ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ
ಜಿಲ್ಲಾದ್ಯಂತ 53,350 ಹೆಕ್ಟೆರ್ ರಾಗಿ ಬಿತ್ತನೆ ಬಂಪರ್ ಇಳುವರಿ ನಿರೀಕ್ಷೆಯಲ್ಲಿರುವ ರಾಗಿ ಬೆಳೆಗಾರರು
Team Udayavani, Oct 20, 2021, 3:24 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ರಾಗಿ ಬೆಳೆ ಮಳೆಯಿಲ್ಲದೆ ಬತ್ತಿಹೋಗುತ್ತಾ. ಮಳೆಗಾಗಿ ಮುಗಿಲಕಡೆ ಮುಖಮಾಡಿದ್ದ ರೈತಸಮುದಾಯಕ್ಕೆ ಹೆಚ್ಚಿನ ಮಳೆ ಬಂದಿದೆ. ಜಿಲ್ಲೆಯಲ್ಲಿ ರಾಗಿ ಬೆಳೆ ಹಸಿರುಹೊದಿಕೆಯೊಂದಿಗೆ ಹುಲ್ಲುಹಾಸಾಗಿ ಬೆಳೆಯುತ್ತಿದ್ದು ಬಹುತೇಕ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಜುಲೈ ಮತ್ತು ಆಗಸ್ಟ್‌ನಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು, ಮಳೆ ಆಗಿರಲಿಲ್ಲ. ನಂತರ ಬಂದಮಳೆಗೆ ರಾಗಿ ಪೈರು ಮೊಳಕೆಯೊಡೆದು ಹುಟ್ಟಿಬಂದಿತ್ತು. ಕಳೆದ ಹದಿನೈದು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಬಯಲುಸೀಮೆಯ ಪ್ರದೇಶವಾಗಿರು ವುದರಿಂದ ಯಾವುದೇ ನದಿಮೂಲಗಳು, ಡ್ಯಾಮ್ ಗಳು ಇಲ್ಲದ ಕಾರಣ ಮಳೆ ಆಶ್ರಿತವಾಗಿಯೇ ರಾಗಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆ ಆಶ್ರಿತ ಬೆಳೆಗಳೇ ಅಧಿಕವಾಗಿದೆ. ಜಿಲ್ಲೆಯ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಜಿಲ್ಲೆಯಲ್ಲಿ ಒಣಗಿದ್ದ ಬೆಳೆ ಈಗ ಕಳೆಕಟ್ಟಿದೆ. ಕೆಲಕೆರೆಗಳು ಕೋಡಿ ಬಿದ್ದಿವೆ. ಕೆರೆ ಕಟ್ಟೆ, ಹಳ್ಳಕೊಳ್ಳ, ಕೃಷಿಹೊಂಡ, ಕುಂಟೆಗಳಲ್ಲಿ ಮಳೆಯಿಂದ ನೀರು ತುಂಬಿವೆ.
ಮಳೆಯಿಂದ ಅನುಕೂಲವಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದೇ ರೀತಿ ಮಳೆ ಬಂದರೆ ರಾಗಿ ಬೆಳೆ ಬಂಪರ್ ಬರಲಿದೆ. ರೈತರು ಪ್ರತಿವರ್ಷವೂ ರಾಗಿಬೆಳೆಯನ್ನೇ ನಂಬಿ ಕಾಲಕಾಲಕ್ಕೆ ಮಳೆರಾಯ ಕೃಪೆ ತೋರಬೇಕೆಂದು ಮಳೆಗಾಗಿ ದೇವರ ಮೊರೆ ಹೋಗುತ್ತಾರೆ. ಇದೀಗ ಅಕ್ಟೋಬರ್ ಮೊದಲ ವಾರದಿಂದ ಬರುತ್ತಿರುವ ಹದ ಮಳೆಗೆ ಉತ್ತಮ ಬೆಳೆಗಳು ಎಲ್ಲೆಲ್ಲೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ.
ಇದನ್ನೂ ಓದಿ;- ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ
ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಆಗುತ್ತಿದೆ. ರೈತರು ನಿತ್ಯಬಳಕೆಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡುತ್ತಿದ್ದರಿಂದ ಖರ್ಚಿನ ಭಾಗವಾದರೂ ಸಿಗುತ್ತಿತ್ತು. ಈ ವರ್ಷವೂ ಅದೇ ನಿರೀಕ್ಷೆಯಲ್ಲಿರುವ ರೈತರು ಮಳೆ ಬಿಂದಿರುವುದರಿಂದ ತುಸು ಖುಷಿಯಲ್ಲಿದ್ದಾರೆ. ರಾಸುಗಳಿಗೆ ಮೇವಿನ ಕೊರತೆ ನೀಗಿದೆ. ಹೆಚ್ಚು ಹುಲ್ಲು ಬರುವುದರಿಂದ ರಾಸುಗಳಿಗೆ ಮೇವು ಸಿಗುವಂತಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಇಂದಿಗೂ ಸಹ ಹೈನುಗಾರಿಕೆಯನ್ನು ನಂಬಿದ್ದಾರೆ. ಭೂಮಿತಾಯಿ ಹಸಿರಿನಿಂದ ಕಂಗೊಳಿಸುತ್ತಿದ್ದು, ರಾಸುಗಳಿಗೆ ಬರಪೂರ ಮೇವು ಸಿಗುತ್ತಿದ್ದು ರೈತರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಮಳೆ- ಬಿತ್ತನೆ ಮಾಹಿತಿ-
ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ 910ಮಿ.ಮಿ. ಮಳೆಯಾಗಿದೆ. ಅ, 1 ರಿಂದ 18ರವರೆಗೆ 214ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್ ಮಾಹೆಯಲ್ಲಿ ದೇವನಹಳ್ಳಿ-214ಮಿ. ಮೀ., ದೊಡ್ಡಬಳ್ಳಾಪುರ-245ಮಿ.ಮೀ., ನೆಲಮಂಗಲ-221ಮಿ.ಮೀ., ಹೊಸಕೋಟೆ- 157ಮಿ.ಮೀ. ಒಟ್ಟು 214ಮಿ.ಮೀ. ಮಳೆಯಾಗಿದೆ.
ಜನವರಿಯಿಂದ ಅಕ್ಟೋಬರ್ ವರೆಗೆ ದೇವನಹಳ್ಳಿ- 867ಮಿ.ಮೀ., ದೊಡ್ಡಬಳ್ಳಾಪುರ- 967ಮಿ.ಮೀ., ಹೊಸಕೋಟೆ-886ಮಿ.ಮೀ., ನೆಲಮಂಗಲ-879ಮಿ.ಮೀ. ಒಟ್ಟು 910ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಸುಮಾರು 53350 ಹೆಕ್ಟೇರ್ ರಾಗಿ ಬಿತ್ತನೆ ಮಾಡಿದ್ದಾರೆ. ರಾಗಿ ಬೆಳೆಯನ್ನು ನಂಬಿದ್ದಾರೆ. ಶೇ.105.7ರಷ್ಟು ರಾಗಿ ಬಿತ್ತನೆ ಕಾರ್ಯ ಮುಗಿದಿದೆ.
ದೇವನಹಳ್ಳಿ-10842ಹೆಕ್ಟೇರ್, ದೊಡ್ಡಬಳ್ಳಾಪುರ- 16710ಹೆಕ್ಟೇರ್, ಹೊಸಕೋಟೆ-9712ಹೆಕ್ಟೇರ್, ನೆಲಮಂಗಲ-16086ಹೆಕ್ಟೇರ್ ಒಟ್ಟು 53350ಹೆಕ್ಟೇರ್‌ರಾಗಿ ಬಿತ್ತನೆಯಾಗಿದೆ.
“ಕಳೆದವರ್ಷ ತೆನೆ ಬಿಡುವ ವೇಳೆಗೆ ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕಡಿಮೆ ಬಂದಿತ್ತು. ಈ ಭಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೇವೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗೆ ಅನುಕೂಲವಾಗಿದೆ.”
– ರವಿಕುಮಾರ್, ರೈತ
ಜಿಲ್ಲೆಯ ಎಲ್ಲಾಕಡೆ ಮಳೆ ಸುರಿಯುತ್ತಿದೆ. ಇದರಿಂದ ರಾಗಿಬೆಳೆಗೆ ಬಹಳ ಅನುಕೂಲವಾಗಿದೆ. ಜಿಲ್ಲೆಯಲ್ಲಿ 53350ಹೆಕ್ಟೇರ್ ರಾಗಿ ಬಿತ್ತನೆಯಾಗಿದೆ. ಉತ್ತಮ ಇಳುವರಿ ಬರುವ ಸಾಧ್ಯತೆಯಿದೆ. ರೈತರಿಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ.
– ವಿನುತ, ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.