ಹನಿಟ್ರ್ಯಾಪ್‌ಗೆ ಸಿಲುಕಿ ಐಎಎಸ್ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಯುವಕ ಆತ್ಮಹತ್ಯೆ!
Team Udayavani, Apr 8, 2021, 10:41 AM IST
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದ ಹನಿಟ್ರ್ಯಾಪ್‌ಗೆ ಒಳಗಾದ ಐಎಎಸ್ ಕನಸು ಕಂಡಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಆರ್.ಪುರಂ ಸಮೀಪದ ಭಟ್ಟರ ಹಳ್ಳಿ ನಿವಾಸಿ ಅವಿನಾಶ್ (26) ಆತ್ಮ ಹತ್ಯೆ ಮಾಡಿಕೊಂಡು ಯುವಕ. ಘಟನೆ ಸಂಬಂಧ ಯುವಕನ ಸಹೋದರಿ ನೀಡಿದ ದೂರಿನ ಮೇರೆಗೆ ನೇಹಾ ಶರ್ಮಾ, ತೇಜಸ್ ರಮೇಶ್, ಮೊಹಿನ್ ಖಾನ್, ರಾಬಿನ್ ಖಾನ್, ಜಾವೇದ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಟರಹಳ್ಳಿಯಲ್ಲಿ ಪೋಷಕರ ಜತೆ ವಾಸವಾಗಿದ್ದ ಅವಿನಾಶ್ ಎಂಬಿಎ ವ್ಯಾಸಂಗ ಮುಗಿಸಿ ಐಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿ ಕೆ.ಆರ್.ಪುರಂನಲ್ಲಿರುವ ಕೋಚಿಂಗ್ ಸೆಂಟರ್‌ಗೂ ಹೋಗುತ್ತಿದ್ದ. ಈ ಮಧ್ಯೆ ಸಾಮಾಜಿಕ ಜಾಲತಾಣ ಫೇಸ್ ಬುಕ್‌ನ ನಕಲಿ ಖಾತೆಯಿಂದ ನೇಹಾ ಶರ್ಮಾ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಅದನ್ನು ಸ್ವೀಕರಿಸುತ್ತಿದ್ದಂತೆ ಆ ಕಡೆಯಿಂದ ಸಂದೇಶಗಳು ಹರಿದು ಬಂದಿವೆ.
ಇದನ್ನೂ ಓದಿ:ತಂದೆ ಪರ ಮಾತಾಡಿದ ಮಗುವನ್ನು ಕೊಂದ ತಾಯಿ: ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ!
ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ ಆಕೆ ವಿಡಿಯೊ ಕಾಲ್ ಮಾಡಿದ್ದು, ಅದನ್ನು ಸ್ವೀಕರಿಸಿದ ಅವಿನಾಶ್‌ಗೆ ಪ್ರಚೋದಿಸಿದ್ದಾಳೆ. ಇಬ್ಬರು ಅಶ್ಲೀಲವಾಗಿ ವಿಡಿಯೊ ಚಾಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅದನ್ನು ಆಕೆ ಸಂಗ್ರಹಿಸಿಕೊಂಡಿದ್ದಾಳೆ.
ಅನಂತರ ಆಕೆ ಸಂದೇಶ ಕಳುಹಿಸಿ ಕೂಡಲೇ ತಾನೂ ಸೂಚಿಸಿದ ಖಾತೆಗೆ ಹಣ ಹಾಕಬೇಕು. ಇಲ್ಲವಾದಲ್ಲಿ ನಿನ್ನ ಅಶ್ಲೀಲ ವಿಡಿಯೊ ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಅದಕ್ಕೆ ಹೆದರಿದ ಅವಿನಾಶ್, ತನ್ನ ಖಾತೆ ಹಾಗೂ ಸ್ನೇಹಿತರಿಂದ ಹಣ ಪೆಡದು ಹಂತ-ಹಂತವಾಗಿ ಸುಮಾರು 35 ಸಾವಿರ ರೂ. ಕಳುಹಿಸಿದ್ದಾನೆ.
ಅನಂತರವೂ ಹಣಕ್ಕೆ ಬೇಡಿಕೆ ಇಟ್ಟಾಗ ಮರ್ಯಾದೆಗೆ ಅಂಜಿಕೊಂಡು ಮಾ.23ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಮೃತನ ಸಹೋದರಿಗೆ ಸಂದೇಶ ಕಳುಹಿಸಿದ ಕಿರಾತಕರು: ಅವಿನಾಶ್ ಫೇಸ್‌ಬುಕ್ ಖಾತೆಯಲ್ಲಿ ಆತನ ಸಹೋದರಿ ಅವರ ಮೆಸೆಂಜರ್ ಗೆ ನೇಹಾ ಶರ್ಮಾ ಎಂಬ ಖಾತೆಯಿಂದ “ನೀವು ಅಭಿಗೌಡರ ಕುಟುಂಬ ಸದಸ್ಯರಾ? ಎಂದು ಸಂದೇಶ ಕಳುಹಿಸಿದ್ದರು. ಅದರಿಂದ ಅನುಮಾನಗೊಂಡ ಅವರು, ಆತನ ಫ್ಯಾಮಿಲಿ ಫ್ರೆಂಡ್ ಎಂದು ಉತ್ತರಿಸಿದ್ದಾರೆ. ಬಳಿಕ ಅಭಿಗೌಡನ ಮೊಬೈಲ್ ನಂಬರ್ ಕೇಳಿದ್ದು, ಆಗ ಸಂಬಂಧಿ ಅನಿಲ್ ಕುಮಾರ್ ಮೊಬೈಲ್ ನಂಬರ್ ಕೊಡಲಾಗಿತ್ತು. ಕೆಲ ಹೊತ್ತಿನಲ್ಲೇ ಈ ನಂಬರ್‌ಗೆ ಸಂದೇಶಗಳು ಹರಿದು ಬಂದಿದ್ದು, ವಿಡಿಯೊ ಅಪ್‌ಲೋಡ್ ಮಾಡುವ ಕುರಿತು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಮದುವೆಯಾಗಲು ಮನೆ ಬಿಟ್ಟು ಬರಲು ಕೇಳದ ಹಿನ್ನೆಲೆ: ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಇರಿದ
ಬಳಿಕ ನೇಹಾ ಶರ್ಮಾ ಸೇರಿ ಇತರೆ ಆರೋಪಿಗಳ ಹೆಸರು ಕಳುಹಿಸಿದ್ದಾರೆ. ಹೀಗಾಗಿ ತನ್ನ ಸಹೋದರ ಅವಿನಾಶ್‌ಗೆ ನೇಹಾ ಶರ್ಮಾ ಎಂಬ ಯುವತಿ ಮತ್ತು ತಂಡ ಬೆದರಿಕೆ, ಕಿರುಕಳು ನೀಡಿದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅಮೃತ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜಸ್ಥಾನಕ್ಕೆ ತಂಡ: ಆರೋಪಿಗಳ ಮೊಬೈಲ್ ನಂಬರ್ ಹಾಗೂ ಫೇಸ್‌ಬುಕ್ ಐಪಿ ವಿಳಾಸ ದೆಹಲಿ ಸೇರಿ ಉತ್ತರ ಭಾರತ ತೋರಿಸುತ್ತಿದೆ. ಆದರೆ, ಆರೋಪಿಗಳು ರಾಜಸ್ಥಾನದಲ್ಲಿರುವ ಮಾಹಿತಿ ಸಿಕ್ಕಿದ್ದು, ಒಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.