ನೀವೂ ಆರಂಭಿಸಿ ತೋಟಗಾರಿಕಾ ಸ್ಟಾರ್ಟಪ್
Team Udayavani, Jun 19, 2018, 6:05 AM IST
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಐಟಿ ಸ್ಟಾರ್ಟ್ ಅಪ್ ಗಳ ಹಬ್ ಆಗಿ ಬೆಳಗುತ್ತಿರುವ ರಾಜಧಾನಿ, ಇದೀಗ ದೇಶದಲ್ಲಿ ಅತಿದೊಡ್ಡ ತೋಟಗಾರಿಕಾ ಸ್ಟಾರ್ಟ್‌ಅಪ್ ಉದ್ಯಮಿಗಳನ್ನು ತಯಾರು ಮಾಡುವ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ.ಮಾಹಿತಿ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗ್ಳ ಸ್ಥಾಪನೆ ಮಾದರಿಯಲ್ಲೇ ತೋಟಗಾರಿಕಾ ಉದ್ಯಮಿಗಳನ್ನು ಸಜ್ಜು ಗೊಳಿಸುವ ಕೆಲಸ ಬೆಂಗಳೂರಿನ ಹೆಸರ ಘಟ್ಟದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಲಿ
ತೋಟಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸಲು ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡಿ, ಕಚೇರಿ ಮತ್ತು ಪ್ರಯೋಗಾಲಯಕ್ಕೆ ಜಾಗವನ್ನೂ ಕೊಟ್ಟು, ಹೊರತಂದ ಉತ್ಪಾದನೆಗಳಿಗೆ ಮಾರುಕಟ್ಟೆ ಜಾಲವನ್ನೂ
ಒದಗಿಸಲಾಗುತ್ತಿದೆ.
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಸ್ಟಾರ್ಟ್‌ಅಪ್ ಇನ್‌ಕ್ಯೂಬೇಷನ್ ಸೆಂಟರ್ ಅಡಿ ಈ ಹೊಸ ಪ್ರಯೋಗಕ್ಕೆ ವೇದಿಕೆ ಕಲ್ಪಿಸಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜನ ಇಲ್ಲಿ ತರಬೇತಿ ಪಡೆದು, ಬೇರೆ ಬೇರೆ ಕಡೆಗಳಲ್ಲಿ ಸ್ಟಾರ್ಟ್‌ಅಪ್ ಗಳನ್ನು ಆರಂಭಿಸಿದ್ದಾರೆ. 80ಕ್ಕೂ ಅಧಿಕ ಮಂದಿ ಆಫ್ ಸೈಟ್ ಇನ್‌ಕ್ಯು ಬೇಟರ್ (ತಾವಿದ್ದಲ್ಲಿಯೇ ತರಬೇತಿ ಪಡೆದವರು) ಗಳಾಗಿದ್ದಾರೆ. ವೈಜ್ಞಾನಿಕವಾಗಿ ತೋಟಗಾರಿಕೆ ಉದ್ಯಮ ಸ್ಥಾಪನೆಗೆ ಹಣಕಾಸು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಈ ವ್ಯವಸ್ಥೆ ಲಾಭದಾಯಕವಾಗಿ ಪರಿಣಮಿಸಿದ್ದು,
ಇದರಿಂದ ಹೊಸ ವರ್ಗವನ್ನು ಕೃಷಿಯತ್ತ ಸೆಳೆಯುವಂತೆ ಮಾಡಿದೆ.
ಓದಿದ್ದು ಎಂಟೆಕ್; ಬಂದಿದ್ದು ಕೃಷಿ ಉದ್ಯಮಕ್ಕೆ: “ನಾನು ಓದಿದ್ದು ಎಂಟೆಕ್. ಆದರೆ, ಆಸಕ್ತಿ ಇದ್ದದ್ದು ಕೃಷಿಯಲ್ಲಿ. ತೋಟಗಾರಿಕೆಯಲ್ಲಿ ಸ್ಟಾರ್ಟ್‌ಅಪ್ ಸ್ಥಾಪನೆಗೆ ಪೂರಕ ನೆರವು ನೀಡುವ ಐಐಎಚ್‌ಆರ್‌ನ ಕೃಷಿ ವಾಣಿಜ್ಯೀಕರಣ ಇನ್‌ಕ್ಯುಬೇಷನ್ ಕೇಂದ್ರದಲ್ಲಿ ತರಬೇತಿ ಪಡೆದಿದ್ದೇನೆ. ಆದರೆ, ಹೊಸದಾಗಿ ಉದ್ಯಮ ಸ್ಥಾಪನೆಗೆ ಸಾಕಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆ ಸ್ವತಃ ಸಂಸ್ಥೆಯಲ್ಲೇ ಜಾಗ ಮತ್ತು ಯಂತ್ರೋಪಕರಣಗಳನ್ನು ನೀಡಿತು. ಇದರ ಸಹಾಯದಿಂದ ಬಾಳೆ ಇಳುವರಿ ಹೆಚ್ಚಿಸುವ ಔಷಧವನ್ನು ಉತ್ಪಾದಿಸುತ್ತಿದ್ದೇನೆ.ಮಾರುಕಟ್ಟೆ ಜಾಲ ಕೂಡ ಸಂಸ್ಥೆಯೇ ಕಲ್ಪಿಸಿದೆ.
ತಿಂಗಳಿಗೆ ಒಂದು ಟನ್ “ಬಾಳೆ ಸ್ಪೆಷಲ್’ ಸಿಂಪರಣೆ ಔಷಧ ಮಾರಾಟ ಮಾಡುತ್ತಿದ್ದೇನೆ’ ಎಂದು ಕೇರಳದ
ಕಲ್ಲಿಕೋಟೆಯ ಲಿಬಿನ್ ವಿವರಿಸಿದರು. ಇಂಜಿನಿಯರ್ ಕ್ಷೇತ್ರದಲ್ಲೇ ಮುಂದುವರಿದಿದ್ದರೆ, ಹೆಚ್ಚೆಂದರೆ ತಿಂಗಳಿಗೆ 20ರಿಂದ 25 ಸಾವಿರ ರೂ. ಸಿಗುತ್ತಿತ್ತು. ಆದರೆ, ತಿಂಗಳಿಗೆ ಈಗ 75 ಸಾವಿರ ರೂ. ಗಳಿಸುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ಮೂರು ಟನ್ ಔಷಧ ಮಾರಾಟದ ಗುರಿ ಇದೆ. ಆಗ, ಮಾಸಿಕ ಆದಾಯ 2.75 ಲಕ್ಷ ಆಗಲಿದೆ ಎಂದು ಲಿಬಿನ್ ಹೇಳಿದರು.
ತಿಂಗಳಿಗೆ 60 ಸಾವಿರ ಗಳಿಕೆ ಗುರಿ: ಕೊಪ್ಪಳದ ಭರತ್ ನಾಯಕ್ ಕಲಿತಿದ್ದು ಬಿಇ ಕೆಮಿಕಲ್ ಇಂಜಿನಿಯರಿಂಗ್. ಇದೀಗ ಈ ಕ್ಷೇತ್ರ ಆಯ್ಕೆ ಮಾಡಿಕೊಂಡು ದಾಳಿಂಬೆ, ಮೆಣಸಿನಕಾಯಿಗೆ ಸಿಂಪಡಿಸುವ ಸೂಕ್ಷ್ಮ ಜೀವಾಣುಗಳ ಮಿಶ್ರಣದ ಘನ
ಮತ್ತು ದ್ರವ್ಯಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ 350 ಲೀ. ಮಾರಿ 30 ಸಾವಿರ ರೂ. ಗಳಿಸುತ್ತಿದ್ದೇನೆ. ದುಪ್ಪಟ್ಟು ಮಾಡುವ ಗುರಿ ಹೊಂದಿದ್ದೇನೆ ಎಂದು ಭರತ್ ತಿಳಿಸಿದ್ದಾರೆ.
120 ಉತ್ಪನ್ನಗಳು ಲಭ್ಯ
ಕೃಷಿ ವಾಣಿಜ್ಯೀಕರಣ ಇನ್‌ಕ್ಯುಬೇಷನ್‌ನಲ್ಲಿ ಬೀಜ ಮತ್ತು ನಾಟಿ, ಗಿಡಗಳ ಆರೋಗ್ಯ ನಿರ್ವಹಣೆ ತಂತ್ರಜ್ಞಾನ, ಕೊಯ್ಲೋತ್ತರ ತಂತ್ರಜ್ಞಾನ, ಯಂತ್ರೋಪಕರಣ, ಜೈವಿಕ ತಂತ್ರಜ್ಞಾನ ಹೀಗೆ ಐದು ಪ್ರಕಾರದ ತಂತ್ರಜ್ಞಾನಗಳಲ್ಲಿ ಸಂಶೋಧನೆಗೆ ಅವಕಾಶ ಇದೆ. ಇದರಲ್ಲಿ ಒಟ್ಟಾರೆ 120 ಉತ್ಪನ್ನಗಳು ಲಭ್ಯ ಇವೆ. ಇದರಲ್ಲಿ ಯಾವುದಾದರೂ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು ಅಭಿವೃದಿಟಛಿಪಡಿಸಬಹುದು. ಈ ಉತ್ಪನ್ನಗಳ ಮಾರುಕಟ್ಟೆಗೆ ಐಐಎಚ್‌ಆರ್
ಲೋಗೋ ಬಳಸಿಕೊಳ್ಳಲೂ ಅವಕಾಶ ಇದೆ
ಎಸ್ಸೆಸ್ಸೆಲ್ಸಿ ಪಾಸಾದವರೂ ಕಲಿಯಬಹುದು
ಈ ತರಬೇತಿ ಪಡೆಯಲು ಯಾವುದೇ ಡಿಗ್ರಿ ಅವಶ್ಯಕತೆಯಿಲ್ಲ. ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು. ಕನಿಷ್ಠ 4 ದಿನಗಳಿಂದ ತಿಂಗಳುಗಳ ಕಾಲ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಅದು ಆಯಾ ಉತ್ಪನ್ನಗಳನ್ನು ಅವಲಂಬಿಸಿರುತ್ತದೆ. ಐಐಎಚ್‌ಆರ್‌ನಲ್ಲಿರುವ ಇನ್‌ಕ್ಯುಬೇಷನ್ ಕೇಂದ್ರ ದೇಶದ ಅತಿದೊಡ್ಡ ಸೆಂಟರ್ ಆಗಿದೆ.
2013ರಲ್ಲಿ ಆರಂಭಗೊಂಡ ಈ ಕೇಂದ್ರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೆ, ನಮ್ಮ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಕೂಡ ನೀಡಲಾಗುತ್ತದೆ. 500ಕ್ಕೂ ಅಧಿಕ ಪರವಾನಗಿಗಳನ್ನು ನೀಡಲಾಗಿದೆ ಎಂದು ಐಐಎಚ್‌ಆರ್ ಅಗ್ರಿ ಬ್ಯುಸಿನೆಸ್ ಇನ್‌ಕ್ಯುಬೇಷನ್ ಸೆಂಟರ್ ಮುಖ್ಯಸ್ಥೆ ಡಾ.ಸುಧಾ ಮೈಸೂರು ಮಾಹಿತಿ ನೀಡಿದರು. ಡಾ.ಸುಧಾ ಸಂಪರ್ಕ ಸಂಖ್ಯೆ: 9448073198
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.