ವಿಶ್ವ ಹಾಲು ದಿನ : ಅಪಾಯದಲ್ಲಿದೆ ನಮ್ಮ ಬದುಕು!
Team Udayavani, Jun 1, 2021, 10:22 AM IST
ಬೆಂಗಳೂರು: ಕೋವಿಡ್ ಸೋಂಕಿನ ಭೀತಿಯಿಂದ, ಲಾಕ್‌ಡೌನ್ ನಿರ್ಬಂಧದಿಂದ ಇಡೀ ರಾಜ್ಯದ ಜನ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಹಾಲು ಉದ್ಯಮದ ಸಿಬ್ಬಂದಿ ಜೀವವನ್ನೇ ಮುಡಿಪಾಗಿಟ್ಟು ಕಾರ್ಯನಿರತರಾಗಿದ್ದಾರೆ.
ಹಾಲು ಒಕ್ಕೂಟದ ಸಿಬ್ಬಂದಿ, ಹಾಲುವಿತರಕರು, ಮಾರಾಟಗಾರರು ಸೇರಿದಂತೆ ಸಾವಿರಾರೂ ಹಾಲು ಉದ್ಯಮದ ಸಿಬ್ಬಂದಿ ಕೋವಿಡ್ ವಾರಿಯರ್ ಮಾದರಿಯಲ್ಲಿ ಸಕ್ರಿಯರಾಗಿದ್ದಾರೆ. ಗೊತ್ತಿಲ್ಲದೆ ಹಲವು ಬಾರಿ ಸೋಂಕಿತರ ಮನೆಗಳ ಸಂಪರ್ಕ ಹೊಂದುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಮೊದಲ ಅಲೆ ಬಂದಾಗ ಸೋಂಕಿತರ ನಿವಾಸಗಳಿಗೆಬಿಬಿಎಂಪಿಅಧಿಕಾರಿಗಳುಬ್ಯಾರಿಕೇಡ್ ಹಾಕುತ್ತಿದ್ದರು. ಈಗ ಅದ್ಯಾವುದು ಇಲ್ಲ. ಹೀಗಾಗಿ ಬೆಳಗ್ಗಿನ ಜಾವ ಹಾಲು ಹಾಕಲು ಹೋಗುವ ನಮಗೆ ಸೋಂಕಿತ ಮನೆಗಳ ಬಗ್ಗೆ ತಿಳಿಯುವುದೇ ಇಲ್ಲ. ಅಪಾಯದಲ್ಲಿ ಈಜಾಡುವಂತಿದೆ ನಮ್ಮ ಬದುಕು. -ಇದು ಮನೆ ಮನೆಗೆ ಹಾಲು ಹಾಕುವವರ ಅಳಲು.
ಬೆಂಗಳೂರಿನಲ್ಲಿ ಅಧಿಕ ಸಂಖ್ಯೆಯಲ್ಲಿ ಮನೆ ಮನೆಗೆ ತೆರಳಿ ಹಾಲು ಹಾಕುವವರಿದ್ದಾರೆ. ಸೈಕಲ್ ಇಲ್ಲವೆ ದ್ವಿಚಕ್ರ ವಾಹನ ಏರಿ ಬೆಳಗ್ಗೆ 5 ರಿಂದಲೇ ಹಾಲು ಹಾಕುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತಾರೆ. ಇದು ಕೋವಿಡ್ ಸಂಕಷ್ಟದ ನಡುವೆಯೇ ಸಾಗಿದೆ. ಕಳೆದ ಏಳೆಂಟು ವರ್ಷದಿಂದ ಮನೆ ಮನೆಗೂ ಹಾಲು ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಬೇರೆ ಕಡೆಗೆ ಉದ್ಯೋಗ ಮಾಡುವುದರ ಜತೆಗೆ ಪಾರ್ಟ್ ಟೈಂ ಕೆಲಸವಾಗಿ ಹಾಲು ಹಾಕುತ್ತೇನೆ.ಕೋವಿಡ್ ಹಿನ್ನೆಲೆಯಲ್ಲಿ ಜೀವ ಭಯವಿದೆ. ಆದರೂ ಕೆಲಸ ಅನಿವಾರ್ಯ ಎಂದು ಹೊಸಕೆರೆ ಹಳ್ಳಿ ನಿವಾಸಿ ಗಿರೀಶ್ ಹೇಳಿದರು.
ಕಳೆದ ಬಾರಿ ಮನೆ ಮನೆಗೆ ತೆರಳಿ ಹಾಲು ಹಾಕುವಾಗ, ಬಿಬಿಎಂಪಿ ಅಧಿಕಾರಿಗಳು ಮನೆ ಸೀಲ್ಡ್ ಮಾಡುತ್ತಿದರು. ನಮಗೆ ಅರಿವಿಗೆ ಬರುತ್ತಿತ್ತು ಆದರೆ ಆ ಪರಿಸ್ಥಿತಿ ಈಗಿಲ್ಲ ಎಂದರು.
ಬದುಕಿನ ಅನಿವಾರ್ಯತೆ: ಪ್ರತಿದಿನ ಹಾಲು ಹಾಕುವವರಲ್ಲಿ ಒಬ್ಬರು ಸುಮಾರು 75 ರಿಂದ 80 ಮನೆಗೆ ತೆರಳುತ್ತಾರೆ. ಯಾರ ಮನೆಯಲ್ಲಿ ಸೋಂಕಿತರು ಇದ್ದಾರೆ, ಇಲ್ಲ ಎಂಬುವುದುತಿಳಿಯುವುದೆ ಇಲ್ಲ. ಮನೆಯಲ್ಲಿ ಬೇಡ ಎಂದರೂ ಬದುಕಿನ ಅನಿವಾರ್ಯತೆಗಾಗಿ ನಾನು ಮನೆಮನೆಗೆ ಹಾಲು ಹಾಕುತ್ತಿದ್ದೇನೆ ಎಂದು ಗಿರಿನಗರ ನಿವಾಸಿ ಉದಯ್ ಹೇಳಿದರು. ಕೋವಿಡ್ ಹಿನ್ನಲೆಯಲ್ಲಿ ಸ್ಯಾನಿಟೈಸರ್ ,ಮಾಸ್ಕ್ ಸೇರಿ ಸುರಕ್ಷತಾ ಕಿಟ್ ಗಳನ್ನು ಬಳಕೆ ಮಾಡುತ್ತೇನೆ. ಆದರೂ ಸೋಂಕಿನ ಆತಂಕ ಇದ್ದೇ ಇದೆ ಎಂದು ತಿಳಿಸಿದರು.
ಗ್ರಾಹಕರಲ್ಲೂ ಕೆಲವರು ಮನೆ ಮನೆಗೆ ಹಾಲು ಹಾಕುವವರ ಆರೋಗ್ಯದ ಬಗ್ಗೆ ಅನುಕಂಪ ವ್ಯಕ್ತಪಡಿಸುವವರು ಇದ್ದಾರೆ. ಮನೆಯಲ್ಲಿ ಸೋಂಕು ಕಾಣಿಸಿಕೊಂಡರೆ ಮೊಬೈಲ್ ಮೂಲಕ ಕರೆ ಮಾಡಿ ಸೂಚಿಸಿರುವ ಸನ್ನಿವೇಶಗಳೂ ಇವೆ ಎಂದು ಹಾಲು ವ್ಯಾಪಾರಿ ಶ್ರೀನಿವಾಸ್ ಹೇಳಿದ್ದಾರೆ.
ತಿರುಗಾಟ ನೂರಾರುಕಡೆ :
ಬಮೂಲ್‌ನಲ್ಲಿ 450ಕ್ಕೂ ಅಧಿಕ ಮಂದಿ ಗುತ್ತಿಗೆ ವಾಹನ ಚಾಲಕರುಕೆಲಸ ಮಾಡುತ್ತಾರೆ. ನಗರದ ಪ್ರತಿಯೊಂದು ಮೂಲೆ ಮೂಲೆಗೆ ತಿರುಗಾಡುತ್ತಾರೆ. ಹೀಗಾಗಿ ಇವರು ಆತಂಕದÇÉೆ ಬದುಕು ಕಳೆಯುತ್ತಿದ್ದಾರೆ. ನಮ್ಮದುಕೂಡ ತುರ್ತು ಸೇವೆ. ಕೊಳಚೆ ಪ್ರದೇಶ ಸೇರಿ ಎಲ್ಲೆಂದರಲ್ಲಿ ತೆರಳುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ಭಯದ ನಡುವೆಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಫ್ರೆಂಟ್ ಲೈನ್ ವರ್ಕರ್ಸ್ ಎಂದು ಗುರುತಿಸಿ ಸರ್ಕಾರ ಲಸಿಕೆ ನೀಡಲಿ ಎಂದು ಬಮೂಲ್ ಗುತ್ತಿಗೆ ವಾಹನ ಚಾಲಕ ಲಕ್ಕಸಂದ್ರದ ಡಿ.ಅನಂತ್ ಮನವಿ ಮಾಡಿದರು. ನಮಗೂ ಬಮೂಲ್ ಆರೋಗ್ಯಕಿಟ್ ಗಳನ್ನು,ಸುರಕ್ಷತಾ ಪರಿಕರಗಳನ್ನು ಪ್ರತಿ ನಿತ್ಯ ಒದಗಿಸಬೇಕು ಎಂದು ಕೊಳ್ಳೇಗಾಲ ಮೂಲದ ವಾಹನ ಚಾಲಕ ಸೋಮಶೇಖರ್ ತಿಳಿಸಿದರು.
ಬೂತ್ ಎಜೆಂಟರಲ್ಲೂ ಭಯ : ಹಾಲಿನ್ ಬೂತ್ ಎಜೆಂಟರಿಗೂ ಕೋವಿಡ್ ಸೋಂಕಿನ ಭಯಕಾಡುತ್ತಿದೆ. ಹಲವು ಸಂಖ್ಯೆಯಲ್ಲಿ ಜನರು ಹಾಲುಖರೀದಿಗೆ ಬರುತ್ತಾರೆ.ಯಾರಿಗೆ ಸೋಂಕಿನ ಲಕ್ಷಣಗಳಿವೆ ತಿಳಿಯದು.ಕೆಲವರು ತಾವೇ ಕೈ ಹಾಕಿ ಹಾಲು ತೆಗೆದುಕೊಳ್ಳುತ್ತಾರೆ. ಹೀಗಾಗಿ ಸೋಂಕಿನ ಭಯವಿದೆ ಎಂದು ಶ್ರೀನಿವಾಸನಗರದ ಬಮೂಲ್ ಬೂತ್‌ಎಜೆಂಟ್ ಶ್ರೀನಾಥ್ ಹೇಳಿದರು.ಕೆಲಸದವೇಳೆ ಸೋಂಕಿತರು ಅಂತರಕಾಯ್ದುಕೊಳ್ಳದೆ ವ್ಯವಹರಿಸುತ್ತಾರೆ. ಹೇಳಿದರೂ ಕೇಳುವುದುದಿಲ್ಲ ಎಂದು ಹಾಲಿನ ಎಜೆಂಟ್ ರವಿ ತಿಳಿಸಿದರು.
ಕೆಎಮ್ ಎಫ್ ನ ಸಿಬ್ಬಂದಿಗೆಕೋವಿಡ್ ಲಸಿಕೆ ನೀಡುವಕಾಯಕ ನಡೆದಿದೆ. ಈಗಾಗಲೇ ಸಿಬ್ಬಂದಿಗಳ ಹೆಸರು ಪಡೆದು ಕೋವಿಡ್ ಲಸಿಕೆ ನೀಡುವಕಾಯಕದಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ನಿರತವಾಗಿದೆ. –ಬಿ.ಸಿ.ಸತೀಶ್, ಕೆಎಂಎಫ್ಎಂ.ಡಿ
ಸಂಸ್ಕರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಸೇರಿ ಬಮೂಲ್ ನ ನೌಕರರಿಗೆಕೋವಿಡ್ ಲಸಿಕೆ ಹಾಕುವಕೆಲಸ ನಡೆದಿದೆ. ಗುತ್ತಿಗೆ ನೌಕರರಿಗೂ ಶೀಘ್ರದಲ್ಲೇ ಲಸಿಕೆ ನೀಡಲಾಗುವುದು. –ನರಸಿಂಹ ಮೂರ್ತಿ, ಬಮೂಲ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.