1,300 ಗ್ರಾಂ ಗಾಂಜಾ ವಶ: ಐವರ ಬಂಧನ
Team Udayavani, Sep 5, 2020, 12:56 PM IST
ನೆಲಮಂಗಲ: ತಾಲೂಕಿನ ಪೊಲೀಸರು ಗಾಂಜಾಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ 5 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಸಂತೋಷ್ ಚೌಹನ್(35), ದಾಂಜಿ ಕುಮಾರ್ (25), ಗುರುಪ್ರಸಾದ್(31), ಇರ್ಫಾನ್ (21) ಸೇರಿ ದಂತೆ ನಾಲ್ಕು ಜನರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಡೆನ್ಸೋ ಫ್ಯಾಕ್ಟರಿ ಪಕ್ಕದ ನರಹರಿಯವರ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವಾಗ ಬಂಧಿಸಿದರೆ, ಅಶೋಕ್ ಶರ್ಮ(28) ಎಂಬುವವನನ್ನು ಶಿವಗಂಗೆ ರಸ್ತೆಯ ಲಾರಿ ಪಾರ್ಕಿಂಗ್‌ನಲ್ಲಿ ಮಾರಾಟ ಮಾಡುವಾಗ ಡಾಬಸ್‌ಪೇಟೆ ಪೊಲೀಸರು ಬಂಧನಗೊಳಿಸಿದ್ಧಾರೆ.
1ಕೆಜಿ 300ಗ್ರಾಂ ವಶ: ನೆಲಮಂಗಲ ಗ್ರಾಮಾಂತರ ಠಾಣೆಯ ಪಿಎಸ್‌ಐ ವಸಂತ್‌ಕುಮಾರ್ ನೇತೃತ್ವದಲ್ಲಿ 4 ಮಾರಾಟಗಾರ ಬಂಧನಗೊಳಿಸಿ 1 ಕೆಜಿ 90 ಗ್ರಾಂ ಗಾಂಜಾ ವಶ ಪಡಿಸಿಕೊಂಡರೆ, ದಾಬಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಡಿ.ಆರ್ ಮಂಜುನಾಥ್ ಅವರು ಒಬ್ಬ ಮಾರಾಟಗಾರನನ್ನು ಬಂಧಿಸಿ 210 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲದಲ್ಲಿ ಗಾಂಜಾವಿಲ್ಲ ಎನ್ನುತ್ತಿದ್ದ ಪೊಲೀಸರಿಗೆ ಕಾರ್ಯಾಚರಣೆಯಿಂದ ಗಾಂಜಾ ಮಾರಾಟಗಾರರ ಜಾಲ ಪತ್ತೆಯಾಗಿದ್ದು, ಮತ್ತಷ್ಟು ಜನರು ಸಿಕ್ಕಿಬೀಳುವ ಸಾಧ್ಯತೆ ಇದೆ.
ತಹಶೀಲ್ದಾರ್,ಡಿವೈಎಸ್‌ಪಿ ಪರಿಶೀಲನೆ: ಗಾಂಜಾ ಮಾರಾಟ ಮಾಡುತಿದ್ದ ಸ್ಥಳವನ್ನು ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಡಿವೈಎಸ್‌ಪಿ ಮೋಹನ್ ಕುಮಾರ್ ಪರಿಶೀಲನೆ ಮಾಡಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಯಾಚರಣೆ: ನೆಲಮಂಗಲ ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಪಿಎಸ್‌ಐ ಡಿ.ಆರ್ ಮಂಜುನಾಥ್, ವಸಂತ್‌ಕುಮಾರ್, ಸುರೇಶ್ ಹಾಗೂ ಸಿಬ್ಬಂದಿಗಳು ವಿಶೇಷ ತಂಡ ಕಾರ್ಯಾಚಾರಣೆ ಮೂಲಕ ಬಂಧನಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.