ಭೂಮಿ ಕಬಳಿಕೆ ಆರೋಪ: ಪ್ರತಿಭಟನೆ
Team Udayavani, Dec 20, 2021, 11:47 AM IST
ದೇವನಹಳ್ಳಿ: ತಾಲೂಕಿನ ಚಿಕ್ಕ ಓಬದೇನಹಳ್ಳಿ ಗ್ರಾಮದ ಗ್ರಾಮ ಠಾಣಾ 8ಎಕರೆ 4ಗುಂಟೆ ಗ್ರಾಮದ ಜಮೀನಿನಲ್ಲಿ ಆಗಿರುವ ಎಲ್ಲಾ ಅಕ್ರಮ ಖಾತೆಗಳನ್ನು ರದ್ದುಗೊಳಿಸಿ ಅಕ್ರಮ ನಡೆಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ, ರೈತ ಸಂಘಟನೆಮತ್ತು ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನ ಸಂಘಟನೆಯಿಂದ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಅಕ್ರಮ ಖಾತೆಗಳನ್ನು ರದ್ದುಗೊಳಿಸಿ ಸರ್ಕಾರಿ ಸ್ವತ್ತನ್ನಾಗಿ ಘೋಷಿಸಿ ನಾಮಫಲಕ ಹಾಕಿರುವ ಜಮೀ ನಿನ ಸಂಬಂಧಪಟ್ಟಂತೆ ಹಾಗೂ ಸರ್ಕಾರಿ ಆಸ್ತಿಗಳನ್ನು ಕಬಳಿಸುವುದಕ್ಕೆ ಕುಮ್ಮಕ್ಕು ನೀಡಿದವರಿಗೆ ಪಾಠ ಕಲಿಸಬೇಕು ಎಂದು ಒತ್ತಾಯಿಸಿತು.
ಅಧಿಕಾರಿಗಳ ವಾಜಕ್ಕೆ ಒತ್ತಾಯ: ಗ್ರಾಮಠಾಣೆಯಲ್ಲಿದ್ದ ಸರ್ಕಾರಿ ಭೂಮಿಯನ್ನು ಗ್ರಾಪಂನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜಯರಾಮೇಗೌಡ ಹಾಗೂ ಜಮುನಾಪ್ರಸ್ತುತ ಜಿಪಂನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಚಿಕ್ಕ ಓಬದೇನಹಳ್ಳಿ ಗ್ರಾಮದ ಕೋಟ್ಯಂತರ ರೂ.ಬೆಲೆಬಾಳುವ 8 ಎಕರೆ 04 ಗುಂಟೆ ಜಮೀನನ್ನು ಅಕ್ರಮವಾಗಿ ಕಬಳಿಸಿಕೊಂಡಿ ರುವುದು ಸಾಬೀತಾಗಿದೆ. ಭೂಕಬಳಿಕೆ ಮಾಡಿರುವ ವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕೋಬದೇನಹಳ್ಳಿ ಗ್ರಾಮಸ್ಥರು, ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವವರ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಬೇಕು. ಅವರು, ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.ಅವರಿಗೆ ಸಹಕಾರ ನೀಡಿದ್ದ ಅಂದಿನ ಜಿಪಂ ಪ್ರಭಾರ ಅಧ್ಯಕ್ಷ ಬೀರಪ್ಪ ಅವರು ಅಧಿಕಾರಿಗಳ ಅಕ್ರಮಗಳಿಗೆ ಬೆನ್ನಲುಬಾಗಿ ನಿಂತಿದ್ದರು. ಅವರ ಮೇಲೆಯೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕ್ರಿಮಿನಲ್ ಕೇಸು ದಾಖಲಾಗಿಲ್ಲ: ಭೂಕಬಳಿಕೆಯವಿಚಾರವಾಗಿ ಲೋಕಾಯುಕ್ತರು ಸೇರಿದಂತೆ ಇತರೆತನಿಖಾ ಸಂಸ್ಥೆಗಳಿಂದ ವರದಿ ಪಡೆದುಕೊಂಡಿದ್ದ ಜಿಪಂ ಸಿಇಒ ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ ಎಲ್ಲಾ ದಾಖಲಾತಿಗಳನ್ನು ವಜಾಮಾಡಿ ತಪ್ಪಿತಸ್ಥರ ವಿರುದ್ಧಕ್ರಿಮಿನಲ್ ಕೇಸು ದಾಖಲಿಸುವಂತೆ ಆ. 13ರಂದುತಾಪಂ ಇಒ ಸೂಚನೆ ನೀಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ರೈತ ಸಂಘದ ಮುಖ್ಯಸ್ಥ ಸಿದ್ದಾರ್ಥ ಮಾತನಾಡಿ, ಸರ್ಕಾರ ರೈತರ ಮತ್ತು ಸಾಮಾನ್ಯ ಜನರ ಪಾಲಿಗೆಸಂಪೂರ್ಣ ಸತ್ತಂತ್ತಾಗಿದೆ ಸರ್ಕಾರಕ್ಕೆ ಎಚ್ಚರಿಸಲು ಇಂದು ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ತಾಪಂಮುಂಭಾಗ ಅನಿರ್ದಿಷ್ಟ ಧರಣಿ ಮಾಡುವುದಾಗಿ ತಿಳಿಸಿಇದೇ ರೀತಿ ಉದಾಸೀನವನ್ನು ಅಧಿಕಾರಿಗಳು ಮುಂದುವರಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆಪ್ರತಿಭಟಿಸಿ ನಂತರ ತಾಪಂ ಇಒ ಎಚ್.ಡಿ.ವಸಂತಕುಮಾರ್ ಹಾಗೂ ಶಿರಸ್ಥೆದಾರ್ ಭರತ್ ರವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಮುನಿ ಆಂಜಿನಪ್ಪ, ವಕೀಲ ಸಿದ್ಧಾರ್ಥ, ತಾಲೂಕು ಘಟಕದ ಅಧ್ಯಕ್ಷ ಸೋಲೂರು ನಾಗರಾಜ್, ಗ್ರಾಮಾಂ ತರ ಜಿಲ್ಲಾಧ್ಯಕ್ಷ ಹನುಮಣ್ಣ ಗೂಳ್ಯ, ಬೆಂಗಳೂರು ನಗರ ಶಾಖೆಯ ಅಧ್ಯಕ್ಷ ಅಯೂಬ್ ಖಾನ್, ಪ್ರಧಾನ ಕಾರ್ಯದರ್ಶಿಕಾಕೋಳು ಚನ್ನಮರಿ ಯಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅರುಣ ಇತರರಿದ್ದರು.
ಅಕ್ರಮವೆಸಗಿದ್ದರೆ ಕ್ರಮ : ಗ್ರಾಪಂನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಕ್ರಮವೆಸಗಿದ್ದರೆ, ಅವರ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಚಿಕ್ಕೋಬದೇನಹಳ್ಳಿ ಗ್ರಾಮದಲ್ಲಿನ 8 ಎಕರೆ 04 ಗುಂಟೆ ಗ್ರಾಮಠಾಣೆ ಜಮೀನಿಲ್ಲೇ, ನಮ್ಮ ವಿರುದ್ಧ ಭೂಕಬಳಿಕೆಆರೋಪ ಮಾಡುತ್ತಿರುವರದ್ದು 36ನಿವೇಶನಗಳಿಗೆ ಅವರಿಗೆ ಹೇಗೆಮಂಜೂರಾಗಿವೆಯೋ ಹಾಗೆ ಎಲ್ಲರಿಗೂ ಆಗಿದೆ. ನಾನು ಅಧಿಕಾರ ದುರುಪಯೋಗಮಾಡಿಕೊಂಡಿಲ್ಲ. ಯಾವ ಅಧಿಕಾರಿಗೂಸಹಕಾರ ನೀಡಿಲ್ಲ. ನನ್ನ ಮೇಲೆ ಪ್ರತಿಭಟನಾಕಾರರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳಿನಿಂದ ಕೂಡಿವೆ ಎಂದು ಜಿಪಂ ಮಾಜಿ ಪ್ರಭಾರ ಅಧ್ಯಕ್ಷ ಬೀರಪ್ಪ ಸಮರ್ಥನೆ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.