ಸ್ವದೇಶಗಳಿಗೆ ತೆರಳಿದ 3 ಸಾವಿರ ವಿದೇಶಿಗರು
ಭಾರತದಲ್ಲೇ ಸಿಲುಕಿದ್ದ ವಿದೇಶಿಗರು 17 ದೇಶಗಳಿಗೆ 22 ವಿಮಾನಗಳ ಹಾರಾಟ
Team Udayavani, Apr 30, 2020, 4:35 PM IST
ದೇವನಹಳ್ಳಿ: ಲಾಕ್‌ಡೌನ್‌ನಿಂದಾಗಿ ಭಾರತದಲ್ಲೇ ಸಿಲುಕಿಕೊಂಡಿದ್ದ 17 ದೇಶಗಳ 3000 ಸಾವಿರ ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ 22
ವಿಮಾನಗಳ ಮೂಲಕ ಸ್ವದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮೂರು ದಿನಗಳಲ್ಲಿ ಮೂರು ವಿಮಾನಗಳ ಹಾರಾಟ ಕಾರ್ಯಾಚರಣೆ ನಡೆಸಿದ್ದು ಜಪಾನ್ ಏರ್ ಲೈನ್ಸ್(ಜೆಎಎಲ್) ಟೋಕಿಯೋಗೆ ಹಾರಾಟ ನಡೆಸಿ, ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಬಳಿಕ ದಕ್ಷಿಣ ಕೊರಿಯಾದ ಇಂಚೆನ್‌ಗೆ ಕೊರಿಯನ್ ಏರ್ ಸಂಸ್ಥೆ ಹಾರಾಟ ನಡೆಸಿತು. ಇವುಗಳೊಂದಿಗೆ ಅಜರ್‌ಬೈಜಾನ್, ಬಾಗ್ಧಾದ್, ಖೈರೊ, ಕೊಲಂಬೊ, ದೋಹಾ, ಫ್ರಾಂಕ್‌ಫರ್ಟ್, ಲಂಡನ್, ಮಾಲೆ, ಮಸ್ಕಾಟ್, ಪ್ಯಾರಿಸ್, ಪಾರೊ(ಭೂತಾನ್), ರಿಯಾದ್, ರೋಮ್, ಸ್ಟಾಕ್‌ಹೋಮ್ ಮತ್ತು ಟಿಬಿಲಿಸಿ(ಜಾರ್ಜಿಯಾ) ಮುಂತಾದ ಸ್ಥಳಗಳಿಗೆ ಹಾರಾಟ ನಡೆಸಲಾಯಿತು.
ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ತಮ್ಮ ದೇಶಕ್ಕೆ ಒಯ್ಯಲು ಮೊದಲ ಹಾರಾಟ ಫ್ರಾಂಕ್‌ಫರ್ಟ್‌ಗೆ ನಡೆಸಲಾಗಿದೆ. ಏರ್ ಇಂಡಿಯಾ ಮಾರ್ಚ್ 31, 2020ರಂದು ವಿಮಾನ ಹಾರಾಟದ ಕಾರ್ಯಾಚರಣೆ ನಡೆಸಿತ್ತು. ಈ ಮೇಲೆ ಹೇಳಿದ ಸ್ಥಳಗಳ ಪೈಕಿ 8 ನೂತನ ನಗರಗಳಿಗೆ ವಿಮಾನ ಹಾರಾಟಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಸ್ಥಳಗಳಲ್ಲಿ, ಬಾಕೂ(ಅಜರ್‌ಬೈಜಾನ್), ಬಾಗ್ಧಾದ್, ಖೈರೋ, ಇಂಚಿಯಾನ್, ಪಾರೊ(ಭೂತಾನ್), ರೋಮ್, ಸ್ಟಾಕ್ ಹೋಮ್ ಮತ್ತು ಟಿಬಿಲಿಸಿ(ಜಾರ್ಜಿಯಾ) ಸೇರಿವೆ.
ವಿಮಾನ ನಿಲ್ದಾಣಗಳ ಸಮನ್ವಯ ಕಾರ್ಯ ಎರಡೂ ದೇಶಗಳ ಸರ್ಕಾರದ ಮಟ್ಟದಲ್ಲಿ ನಡೆದಿದ್ದು, ಬೆಂಗಳೂರು ಮತ್ತು ದಕ್ಷಿಣ ಭಾರತದಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರು, ಸ್ವಸ್ಥಳಗಳಿಗೆ ತೆರಳಲು ನೆರವು ನೀಡಲಾಯಿತು. ಪ್ರತಿ ವಿಮಾನ ಹಾರಾಟದ ಸಿದ್ಧತೆಗೆ ಟರ್ಮಿನಲ್ ಮತ್ತು ಇತರೆ ಪ್ರಯಾಣಿಕರ ಸ್ಪರ್ಶ ಹೊಂದಿರುವ ಸ್ಥಳ ಸ್ವಚ್ಛಗೊಳಿಸಿ, ಸೋಂಕು ನಿವಾರಕ ಮತ್ತು ಕ್ರಿಮಿನಾಶಕ ಹೊಗೆ ಹಾಕಲಾಯಿತು.
ಬಿಐಎಎಲ್ ಸಿಬ್ಬಂದಿ ಬೆಂಬಲದೊಂದಿಗೆ ಟರ್ಮಿನಲ್‌ನಲ್ಲಿ ಸಿಐಎಸ್‌ಎಫ್, ವಲಸೆ ಮತ್ತು ವಿಮಾನಯಾನ ಸಂಸ್ಥೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದರೊಂದಿಗೆ ಪ್ರಯಾಣಿಕರು ಸಾಮಾಜಿಕ ಅಂತರ ಖಾತ್ರಿ ಮಾಡಿಕೊಳ್ಳಲಾಯಿತು. ಜೊತೆಗೆ ಅವರಿಗೆ ಹ್ಯಾಂಡ್ ಸ್ಯಾನಿಟೈಸರ್‌ಗಳು ಮತ್ತು ಮಾಸ್ಕ್ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.