ನಗರದೆಲ್ಲೆಡೆ ಶ್ರೀ ಗುರುರಾಯರ ಮಧ್ಯಾರಾಧನೆ
Team Udayavani, Aug 10, 2017, 2:40 PM IST
ಬೆಂಗಳೂರು: ಗುರುಸಾರ್ವಭೌಮ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವದ ಮಧ್ಯಾರಾಧನೆ ನಗರದ ವಿವಿಧ ಮಠಗಳಲ್ಲಿ ಅದ್ದೂರಿಯಿಂದ ನಡೆಯಿತು. ಬೆಳಗ್ಗಿನಿಂದಲೇ ಸಹಸ್ರಾರು ಭಕ್ತಾಧಿಗಳು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ರಾಯರ ಬೃಂದಾವನ ದರ್ಶನ ಪಡೆದರು. ಎಲ್ಲಾ ಮಠಗಳಲ್ಲಿ ವಿಶೇಷ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಭಜನೆ, ಕೀರ್ತನೆಗಳನ್ನು ಹಾಡುತ್ತಾ ಭಾವಪರವಶರಾದರು. ರಾಯರ ರಥೋತ್ಸವವೂ ನಡೆಯಿತು. ಮೂರು ದಿನಗಳ ಕಾಲ ನಡೆಯುವ
ರಾಯರ ಆರಾಧನೆಯಲ್ಲಿ ಮಂಗಳವಾರ ಪೂರ್ವಾರಾಧನೆ ನಡೆದರೆ, ಪ್ರಧಾನವಾದ ಮಧ್ಯಾರಾಧನೆ ಬುಧವಾರ ನಡೆಯಿತು. ಗುರುವಾರ ಉತ್ತರಾರಾಧನೆಯೊಂದಿಗೆ ಕಾರ್ಯಕ್ರಮಗಳಿಗೆ ತೆರೆಬೀಳಲಿದೆ. ಆರಾಧನೆ ಸಲುವಾಗಿ ರಾಯರ ಮಠಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ಹೊರಭಾಗದಲ್ಲಿ ವಿಶೇಷ ದೀಪಾಲಂಕಾರವಿತ್ತು. ರಾಯರ ಕುರಿತಾದ ಭಜನೆ, ಕೀರ್ತನೆ, ಸಂಗೀತ ಕಾರ್ಯಕ್ರಮಗಳು ಉತ್ಸವಕ್ಕೆ ಸಾಂಸ್ಕೃತಿಕ ರಂಗು ತಂದುಕೊಟ್ಟವು. ವಿಶೇಷ ಉಪನ್ಯಾಸಗಳ ಮೂಲಕ ರಾಯರ
ಕುರಿತು ಭಕ್ತರಿಗೆ ಮಾಹಿತಿ ನೀಡಲಾಯಿತು. ಅವರ ಸಾಧನೆ, ಪವಾಡಗಳನ್ನು ವಿವರಿಸಲಾಯಿತು. ಜಯನಗರ 9ನೇ ಬಡಾವಣೆಯ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಕೆಂಗೇರಿ ಉಪನಗರದ ಶ್ರೀರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸೀತಾಪತಿ ಅಗ್ರಹಾರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪ್ರಕಾಶನಗರದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ, ಹರಿದಾಸನಗರದ ಶ್ರೀ ಅನುಗ್ರಹ ವಿಠಲ ದೇವಸ್ಥಾನ, ಮಲ್ಲೇಶ್ವರ ಈಜುಕೊಳ ಬಡಾವಣೆಯ ಶ್ರೀಗುರುರಾಜ ಭಕ್ತ ಮಂಡಳಿ, ಬಸವನಗುಡಿ ಶ್ರೀ ವ್ಯಾಸರಾಜ ಮಠ, ಸಂಪಿಗೆ ರಸ್ತೆಯ ರಾಘವೇಂದ್ರ ಸ್ವಾಮಿಗಳ ಸನ್ನಿಧಿ, ಜಯನಗರ 5ನೇ ಬಡಾವಣೆ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಶೇಷಾದ್ರಿಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಶಾಕಾಂಬರಿನಗರ ರಾಘವೇಂದ್ರಸ್ವಾಮಿಗಳ ಮಠ, ಸುಬ್ರಮಣ್ಯನಗರ ವ್ಯಾಸರಾಜ ಮಠ ಸೇರಿದಂತೆ ನಗರಾದ್ಯಂತ ಮಧ್ಯಾರಾಧನೆ ಭಕ್ತರ ಮನತಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.