಿಎಂಟಿಸಿಯಿಂದ ವಾರ್ಷಿಕ ಪಾಸುಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಲಾ ಪಾಸಿಗೆ ಮಂಡಳಿಯು ತನ್ನ ಕಾರ್ಮಿಕ ಕಲ್ಯಾಣ ನಿಧಿಯಿಂದ ತಿಂಗಳಿಗೆ 1,050 ರೂ. ಪಾವತಿಸುತ್ತದೆ. ಒಂದೊಮ್ಮೆ ಎಲ್ಲ ಮೂರು ಲಕ್ಷ ಕಾರ್ಮಿಕರೂ ಉಚಿತ ಪಾಸು ಪಡೆದರೆ ಬಿಎಂಟಿಸಿಗೆ ಮಾಸಿಕ ಅಂದಾಜು 31 ಕೋಟಿ ರೂ. ಆದಾಯ ಬರಲಿದೆ. ಹಾಗಾಗಿ, ಸಾರಿಗೆ ಸಂಸ್ಥೆಗೂ ಇದರಿಂದ ಲಾಭ ಆಗಲಿದೆ.
ಪ್ರಸ್ತುತ ಆನ್‌ಲೈನ್ ಜತೆಗೆ ಸರ್ಕಾರೇತರ ಸಂಸ್ಥೆಯೊಂದರಿಂದ ನೋಂದಣಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು 8ರಿಂದ 9 ಲಕ್ಷ ಕಾರ್ಮಿಕರ ನೋಂದಣಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ. ಅದರಲ್ಲಿ ಬೆಂಗಳೂರಿನಲ್ಲಿ ಇರುವವರನ್ನು ಹುಡುಕಿ, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಅಂಥವರ ವಿವರವನ್ನು ಬಿಎಂಟಿಸಿಗೆ ನೀಡಿ, ಆ ಮೂಲಕ ಪಾಸು ಒದಗಿಸಲಾಗುತ್ತಿದೆ.
-ಸುನೀಲ್‌ಕುಮಾರ್, ಕಾರ್ಯದರ್ಶಿ, ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.