ಊರುಗಳಿಗೆ ತೆರಳಲು ಧಾವಂತ


Team Udayavani, May 4, 2020, 11:49 AM IST

ಊರುಗಳಿಗೆ ತೆರಳಲು ಧಾವಂತ

ಬೆಂಗಳೂರು: ಸುದೀರ್ಘ‌ ಒಂದೂವರೆ ತಿಂಗಳ ನಂತರ ನಗರದ ಮೆಜೆಸ್ಟಿಕ್‌ ತನ್ನ ಎಂದಿನ “ಗಜಿಬಿಜಿ’ಗೆ ಹೊರಳಿತ್ತು. ಗೂಡು ಸೇರಲು ಧಾವಿಸುತ್ತಿರುವ ಜನ, ಕೈಯಲ್ಲಿ ಆಹಾರ ಪೊಟ್ಟಣ ಮತ್ತು ಕೊಂಕಳಲ್ಲಿ ಬಿಕ್ಕಳಿಸುವ ಮಗುವಿನೊಂದಿಗೆ ಬಸ್‌ ಹಿಡಿಯುವ ಧಾವಂತ, ಮುಖಗವಸುಗಳಲ್ಲಿ ಕಳೆದುಹೋದ ಬಂಧುಗಳ ಹುಡುಕಾಟ ಮತ್ತಿತರ ದೃಶ್ಯಗಳಿಂದ ತುಂಬಿತುಳುಕುತ್ತಿತ್ತು.

ಕೂಲಿ ಕಾರ್ಮಿಕರಿಗೆ ಸರ್ಕಾರಿ ಬಸ್‌ಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಉಚಿತವಾಗಿ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಿದ್ದರ ಪರಿಣಾಮ ಬೆಂಗಳೂರು ಭಾನುವಾರ ಮತ್ತೂಂದು ವಲಸೆಗೆ ಸಜ್ಜಾಯಿತು. ಅದಕ್ಕೆ ಕೇಂದ್ರಬಿಂದುವಾಗಿದ್ದು ಮೆಜೆಸ್ಟಿಕ್‌. ಇದರಿಂದ ಲಾಕ್‌ ಡೌನ್‌ ಇಲ್ಲದ ಸಂದರ್ಭದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ಹೇಗೆ ಇರುತ್ತದೋ, ಅದೇ ರೀತಿಯ ಜನಜಂಗುಳಿ, ನೂಕುನುಗ್ಗಲು ಕಂಡುಬಂತು.

ಊರಿಗೆ ತೆರಳಲು ಗಂಟುಮೂಟೆ ಸಮೇತವಾಗಿ ಐದು ಸಾವಿರಕ್ಕೂ ಅಧಿಕ ಕುಟುಂಬ ಮೆಜೆಸ್ಟಿಕ್‌ಗೆ ಧಾವಿಸಿತ್ತು. ಬಂದವರಲ್ಲಿ ಕೆಲವರಿಗೆ ಬಸ್‌ ಮಾಹಿತಿ ಇದ್ದರೆ, ಬಹುತೇಕರಿಗೆ ಬಸ್‌ ವಿವರವೂ ತಿಳಿದಿರಲಿಲ್ಲ. ಬೀದರ್‌, ಹಾಸನ, ಹೊಸಪೇಟೆ, ಹುಬ್ಬಳ್ಳಿ, ಕಲಬುರಗಿ, ರಾಯಚೂರು, ಶಿವಮೊಗ್ಗ ಮತ್ತು ಯಾದಗಿರಿ ಮೊದಲಾದ ಜಿಲ್ಲೆಯ ಕೂಲಿ ಕಾರ್ಮಿಕರೇ ಹೆಚ್ಚಿದ್ದರು.

ಮೆಜೆಸ್ಟಿಕ್‌ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಆಯೋಜನೆಯೊಂದಿಗೆ ಕೂಲಿ ಕಾರ್ಮಿಕರನ್ನು ತವರಿಗೆ ಕಳಿಸುವ ಪ್ರಕ್ರಿಯೆ ಬೆಳಗ್ಗೆಯಿಂದ ಸಂಜೆ 6ರವರೆಗೂ ನಡೆಯಿತು. ಬಹುತೇಕರು ಮಾಸ್ಕ್ ಧರಿಸಿದ್ದರು. ಆದರೆ, ಸಾಮಾಜಿಕ ಅಂತರ ಕಾಣಿಸಲಿಲ್ಲ. ಬಸ್‌ ಒಳಗೂ ಇದೇ ಸ್ಥಿತಿ ಇತ್ತು. ಹ್ಯಾಂಡ್‌ ಸ್ಯಾನಿಟೈಸರ್‌ ಕೂಡ ಇರಲಿಲ್ಲ. ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ಜ್ವರ ತಪಾಸಣೆ ಮಾಡಿ, ಹೆಸರು ನೋಂದಾಯಿಸಿಕೊಂಡು ಬಸ್‌ ಒಳಗೆ ಬಿಡಲಾಗುತ್ತಿತ್ತು. ಮೇಲ್ವಿಚಾರಕರ ಸೂಚನೆಯಂತೆ ಚಾಲಕರು ಬಸ್‌ ಕೊಂಡೊಯ್ಯುತ್ತಿದ್ದರು.

ಬೆಂಗ್ಳೂರ ಕಡೆ ತಲೆ ಹಾಕಲ್ಲ!: “ನಾವು ವಿಜಯನಗರದಿಂದ ಬಂದಿದ್ದೇವೆ. ವಿಜಯಪುರಕ್ಕೆ ಹೋಗಬೇಕಿತ್ತು. ಯಾರೂ ನಮಗೆ ಸಹಾಯ ಮಾಡಲಿಲ್ಲ. ಒಮ್ಮೆ ಊರು ಸೇರಿದರೆ ಸಾಕು, ಮತ್ತೆ ಬೆಂಗಳೂರು ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ. ನಮ್ಮೆಲ್ಲ ಬಟ್ಟೆ ಬರೇ ಪ್ಯಾಕ್‌ ಮಾಡಿಕೊಂಡು ಬಂದಿದ್ದೇವೆ. ಇನ್ಮುಂದೆ ಈ ಭಾಗಕ್ಕೆ ಬರುವುದಿಲ್ಲ. ಊರಲ್ಲೇ ಏನಾದರೂ ಕೆಲಸ ನೋಡಿ ಕೊಳ್ಳುತ್ತೇವೆ. ಲಾಕ್‌ಡೌನ್‌ ದಿನಗಳಲ್ಲಿ ಸಾಕಷ್ಟು ನೋವು ತಿಂದಿದ್ದೇವೆ. ನಮಗೆ ಯಾವ ರಾಜಕೀಯ ನಾಯಕರು ಗೊತ್ತಿಲ್ಲ. ಹೀಗಾಗಿ ಪರದಾಡಬೇಕಾಯಿತು’ ಎಂದು ದಾನವ್ವ ಮತ್ತು ಕುಟುಂಬದವರು ಈ ವೇಳೆ ಅಲವತ್ತುಕೊಂಡರು. “ಬೆಂಗಳೂರಿನಿಂದ ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಕ್ಕೆ ಹೋಗಿರುವ ಕೂಲಿ ಕಾರ್ಮಿಕರು ಜಿಲ್ಲೆಯ ಪರಿಸ್ಥಿತಿ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನಾವು ಮನೆಯಲ್ಲೇ ಇರುವಂತೆ ಹೇಳಿ ಕಳುಹಿಸುತ್ತಿದ್ದೇವೆ. ಅಲ್ಲಿಗೆ ತಲುಪಿದ ಮೇಲೆ ಆಯಾ ಜಿಲ್ಲಾಡಳಿತವೇ ಮಾಡಬೇಕು’ ಎಂದು ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೆಎಸ್‌ಆರ್ಟಿಸಿಯ ಮೇಲಾಧಿಕಾರಿಗಳು ನೀಡಿದ ಸೂಚನೆಯನ್ನು ಪಾಲನೆ ಮಾಡುತ್ತಿದ್ದೇವೆ. ನಮ್ಮದು ಮಸ್ಕಿ ಡಿಪೋ ಬಸ್‌, ಬೆಳಗ್ಗೆಯೇ ಇಲ್ಲಿಗೆ ಬಂದಿದ್ದೇವು. ಮಕ್ಕಳು ಸೇರಿ 32 ಪ್ರಯಾಣಿಕರೊಂದಿಗೆ ಹೋಗುತ್ತಿದ್ದೇವೆ. ಸಾಮಾ ಜಿಕ ಅಂತರ ಹಾಗೂ ಇನ್ನಿತರೆ ಎಲ್ಲ ಸುರಕ್ಷತಾ ಕ್ರಮವನ್ನು ಅಧಿಕಾರಿಗಳ ಸೂಚನೆಯಂತೆ ಪಾಲನೆ ಮಾಡುತ್ತೇವೆ ಎಂದು ಚಾಲಕ ಅನಿಲ್‌ ಕುಮಾರ್‌ ಹೇಳಿದರು.

8 ಸಾವಿರ ಕೂಲಿ ಕಾರ್ಮಿಕರು ತವರಿಗೆ: ಸಾಮಾಜಿಕ ಅಂತರದ ನಿಯಮದಡಿ ಒಂದು ಬಸ್ಸಲ್ಲಿ ಮಕ್ಕಳು ಸಹಿತವಾಗಿ 25ರಿಂದ 30 ಜನರಿಗೆ ಅವಕಾಶ ನೀಡಲಾಗಿದೆ. ಒಂದೇ ಕುಟುಂಬದ ಸದಸ್ಯರು ಇದ್ದ ಸಂದರ್ಭದಲ್ಲಿ ಸಾಮಾಜಿಕ ಅಂತರದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಮೂವರು ಕುಳಿತುಕೊಳ್ಳಬಹುದಾದ ಸೀಟಿನಲ್ಲಿ ಇಬ್ಬರಿಗೆ ಮತ್ತು ಇಬ್ಬರು ಕುಳಿತುಕೊಳ್ಳ ಬಹುದಾದ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಒಂದೇ ಕುಟುಂಬದವರು ಮೂವರಿದ್ದರೆ ಒಂದೇ ಸೀಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕುರಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲವೊಂದು ಜಿಲ್ಲೆಯ ಬಸ್‌ ಗಳಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಬೇಕಾಗಿದೆ. ಸರಿ ಸುಮಾರು ಎಂಟು ಸಾವಿರ ಮಂದಿ ಒಂದೇ ದಿನ ಪ್ರಯಾಣ ಬೆಳೆಸಿದ್ದಾರೆ. ದಾರಿಮಧ್ಯೆ ಎಲ್ಲಿಯೂ ಬಸ್‌ ನಿಲ್ಲಿಸುವುದಿಲ್ಲ ( ತುರ್ತು ಕರೆ ಹೊರತುಪಡಿಸಿ) ಎಂದು ಪೊಲೀಸ್‌ ಅಧಿಕಾರಿ ಎಚ್‌. ಎನ್‌.ಧರ್ಮೇಂದ್ರ ಅವರು ಮಾಹಿತಿ ನೀಡಿದರು. ಸಂಸದ ತೇಜಸ್ವಿ ಸೂರ್ಯ ತಮ್ಮ ಬೆಂಬಲಿಗರೊಂದಿಗೆ ಮೆಜೆಸ್ಟಿಕ್‌ಗೆ ಬಂದು ಕೂಲಿ ಕಾರ್ಮಿಕರಿಗೆ ಊಟದ ಪೊಟ್ಟಣ ವಿತರಿಸಿದರು. ಅದೇ ರೀತಿ ವಿವಿಧ ಸಂಘ-ಸಂಸ್ಥೆಗಳೂ ಊಟ, ನೀರಿನ ಬಾಟಲಿ ಹಾಗೂ ಹಣ್ಣುಗಳನ್ನು ವಿತರಣೆ ಮಾಡಿದರು.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ಕೇಂದ್ರ ಬಸ್‌ ನಿಲ್ದಾಣದಲ್ಲಿದ್ದೆ. ಕೆಎಸ್‌ಆರ್ಟಿಸಿ, ಪೊಲೀಸ್‌, ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಓಡಾಡಿ ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಬಸ್‌ ಸೇವೆ ಪ್ರಾರಂಭವಾಗಲಿದೆ. – ಎಸ್‌. ಸುರೇಶ್‌ ಕುಮಾರ್‌, ಸಚಿವರು.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.