ನಗರದಲ್ಲಿ ವಿದೇಶಿ ಕಳ್ಳರಿದ್ದಾರೆ ಎಚ್ಚರ
Team Udayavani, Jul 18, 2018, 2:57 PM IST
ಬೆಂಗಳೂರು: ನಿವೃತ್ತ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮನೆಯಲ್ಲಿ ಕಳವು ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ದಕ್ಷಿಣ ಅಮೆರಿಕಾದ ಕೊಲಂಬಿಯಾ ಮೂಲದ ಐವರು ಆರೋಪಿಗಳ ಪೈಕಿ ಮೂವರು 2 ವರ್ಷದ ಹಿಂದೆ ಸದಾಶಿವನಗರದಲ್ಲಿರುವ ಮಾಜಿ ಶಾಸಕರೊಬ್ಬರ ಮನೆಯಲ್ಲೂ ಕಳ್ಳತನ ಮಾಡಿದ್ದರು ಎಂಬ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ.
ರಾಜಧಾನಿಯಲ್ಲಿನ ಪ್ರತಿಷ್ಠಿತ ಬಡಾವಣೆಗಳು, ಹೋಟೆಲ್‌ಗಳು ಹಾಗೂ ನಿವೃತ್ತ ಐಎಎಸ್-ಐಪಿಎಸ್, ರಾಜಕಾರಣಿಗಳು-ಉದ್ಯಮಿಗಳ ಮನೆಗಳನ್ನೇ ಇವರು ಟಾರ್ಗೆಟ್ ಮಾಡಿ ಮನೆಗಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮನೆಯಲ್ಲಿ ಕಳವು ಪ್ರಕರಣದಲ್ಲಿ ಬಂಧಿಸಲಾಗಿದ್ದ ದಕ್ಷಿಣ ಅಮೆರಿಕಾದ ಕೊಲಂಬಿಯಾದ ಜೋಸ್ ಎಡ್ವರ್ಡೋ ಅರಿವಲೋ ಬರ್ಬಾನೋ(40), ಗುಸ್ತಾವೋ ಅಡಾಲ್ಫೋ ಜರಾಮಿಲ್ಲೋ ಜಿರಾಲ್ಡೋ(47), ಯಾಯಿರ್ ಅಲ್ಬರ್ಟೋ ಸ್ಯಾಂಚಿಯಸ್ (45) ಎಡ್ವರ್ಡೋ ಎಲೆಕ್ಸಿಸ್ ಗಾರ್ಸಿಯಾ ಪರಮೋ (38) ಹಾಗೂ ಕಿಂಬರ್ಲಿ ಗುಟಿಯಾರೀಸ್(30) ಎಂಬುವರಿಂದ 80 ಲಕ್ಷ ರೂ, ಮೌಲ್ಯದ 950 ಗ್ರಾಂ ತೂಕದ ವಜ್ರದ ಆಭರಣ, ಚಿನ್ನಾಭರಣ, ವಿದೇಶಿ ಕರೆನ್ಸಿ, 18 ವಿದೇಶಿ ವಾಚ್‌ಗಳು, ಬೆಲೆ ಬಾಳುವ ಪೆನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಆರೋಪಿಗಳ ಪೈಕಿ ಜೋಸ್ ಎಡ್ವರ್ಡೋ, ಹೈಸ್ಕೂಲ್ ಮುಗಿಸಿ ಹೋಲ್‌ಸೇಲ್ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದ. ಗುಸ್ತಾವೋ ಅಡಾಲ್ಫೋ ಎಂಬಿಎ ಪದವೀಧರ. ಯಾಯಿರ್ ಅಲ್ಬಟೋì ನ್ಯೂಯಾರ್ಕ್ ನಲ್ಲಿ ಹೈಸ್ಕೂಲ್‌ವುುಗಿಸಿ, ವೆಲ್ಡಿಂಗ್ ತರಬೇತಿ ಹೊಂದಿದ್ದಾನೆ. ಎಡ್ವರ್ಡ್ ಎಲೆಕ್ಸಿಸ್ ಫುಡ್ ಹ್ಯಾಂಡ್ಲಿಂಗ್ ಕೋರ್ಸ್ ಹಾಗೂ ಹೈಡ್ರಾಲಿಕ್ ಗ್ಯಾಸ್ಟ್ರೋನಮಿ ಕೋರ್ಸ್ ಪಡೆದಿದ್ದಾನೆ. ಇನ್ನು ಮಹಿಳೆ ಕಿಂಬರ್ಲಿ ಗುಟಿ ಯಾರೀಸ್ ಕೊಲಂಬಿಯಾದಲ್ಲಿ ಫಾರೀನ್ ಟ್ರೇಡ್ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದಾಳೆ.
ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ನಗರದ 4 ವಲಯಗಳ 5 ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 6 ಕನ್ನಕಳವು ಪ್ರಕರಣಗಳಲ್ಲೂ ಇವರು ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶೀಲಿಸಿದೆ ಮನೆ ಬಾಡಿಗೆ ನೀಡುವುದರಿಂದ ಈ ಕೃತ್ಯ ನಡೆದಿದೆ. ಹೀಗಾಗಿ ಮನೆ ಬಾಡಿಗೆ ನೀಡುವವರವಿರುದ್ಧವೂ ಕ್ರಮ ಜರುಗಿಸಲಾಗುವುದು. ಮನೆಗಳ್ಳತನಕ್ಕಾಗಿ ಬರುತ್ತಿದ್ದ ವಿದೇಶಿಗರು ವಿಲ್ಲಾ ಹಾಗೂ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳ ಬಗ್ಗೆ ಅಮೆರಿಕಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೃತ್ಯದ ಮಾದರಿ: ಕೊಲಂಬಿಯಾದಿಂದ ಐವರು ಆರೋಪಿಗಳು ಜೂನ್ ಮೊದಲ ವಾರದಲ್ಲಿ ನಗರಕ್ಕೆ ಬಂದಿದ್ದರು. ಬರುವ ಮೊದಲೇ ಆನ್‌ಲೈನ್ ಮೂಲಕ ದಿನಕ್ಕೆ 4 ಸಾವಿರ ಬಾಡಿಗೆ ಎಂಬಂತೆ ಕುಂಬಳಗೋಡು ಠಾಣಾ ವ್ಯಾಪ್ತಿಯ ವಿಲ್ಲಾ ಹಾಗೂ ಪುಟ್ಟೇನ ಹಳ್ಳಿಯಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್ ಕಾಯ್ದಿರಿಸಿದ್ದರು. ನಂತರ ಅಲ್ಲಿಯೇ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಓಎಲ್‌ಎಕ್ಸ್‌ನಲ್ಲಿ ಕಾರುಗಳನ್ನು ಖರೀದಿಸಿ, ಜಿಪಿಎಸ್ ಮ್ಯಾಪ್‌ನಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ಹಗಲು ರಾತ್ರಿ ಸಂಚರಿಸಿ ಮಾಹಿತಿ ಕಲೆ ಹಾಕುತ್ತಿದ್ದರು.
ವಾಕಿಟಾಕಿ ಬಳಕೆ: ಬಳಿಕ ಆರೋಪಿತೆ ಕಿಂಬರ್ಲಿ ಬುರ್ಖಾ ಅಥವಾ ಐಶಾರಾಮಿ ಉಡುಪು ಧರಿಸಿ, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮೊದಲೇ ಗುರುತಿಸಿದ ಮನೆಗೆ ಹೋಗಿ ಕಾಲಿಂಗ್ ಬೆಲ್ ಮಾಡುತ್ತಿದ್ದಳು. ಪ್ರತಿಕ್ರಿಯೆ ಬಾರದಿದ್ದಾಗ ಸಣ್ಣ ಕಲ್ಲು ಎಸೆದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಳು. ಬಳಿಕ ವಾಕಿ ಟಾಕಿ ಮೂಲಕ ಕೂಗಳತೆ ದೂರದಲ್ಲಿದ್ದ ಇತರರನ್ನು ಮಾಹಿತಿ ನೀಡಿ ಕರೆಸಿಕೊಳ್ಳುತ್ತಿದ್ದಳು. ಐವರಲ್ಲಿ ಮೂವರು ಬಾಗಿಲು ಮುರಿಯವ ಉಪಕರಣ ಬಳಸಿ ಒಳ ಪ್ರವೇಶಿಸಿ ಕಳ್ಳತನ ಮಾಡಿದರೆ, ಇಕೆ, ಮನೆ ಬಳಿ ಮತ್ತೂಬ್ಬ ಕಾರಿನಲ್ಲಿ ಕಾಯುತ್ತಿದ್ದ. ಕೆಲಸ ಮುಗಿದ ಕೂಡಲೇ ಐವರು ಒಟ್ಟಿಗೆ ಪರಾರಿಯಾಗುತ್ತಿದ್ದರು.
ಪತ್ತೆ ಹೇಗೆ?: ಜೂನ್ 22ರಂದು ಜಯನಗರದ 5ನೇ ಹಂತದ ನಿವಾಸಿ ಮುರಳಿಕೃಷ್ಣ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಗಿಲು ಒಡೆಯುತ್ತಿರುವ ದೃಶ್ಯ ಸೇರಿ ಇತರ ದೃಶ್ಯಗಳು ಸೆರೆಯಾಗಿದ್ದವು. ಈ ಮಾಹಿತಿಯನ್ನಾಧರಿಸಿ ಪರಿಶೀಲಿಸಿದಾಗ ಕಾರು ನಂಬರ್ ಪತ್ತೆಯಾಗಿತ್ತು. ಅನಂತರ ಜುಲೈನಲ್ಲಿ ನಡೆದ ಮತ್ತೊಂದು ಕೃತ್ಯದ ದೃಶ್ಯಾವಳಿಯಿಂದ ಕಾರುಗಳ ಬಗ್ಗೆ ಅನುಮಾನ ಬಂದು ತನಿಖೆಗೆ ಮುಂದಾಗಿದ್ದರು. ಇದರಿಂದ ಆನ್‌ಲೈನಿನಲ್ಲಿ ಕಾರು ಖರೀದಿಸಿರುವುದು ಪತ್ತೆಯಾಗಿತ್ತು. ಜತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ಓಎಲ್‌ಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಈ ಮಾಹಿತಿಯಿಂದ ಖರೀದಿದಾರರ ಸೋಗಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.