ಯಮನಿಂದ ನಿಯಮದ ಅರಿವು
Team Udayavani, Jul 17, 2018, 11:18 AM IST
ಬೆಂಗಳೂರು: ಸಂಚಾರ ನಿಯಮ ಪಾಲನೆಯ ಅರಿವು ಮೂಡಿಸಲು ಇತ್ತೀಚೆಗೆ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ಯಮ ಧರ್ಮರಾಯನ ವೇಷ ಧರಿಸಿ ಅರಿವು ಮೂಡಿಸಿದ್ದ ರಂಗಭೂಮಿ ಕಲಾವಿದ ವೀರೇಶ್ ಸೋಮವಾರ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೂಮ್ಮೆ ಯಮ ಧರ್ಮರಾಯನ ವೇಷಧರಿಸಿ ಜಾಗೃತಿ ಮೂಡಿಸಿದರು.
ಚಾಲುಕ್ಯ ವೃತ್ತ ಸುತ್ತ-ಮುತ್ತ ಸಂಚಾರ ನಿಯಮ ಉಲ್ಲಂ ಸುವ ಸವಾರರನ್ನು ತಡೆದು, ಶಿರಾಸ್ತ್ರಾಣ ಧರಿಸದೆ ವಾಹನ ಚಲಾಯಿಸಿದರೆ ನಿಮ್ಮ ಬೆನ್ನು ಬೀಳುತ್ತೇನೆ ಎಂದು ಎಚ್ಚರಿಸುವ ಮೂಲಕ ಅರಿವು ಮೂಡಿಸಿದರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಯಮ ಧರ್ಮರಾಯ ವೇಷಧಾರಿ ವೀರೇಶ್, ಕಳೆದ ವರ್ಷ ಜೂನ್ 23ರಂದು ಗಂಗಾವತಿಯಿಂದ ಕೊಪ್ಪಳಕ್ಕೆ ಬೈಕ್‌ನಲ್ಲಿ ಹೋಗುವಾಗ ನನ್ನ ಸಹೋದರ ರಸ್ತೆ ಅಪಘಾತವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಮೂರು ದಿನಗಳ ಕೋಮಸ್ಥಿತಿಯಲ್ಲಿದ್ದು, ಬಳಿಕ ಮೃತಪಟ್ಟಿದ್ದ. ಘಟನೆ ವೇಳೆ ಆತ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಹಲಸೂರು ಗೇಟ್ ಠಾಣೆ ಇನ್‌ಸ್ಪೆಕ್ಟರ್ ಮೊಹಮ್ಮದ್ ಅಲಿ ಕಾರ್ಯಕ್ರಮವೊಂದರಲ್ಲಿ ಅರಿವು ಮೂಡಿಸುವ ಆಂದೋಲನಕ್ಕೆ ಮನವಿ ಮಾಡಿದ ಕೂಡಲೇ ಒಪ್ಪಿಕೊಂಡೆ ಎಂದು ಹೇಳಿದರು. ವೀರೇಶ್, ಶ್ರೀ ವಿವೇಕಾನಂದ ಕಲಾಕೇಂದ್ರದ ಸಂಯೋಜಕರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.