ಶಾಲಾ ಮಕ್ಕಳೊಂದಿಗೆ ಯದುವೀರ ದಂಪತಿ ಸಂವಾದ
Team Udayavani, Mar 22, 2018, 12:23 PM IST
ಬೆಂಗಳೂರು: ಶಾಲಾ ಶಿಕ್ಷಣ, ಗ್ರಂಥಾಲಯದ ಮಹತ್ವ ಸೇರಿದಂತೆ ಹಲವು ವಿಷಯದ ಕುರಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿ ಬುಧವಾರ ಬನಶಂಕರಿಯ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮೈಸೂರು ಮೂಲದ ಕಲಿಸು ಫೌಂಡೇಶನ್ನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬನಶಂಕರಿ ಮೊದಲನೇ ಹಂತದ ಬ್ಯಾಟರಾಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟಿಸಿ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ತಾಳ್ಮೆಯಿಂದ ಯದುವೀರ ದಂಪತಿ ಉತ್ತರಿಸಿದರು. ಶಾಲಾ ಶಿಕ್ಷಣ ಮತ್ತು ಗ್ರಂಥಾಲಯದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಮಕ್ಕಳ ಪ್ರಶ್ನೆ: ನಿಮ್ಮ ಮೆಚ್ಚಿನ ನಗರ ಯಾವುದು? ನಿಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿರಾ ಅಥವಾ ಖಾಸಗಿ ಶಾಲೆಗೆ ಸೇರಿಸುತ್ತಿರಾ ಎಂದು ಮತ್ತೂಪ್ಪ ವಿದ್ಯಾರ್ಥಿ ಪ್ರಶ್ನೆ ಕೇಳಿದ. ಮೈಸೂರು ನನ್ನ ಇಷ್ಟದ ನಗರ. ಮಗನನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ ಮತ್ತು ಆ ಬಗ್ಗೆ ಚಿಂತಿಸಿಲ್ಲ ಎಂದು ಯದುವೀರ ಹೇಳಿದರು.
ತ್ರಿಶಿಕಾಗೆ ಪ್ರಶ್ನೆ: ನಿಮ್ಮ ಕಾಲೇಜು ಜೀವನ ಹೇಗಿತ್ತು ಎಂದು ತ್ರಿಷಿಕಾ ಅವರಿಗೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ, ಎಲ್ಲಾ ವಿದ್ಯಾರ್ಥಿಗಳಂತೆ ನಾನೂ ವಿದ್ಯಾರ್ಥಿಯಾಗಿದ್ದೆ. ರಾಜಸ್ತಾನ ಮತ್ತು ಮೈಸೂರಿಗೆ ಹವಾಮಾನ ಮತ್ತು ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಇರುವುದು ಬಿಟ್ಟು ಬೇರೇನೂ ವ್ಯತ್ಯಾಸವಿಲ್ಲ ಎಂದರು.
100 ಗ್ರಂಥಾಲಯ: ಕಲಿಸು ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ನಿಖೀಲ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದೇವೆ. 18 ಸರ್ಕಾರಿ ಶಾಲೆಗಳ 8 ಸಾವಿರಕ್ಕೂ ಅಧಿಕ ದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶ ಇದರ ಹಿಂದೆ ಇದೆ. ಈ ವರ್ಷದ 100 ಗ್ರಂಥಾಲಯಗಳನ್ನು ಆರಂಭಿಸಲಿದ್ದೇವೆ ಎಂದರು.
ಮಹಾರಾಜರ ವೇಷ ಏಕಿಲ್ಲ?: ನೀವು ಮಹಾರಾಜರ ವೇಷದಲ್ಲಿ ಏಕೆ ಬಂದಿಲ್ಲ ಎಂದು ವಿದ್ಯಾರ್ಥಿಯೊಬ್ಬ ಯದುವೀರ ಕೃಷ್ಣರಾಜ ಒಡೆಯವರ್ ಅವರಿಗೆ ಕೇಳಿದ ಪ್ರಶ್ನೆಗೆ”ಅರಮನೆಗಳಲ್ಲಿ ನಡೆಯುವ ವಿವಿಧ ಆಚರಣೆ ವೇಳೆ ಮಾತ್ರ ಆ ವೇಷ ಭೂಷಣ ಧರಿಸುತ್ತೇವೆ ಎಂದರು. ಹಾಗಾದರೆ ನಿಮ್ಮೊಂದಿಗೆ ಅಂಗರಕ್ಷಕರು ಏಕಿಲ್ಲ ಎಂದು ವಿದ್ಯಾರ್ಥಿ ಮರು ಪ್ರಶ್ನಿಸಿದ. ಈಗ ಅದರ ಅವಶ್ಯಕತೆ ಇಲ್ಲ ಮತ್ತು ನಾನೊಬ್ಬ ಸಾಮಾನ್ಯ ಮನುಷ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.