

Team Udayavani, Jan 30, 2025, 10:54 AM IST
ಬೆಂಗಳೂರು: ಸಿನಿಮಾ ಶೈಲಿಯಲ್ಲಿ ನಗರದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಹಣ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದಾನೆ.
ಲ್ಯಾಂಗ್‌ಪೋರ್ಡ್ ರಸ್ತೆ ಯಲ್ಲಿರುವ ಕಂಪನಿಯೊಂದರ ಅಸೋಸಿಯೇಟ್ ಅಕೌಂಟೆಂಟ್ ಶ್ರೀಕಾಂತ್(34) ಬಂಧಿತ.
ಮಾವಳ್ಳಿ ನಿವಾಸಿಯಾದ ಆತ ಕಂಪನಿಯ ಬರೋಬ್ಬರಿ 7 ಕೋಟಿ ರೂ.ಗಳನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಕೆಲಸ ಮಾಡುತ್ತಿದ್ದ ಕಂಪೆನಿಯು ನಗರದ ವಿವಿಧ ಕಂಪನಿಗಳಿಗೆ ಹಣಕಾಸು ವಹಿವಾಟಿನ ಸೇವೆ ನೀಡುತ್ತಿದೆ. ಅದೇ ರೀತಿ ಕಾಡುಬೀಸನಹಳ್ಳಿಯ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಗೂ ಅಕೌಂಟಿಂಗ್ ಸೇವೆ ನೀಡುತ್ತಿದೆ. ಶ್ರೀಕಾಂತ್ 2023ರ ಆಗಸ್ಟ್‌ನಿಂದ ಆ ಕಂಪನಿಯಲ್ಲಿ ಅಸೋಸಿಯೇಟ್ ಅಕೌಂಟೆಂಟ್ ಆಗಿದ್ದ. ಸ್ವಿಗ್ಗಿ ಕಂಪನಿಯ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿಯನ್ನು ಶ್ರೀಕಾಂತ್‌ಗೆ ವಹಿಸಲಾಗಿತ್ತು. ಸ್ವಿಗ್ಗಿ ಕಂಪನಿಯು ಇದಕ್ಕಾಗಿ ಈ ಕಂಪನಿಗೆ ಪ್ರತಿ ತಿಂಗಳು 2 ಕೋಟಿ ರೂ. ಪಾವತಿಸುತ್ತಿತ್ತು. ಆದರೆ, ಆರೋಪಿ ಆ ಹಣವನ್ನು ಬೆಟ್ಟಿಂಗ್ ಆಡಲು ಬಳಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
6 ತಿಂಗಳಲ್ಲಿ 7 ಕೋಟಿ ವಂಚನೆ: ಶ್ರೀಕಾಂತ್, ಬೇಗನೆ ದುಡ್ಡು ಮಾಡುವ ಆಸೆಗೆ ಬಿದ್ದು 6 ತಿಂಗಳಲ್ಲಿ 7 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಸಂಗತಿಯನ್ನು ಸ್ವಿಗ್ಗಿ ಕಂಪನಿಯು ಲೆಕ್ಕಪರಿಶೋಧನೆಯಲ್ಲಿ ಪತ್ತೆಹಚ್ಚಿ ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿಗೆ ಮಾಹಿತಿ ನೀಡಿತ್ತು. ಬಳಿಕ ಕಂಪನಿ ಯವರು ಪರಿಶೀಲನೆ ಮಾಡಿದಾಗ ಶ್ರೀಕಾಂತ್, ಕಳೆದ ಆರು ತಿಂಗಳಲ್ಲಿ 7 ಕೋಟಿ ರೂ. ಅನ್ನು ಬಿಟಿಎನ್ ಎಕ್ಸ್‌ಚೆಂಜ್ 247.ಕಾಂ ಮೂಲಕ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!
Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕುರಿ ಕಳವು ಮಾಡಿದ್ದವರ ಬಂಧನ
Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!
Inquiry ನೆಪದಲ್ಲಿ ಗರ್ಭಿಣಿಗೆ ಪೊಲೀಸರ ಕಿರುಕುಳ: ಮಾನವ ಹಕ್ಕು ಗಳ ಆಯೋಗ ದಾಳಿ
Social media ಮೂಲಕ ಚೆನ್ನೈ ಯುವಕನಿಗೆ ಹನಿಟ್ರ್ಯಾಪ್: 6 ಮಂದಿ ಸೆರೆ
Kerala; ಫುಟ್‌ಬಾಲ್ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ
Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!
Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ
Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕುರಿ ಕಳವು ಮಾಡಿದ್ದವರ ಬಂಧನ
Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ
You seem to have an Ad Blocker on.
To continue reading, please turn it off or whitelist Udayavani.