ಬೂದಿಗೆರೆಗೆ ಎನ್‌ಎಚ್ ವ್ಯಾಲಿ ನೀರು ಹರಿಸಲು ಕ್ರಮ
Team Udayavani, Feb 10, 2020, 3:11 PM IST
ದೇವನಹಳ್ಳಿ : ಎನ್‌ಎಚ್ ವ್ಯಾಲಿ ಪೂರ್ಣಗೊಂಡು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿದು ಬರುತ್ತಿರುವುದುರಿಂದ ಅಂರ್ತಜಲ ಮಟ್ಟ ಹೆಚ್ಚುವುದು ಎಂದು ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ತಿಳಿಸಿದರು.
ತಾಲುಕಿನ ಬೂದಿಗೆರೆ ಗ್ರಾಮದಲ್ಲಿ ಬೂದಿಗೆರೆ ಗ್ರಾಪಂ ಕಚೇರಿಯ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್‌ಎಚ್ ವ್ಯಾಲಿ ನೀರು ಬೂದಿಗೆರೆ ಕೆರೆವರೆಗೂ ಹರಿಸುವಂತೆಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆಚರ್ಚಿಸಬೇಕು. ಬೂದಿಗೆರೆ ದೊಡ್ಡ ಕೆರೆಯಾಗಿರುವುದರಿಂದ ಕೆರೆ ಅರ್ಧ ದಷ್ಟು ಕೆರೆ ತುಂಬಿದರೂ, ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜಿಪಂ, ತಾಪಂ ಗ್ರಾಪಂ ಸದಸ್ಯರು ಒಕ್ಕೊರಲಿನಿಂದ ಎನ್‌ಎಚ್ ವ್ಯಾಲಿ ನೀರು ಕೆರೆಗಳಿಗೆ ಹರಿಸಲು ಧ್ವನಿ ಎತ್ತಬೇಕು. ಎನ್ ಎಚ್ ವ್ಯಾಲಿ ನೀರಿನ ಸಂಬಂಧಿಸಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನನ್ನ ಕ್ಷೇತ್ರದ ಬಾಗಲೂರು ಕೆರೆಯಿಂದ ನೀರು ಸರಬರಾಜು ಆಗುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬೂದಿಗೆರೆ ಕ್ರಾಸ್ ನಿಂದ ಮೈಲನ ಹಳ್ಳಿ ವರೆಗೆ ನಾಲ್ಕು ಪಥದ ರಸ್ತೆ ಮಾಡಲು 137 ಕೋಟಿ ಮಂಜೂರಾಗಿತ್ತು. ಮೈತ್ರಿ ಸರ್ಕಾರದಲ್ಲಿ ಈ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆಗಿತ್ತು.ಸುಸಜ್ಜಿತ ಗ್ರಾಪಂ ಕಟ್ಟಡದಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ಎಂದರು.
ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಬೂದಿಗೆರೆ ಕೆರೆಗೆ ಎನ್ ಎಚ್ ವ್ಯಾಲಿ ನೀರು ಬಂದರೆ ನೀರಿನ ಸಮಸ್ಯೆಗೆ ಬಗೆಹರಿಯುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಲ್ಲಿ ಕೆರೆಗಳ ಅಭಿವೃದ್ಧಿ ಪಡೆಸಲು ನಾನು ಅಧ್ಯಕ್ಷನಾಗಿದ್ದಾಗ 30 ಕೋಟಿ ರೂ.ಮೀಸಲಿಟ್ಟಿದ್ದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ಕೆ ಶ್ರೀನಿವಾಸ್ ಗೌಡ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಜಯಮ್ಮ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ ಮಂಜುನಾಥ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷಲಕ್ಷ್ಮೀನಾರಾಯಣ್, ತಾಪಂ ಅಧ್ಯಕ್ಷೆ ಚೈತ್ರಾ, ಮಾಜಿ ಅಧ್ಯಕ್ಷೆ ಭಾರತಿ, ತಾಪಂ ಮಾಜಿ ಸದಸ್ಯ ಲಕ್ಷಣ್ ಗೌಡ, ಖಾದಿ ಬೋಡ್ ì ಅಧ್ಯಕ್ಷ ಲಕ್ಷಣ್ ಮೂರ್ತಿ, ಹಿಂದುಳಿದ ವರ್ಗದ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್, ಕಾರ್ಯದರ್ಶಿ ಎಸ್ .ಆರ್.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನ ಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.