ರಾಷ್ಟ್ರ ಮಟ್ಟದ ಸಂಸ್ಕೃತ ಒಲಂಪಿಯಾಡ್ ಸ್ಫರ್ಧೆಯಲ್ಲಿ ಫಸ್ಟ್ ರ‍್ಯಾಂಕ್ ಗಳಿಸಿದ ಪ್ರಜ್ಞಾ ಭಟ್
Team Udayavani, Feb 28, 2022, 7:51 PM IST
ನೆಲಮಂಗಲ : ಸಂಸ್ಕೃತ ಭಾರತಿ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಏಳನೇ ಸಂಸ್ಕೃತ ಒಲಂಪಿಯಾಡ್ ನಲ್ಲಿ ವಾಗ್ದೇವಿ ವಿಲಾಸ ಶಾಲೆ ನೆಲಮಂಗಲದ ವಿದ್ಯಾರ್ಥಿನಿಯಾದ ಪ್ರಜ್ಞಾ ಭಟ್ ಮೊದಲನೇ ರ‍್ಯಾಂಕ್ ಗಳಿಸಿದ್ದಾಳೆ.
ಸಂಸ್ಕೃತ ಭಾರತಿ ಶೈಕ್ಷಣಿಕ ಟ್ರಸ್ಟ್ ರಾಷ್ಟ್ರಾದ್ಯಂತ ಆರರಿಂದ ಹತ್ತನೇ ತರಗತಿಯ ತನಕ ನಡೆಸುವ ಈ ಸ್ಪರ್ಧೆಯಲ್ಲಿ ಹಲವು ರಾಜ್ಯಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವರು. ಮೂರು ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯ ಎರಡನೇ ಹಂತದಲ್ಲಿ ನೆಗೆಟಿವ್ ಅಂಕಗಳು ಸಹ ಇರುತ್ತವೆ . ಮೊದಲ ಹಂತದಲ್ಲಿ 96% , ಎರಡನೇ ಹಂತದಲ್ಲಿ97.5 % ಹಾಗೂ ಮೂರನೇ ಹಂತ ಮೌಖಿಕದಲ್ಲೂ ಉತ್ತಮ ಅಂಕಗಳಿಸಿ , ಎಂಟನೇ ತರಗತಿಯ ವಿಭಾಗದಲ್ಲಿ ರಾಷ್ಟ್ರಕ್ಕೇ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಈ ಕಾರಣಕ್ಕೆ ವಾಗ್ದೇವಿ ವಿಲಾಸ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ಹರೀಶ್ ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಮಗಳ ಸಾಧನೆಗೆ ಪಾಲಕರೂ ಹರ್ಷ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.