ಅನೈತಿಕ ಚಟುವಟಿಕೆಗಳ ತಾಣವಾದ ಮಾರುಕಟ್ಟೆ
Team Udayavani, Jun 19, 2023, 1:38 PM IST
ದೇವನಹಳ್ಳಿ: ದಳ್ಳಾಳಿಗಳ ಹಾವಳಿ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪುರಸಭೆ ಸಹಯೋಗ ದೊಂದಿಗೆ 48 ಲಕ್ಷ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆ ಉದ್ಘಾಟನೆ ಮಾಡಿ ದೇವನಹಳ್ಳಿ ಪುರಸಭೆಗೆ ಹಸ್ತಾಂತರಿಸಿ ಒಂದು ವರ್ಷ ಕಳೆದರು ಇದು ವರೆಗೂ ಬಳಕೆಯಾಗದೆ ಕುಡುಕರು, ಅನಾಥರು, ಜೂಜುಕೋರರ ತಾಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ರೈತರು ಬೆಳೆದ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಅಧಿಕಾರಿಗಳಿಗಿಲ್ಲ ಇಚ್ಚಾಶಕ್ತಿ: ಕೃಷಿ ಉತ್ಪನ್ನ ಮಾರು ಕಟ್ಟೆ ದೇವನಹಳ್ಳಿ ಪುರಸಭೆಗೆ ಹಸ್ತಾಂತರ ವಾಗಿ ಒಂದು ವರ್ಷ ಕಳೆದಿದ್ದು ಹರಾಜು ಮೂಲಕ ರೈತರು ಅಥವಾ ಬೀದಿ ಬದಿ ವ್ಯಾಪಾರಿ, ಹೂ ಹಾಗೂ ತರಕಾರಿ ಹಣ್ಣು ವ್ಯಾಪಾರಸ್ಥರನ್ನು ಮಾರು ಕಟ್ಟೆಗೆ ಸ್ಥಳಾಂತರಿಸಬಹುದಿತ್ತು ಆದರೆ ಅಧಿಕಾರಿ ಗಳು ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ಕೆಲ ವ್ಯಾಪಾರಸ್ಥರು ದೂರುತ್ತಿದ್ದಾರೆ.
ಅನೈತಿಕ ಚಟುವಟಿಕೆಗಳ ತಾಣ: ಸಂಜೆ ಯಾಗುತ್ತಿದ್ದಂತೆ ಮಾರುಕಟ್ಟೆ ಅಕ್ಕಪಕ್ಕದಲ್ಲೆ ವೈನ್ ಶಾಪ್‌ಗ್ಳಿದ್ದು ಕುಡುಕರು ಮಾರುಕಟ್ಟೆಯಲ್ಲಿ ಕುಳಿತು ಕುಡಿದು ಅಲ್ಲೇ ಮಲಮೂತ್ರ ವಿಸರ್ಜನೆ, ಮಾಡಿ ಗಬ್ಬುನಾರುತ್ತಿದೆ, ಜೂಜುಕೋರರು ಜೂಜಾಡಲು ಬಳಸಿಕೊಳ್ಳುತ್ತಿದ್ದಾರೆ. ಕೆಲ ಅನಾಥರು ಮಾರುಕಟ್ಟೆಯನ್ನೇ ಮನೆಯನ್ನಾಗಿಸಿ ಕೊಂಡು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈಗಾಗಲೇ ಅನಾಥರೊಬ್ಬರು ಮಾರುಕಟ್ಟೆಯಲ್ಲಿ ಸತ್ತಿ ರುವ ಘಟನೆ ಸಹ ನಡೆದಿದೆ. ಪಟ್ಟಣದ ಹಳೇ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ 42 ಮುಚ್ಚು ಹರಾಜು ಮಾರುಕಟ್ಟೆಗಳಿದ್ದು, ರೈತರು ಬೆಳೆದ ತರಕಾರಿಗಳನ್ನು ಮಾರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ, ರೈತರ ಮುಕ್ತ ಮಾರುಕಟ್ಟೆಗೆ ಅನುಕೂಲಕ್ಕಾಗಿ ಮಾರುಕಟ್ಟೆ ನಿರ್ಮಾಣ ಮಾಡಿದೆ ಯಾದರು ಅದು ಉಪಯೋಗಕ್ಕೆ ಬಾರದಂತಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಬೀದಿಬದಿ ವ್ಯಾಪಾರಿಗಳಿಗೆ ಹರಾಜು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅನೇಕ ಬಾರಿ ತಿಳಿಸಿದ್ದೇವೆ, ಯಾರು ಅಲ್ಲಿ ಬಂದು ವ್ಯಾಪಾರ ಮಾಡಲು ಸಿದ್ಧರಿಲ್ಲ, ಮಾರುಕಟ್ಟೆ ಎದುರಿನಲ್ಲೇ ಸಂತೆ ನಡೆಯುತ್ತದೆ, ಬೀದಿ ಬದಿ ವ್ಯಾಪಾರಿಗಳು ಮಾರುಕಟ್ಟೆಗೆ ಬಂದರೆ ಅಲ್ಲಿ ವ್ಯಾಪಾರ ಆಗುವುದಿಲ್ಲ, ಬೀದಿಬದಿಯಲ್ಲಿದ್ದರೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ. ● ದೊಡ್ಡಮಲವಯ್ಯ, ಮುಖ್ಯಾಧಿಕಾರಿ ಪುರಸಭೆ ದೇವನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.