ಮಹಿಳಾ ಕಲಾವಿದರಿಂದ ಯಕ್ಷಗಾನ ಪ್ರದರ್ಶನ
Team Udayavani, Aug 7, 2017, 1:22 PM IST
ಕೆಂಗೇರಿ: ವೇದಮೂರ್ತಿ ದಿವಂಗತ ಸಾಂತೂರು ರಾಮದಾಸ ಜೋಯಿಸ್ ಮತ್ತು ದಿವಂಗತ ಚಂದ್ರಶೇಖರ್ ಅಡಿಗ ರವರ ಸಂಸ್ಮರಣಾರ್ಥ ಕೆಂಗೇರಿ ಉಪನಗರದ ಶ್ರೀ ರಾಜರಾಜೇಶ್ವರಿ ಲಕ್ಷ್ಮಿನಾರಾಯಣ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ಕಲಾವಿದರಿಂದ ಭಾನುವಾರ ಶ್ರೀ ರಾಮದರ್ಶನಂ ಹಾಗೂ ರುಕ್ಮಾಂಗದೆ ಕಲ್ಯಾಣ ಯಕ್ಷಗಾನ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, “ಕಲೆ ಮತ್ತು ಸಾಹಿತ್ಯ ಸಂಸ್ಕೃತಿ ಬೆಳವಣಿಗೆಯಲ್ಲಿ ಯಕ್ಷಗಾನ ಮಹತ್ತರ ಪಾತ್ರ ವಹಿಸಿದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ದೈನಂದಿನ ಒತ್ತಡದ ನಡುವೆಯೂ ಯಕ್ಷಗಾನ ತರಬೇತಿ ಪಡೆದು ಪ್ರದರ್ಶನ ನೀಡುತ್ತಿರುವುದು ಇತರರಿಗೆ ಮಾದರಿ,’ ಎಂದರು.
ನಿಮ್ಸ್ ಕಾಲೇಜಿನ ನಿರ್ದೇಶಕಿ ಸುಕನ್ಯಾ ಹೆಗಡೆ ಮಾತನಾಡಿ, “ರಾಮದಾಸ ಜೋಯಿಸ್‌ರವರು ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡುಬರುತ್ತಿದ್ದ ಯಕ್ಷಗಾನದಿಂದಾಗಿ ಈ ಭಾಗದ ಜನರಿಗೆ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆದಿದೆ. ಹಾಗೆಯೇ ಚಂದ್ರಶೇಖರ್ ಅಡಿಗರವರು ಉನ್ನತ ಹುದ್ದೆಯಲ್ಲಿದ್ದರೂ ಯಕ್ಷಗಾನದ ಮೇಲಿನ ಅಭಿಮಾನದಿಂದ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು,’ ಎಂದು ಹೇಳಿದರು.
ಕರ್ನಾಟಕ ಯಕ್ಷಗಾನ ಕಲಾ ತಂಡದ ಶ್ರೀನಿವಾಸ್ ಸಾಸ್ಥಾನ, ಮಹಿಳಾ ಯಕ್ಷಗಾನ ಕಲಾ ತಂಡದ ನಿರ್ದೇಶಕಿ ಕೆ.ಗೌರಿ, ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಲಕ್ಷ್ಮಿನಾರಾಯಣ ಜೋಯಿಸ್, ಶ್ರೀರೇಖ, ಸಾವಿತ್ರಿ, ಮಹೇಶ್ ಅಡಿಗ, ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.