ಜಮೀರ್‌ V/s ಅಲ್ತಾಫ್


Team Udayavani, Apr 3, 2018, 12:33 PM IST

zameer-vs-althaf.jpg

ಬೆಂಗಳೂರು: ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದಲ್ಲದೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕಿದ್ದ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಜಮೀರ್‌ ಅಹಮದ್‌ಗೆ ತಿರುಗೇಟು ನೀಡಲು ಜೆಡಿಎಸ್‌ ನಿರ್ಧರಿಸಿದ್ದು, ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ಅಲ್ತಾಫ್ ಖಾನ್‌ರನ್ನು ಜಮೀರ್‌ ವಿರುದ್ಧ ಸ್ಪರ್ಧೆಗೆ ಸಜ್ಜುಗೊಳಿಸಿದೆ.

ಅಲ್ತಾಫ್ ಖಾನ್‌ ಸೋಮವಾರ ಜೆಡಿಎಸ್‌ ಸೇರಿದ್ದು, ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡ ಮಾಜಿ ಪ್ರಧಾನಿ ದೇವೇಗೌಡ, ಚಾಮರಾಜಪೇಟೆ ಕ್ಷೇತ್ರದಿಂದ ಅಲ್ತಾಫ್ ಖಾನ್‌ ಅವರೇ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇನ್ನೊಂದೆಡೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜೆಡಿಎಸ್‌ ಪಾಲಿಕೆ ಸದಸ್ಯ ಇಮ್ರಾನ್‌ ಪಾಷ ಅವರನ್ನೂ ಸಮಾಧಾನಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ದೇವೇಗೌಡ ಅವರು, “ಚಾಮರಾಜಪೇಟೆಯ ಮತ ಸಂಯೋಜನೆ ಹೇಗೆ? ಯಾರ ಶಕ್ತಿ ಏನು ಎಂಬುದು ನನಗೆ ಗೊತ್ತಿದೆ. ಕಳೆದ ಎರಡು ವರ್ಷದಿಂದ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದು, ಇಂದು ಹುಡುಕಾಟ ಕೊನೆಯಾಗಿದೆ. ಕ್ಷೇತ್ರದಲ್ಲಿ ಅಲ್ತಾಫ್ ಗೆಲ್ಲುವುದರಲ್ಲಿ ಸಂಶಯವಿಲ್ಲ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏನಾದರೂ ಆಗಬಹುದು: “ಚುನಾವಣೆ ಮುಗಿಯುವುದರೊಳಗೆ ಚಾಮರಾಜಪೇಟೆಯಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರದ ಹಿಡಿತದಲ್ಲಿ ಚುನಾವಣೆ ನಡೆಯಬಾರದು. ಕೆಂಪಯ್ಯ ಆಡಳಿತ ಕೊನೆಯಾಗಬೇಕು. ಅಲ್ತಾಫ್ ಮೇಲೆ ಅವರಿಗೆ ದ್ವೇಷವಿದೆ. ಅವರಿಗೆ ನಾವು ರಕ್ಷಣೆ ನೀಡುತ್ತೇವೆ ಎಂದು ಹೇಳಿದ ಅವರು, ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ಚಾಮರಾಜಪೇಟೆಯಲ್ಲಿ ಹೊಸ ಶಖೆ ಆರಂಭವಾಗಿದೆ. ಕ್ಷೇತ್ರದಲ್ಲಿ ಎಲ್ಲ ಸಮುದಾಯದವರೂ ಬೇಸತ್ತಿದ್ದಾರೆ. ಈಗ ನನ್ನ ತೇಜೊವಧೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಸೋಮವಾರ ಬೆಳಗ್ಗೆ 10.30ಕ್ಕೆ ಅಲ್ತಾಫ್ ಕೈಯಲ್ಲಿ ಜೆಡಿಎಸ್‌ ಬಾವುಟ ಕೊಟ್ಟಿದ್ದು, ಸಮಯ ನೋಡಿಯೇ ಈ ಕೆಲಸ ಮಾಡಿದ್ದೇನೆ ಎಂದರು.

ಟಿಕೆಟ್‌ ಆಕಾಂಕ್ಷಿಯಾಗಿದ್ದ ಇಮ್ರಾನ್‌ ಪಾಷ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷಆರ್‌.ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

ಜಮೀರ್‌ ವಿರುದ್ಧ ಅಲ್ತಾಫ್  ವಾಗ್ಧಾಳಿ: “ಅವರು ದೇವೇಗೌಡರನ್ನು ತಂದೆ ಎಂದರು. ಜೆಡಿಎಸ್‌ ಪಕ್ಷ ತನ್ನ ತಾಯಿ ಎಂದರು. ಆದರೆ ಈಗ ಅದೇ ತಂದೆ, ತಾಯಿಯನ್ನು ಬಿಟ್ಟು ಹೋಗಿದ್ದಾರೆ. ಇಂಥವರು ಕ್ಷೇತ್ರದ ಜನರಿಗೆ ನಿಷ್ಠರಾಗಿರುತ್ತಾರೆ ಎಂದು ಏನು ಗ್ಯಾರಂಟಿ?’ ಎನ್ನುವ ಮೂಲಕ ಅಲ್ತಾಫ್ ಖಾನ್‌, ಮಾಜಿ ಶಾಸಕ ಜಮೀರ್‌ ಅಹಮದ್‌ ವಿರುದ್ಧ ಕಿಡಿ ಕಾರಿದರು.

ಜೆ.ಪಿ.ಭವನದಲ್ಲಿ ಸೋಮವಾರ ಜೆಡಿಎಸ್‌ ಸೇರಿದ ನಂತರ ಮಾತನಾಡಿದ ಅಲ್ತಾಫ್ ಖಾನ್‌, “ಜೆಡಿಎಸ್‌ ತಾಯಿ ಎಂದು ಹೇಳುತ್ತಲೇ ಮೋಸ ಮಾಡಿದವರಿಗೆ ದೇವರು ಪಾಠ ಕಲಿಸುತ್ತಾನೆ,’ ಎಂದರು.

ಸಿಕ್ಕವರಿಗೆಲ್ಲಾ ಕಿಸ್‌ ಕೊಡ್ತಾರೆ!: “ಜಮೀರ್‌ ಈಗ ಸಿಕ್ಕ ಸಿಕ್ಕವರಿಗೆ ಕಿಸ್‌ ಕೊಡುವುದನ್ನು ರೂಢಿಸಿಕೊಂಡಿದ್ದಾರೆ. ಅವರದ್ದು ಎಂತಹ ನಡತೆ ಎಂದರೆ ಸಿಕ್ಕಿದರೆ ಕಿಸ್‌, ಇಲ್ಲವೆಂದರೆ ಆರು ತಿಂಗಳು ಮಿಸ್‌. ಇಂತಹ ಕಿಸ್‌ ಮಿಸ್‌ ಶಾಸಕರು ನಮ್ಮ ಕ್ಷೇತ್ರದಲ್ಲಿದ್ದರು. ಅವರಿಗೆ ನಾನು ಚಾಲೆಂಜ್‌ ಮಾಡುತ್ತೇನೆ. ನಾನು ಚಾಮರಾಜಪೇಟೆಯ ಮಣ್ಣಿನ ಮಗ.

ನೀನು ನಾಲ್ಕೂವರೆ ಅಡಿ ಇದೀಯಾ, ನಾನು ಆರು ಅಡಿಗೆ ಒಂದಿಂಚು ಕಮ್ಮಿ. ಆರಡಿ ದೊಡ್ಡದೋ, ನಾಲ್ಕೂವರೆ ಅಡಿ ದೊಡ್ಡದೋ ಚುನಾವಣೆಯಲ್ಲಿ ನೋಡೇ ಬಿಡೋಣ ಎಂದು,’ ಸವಾಲು ಹಾಕಿದರು. “ಕಚೇರಿ ತೆರೆಯಲು ಬಾಡಿಗೆ ನಂದು, ಅಡ್ವಾನ್ಸ್‌ ನಂದು. ನಿನ್ನ ಕೈ ಹಿಡೀತೀನಿ, ಕಾಲು ಹಿಡೀತೀನಿ, ನನ್ನ ಪರವಾಗಿ ಕೆಲಸ ಮಾಡು’ ಎಂದು ಜಮೀರ್‌ ಅಹಮದ್‌ ಬೇಡಿಕೊಂಡ ವೀಡಿಯೋ ನನ್ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ.

ನೀನು (ಜಮೀರ್‌ ಅಹಮದ್‌) 300 ಕೋಟಿ ರೂ. ಹೇಗೆ ಮಾಡಿದೆ, ಬಡವರ ಹತ್ತು ಅಂಗಡಿ ಮಾರಾಟ ಮಾಡಿದ್ದು ಸೇರಿ ಎಲ್ಲ ದಾಖಲೆ ನನ್ನ ಬಳಿ ಇದ್ದು ಅದನ್ನೂ ಬಿಡುಗಡೆ ಮಾಡುತ್ತೇನೆ. ಅದೇ ರೀತಿ ಅಖಂಡ ಶ್ರೀನಿವಾಸ ಮೂರ್ತಿ ಯಾರಧ್ದೋ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ ದಾಖಲೆಯೂ ಇದ್ದು, ಅದನ್ನೂ ಬಹಿರಂಗಗೊಳಿಸುತ್ತೇನೆ ಎಂದು ಹೇಳಿದರು.

ಟಾಪ್ ನ್ಯೂಸ್

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

prahlad-joshi

Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ

1-a-kharge

Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

Darshan (3)

Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್

20-hosanagara

Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

17-bng

Bengaluru: ನಟ ದರ್ಶನ್‌ಗೆ ಜಾಮೀನು: ಸುಪ್ರೀಂಗೆ ಪೊಲೀಸರ ಮೊರೆ?

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

15-bng

Bengaluru: ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-hampi-1

Deepawali; ಸರಣಿ‌ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್‌ ಢಿಕ್ಕಿ… ಮಹಿಳೆಗೆ ಗಾಯ

Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್‌ ಢಿಕ್ಕಿ… ಮಹಿಳೆಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.