ಕೆರೆಗೆ ಕಂಟಕವಾದ ಅಪಾರ್ಟ್‌ಮೆಂಟ್ ಕಲುಷಿತ ನೀರು
ಶುದ್ಧೀಕರಿಸದ ತ್ಯಾಜ್ಯ ನೀರು ಕೆರೆಗೆ ಬಿಡಲಾಗುತ್ತಿದೆ: ಆರೋಪ ಕಪ್ಪು ಬಣ್ಣಕ್ಕೆ ತಿರುಗುತ್ತಿರುವ ನೀರು, ದುರ್ನಾತ.
Team Udayavani, Nov 3, 2021, 2:13 PM IST
ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೆರೆಗೆ ಸಮೃದ್ಧವಾದ ನೀರು ಬಂದಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಮತ್ತೂಂದು ಕಡೆ ಸಾದಹಳ್ಳಿ ಸಮೀಪದ ರೋನಾಲ್ಡೋ ಕೊಲಾಸೋ ಎಂಬುವರಿಗೆ ಸೇರಿದ ಹಾಲಿವುಡ್ ಟೌನ್ ಬಹುಮಹಡಿ ಕಟ್ಟಡ ಕಲುಷಿತ ನೀರು ನೇರವಾಗಿ ಕೆರೆಗೆ ಹರಿಯುತ್ತಿರುವುದರಿಂದ ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ ಎಂದು ಇಲತೊರೆ ಹಾಗೂ ಚೌಡನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಜಾವ ಹಾಗೂ ಸಂಜೆಯ ವೇಳೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಲಿಕ್ಕೂ ಸಾಧ್ಯವಾಗಲ್ಲ, ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈಗ ಕೊಳಚೆ ನೀರು ಕೆರೆಗೆ ಸೇರುತ್ತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.ದನಕರು ಕುಡಿಯಲಿಕ್ಕೆ ಯೋಗ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ರೊನಾಲ್ಡೋ ಕೊಲಾಸೋ ಅವರು, ಉತ್ತಮ ಸಮಾಜ ಸೇವಾ ಕಾರ್ಯಕ್ರಮ ಈ ಭಾಗದಲ್ಲಿ ಮಾಡುತ್ತಿದ್ದು, ಅವರ ಹೆಸರಿಗೆ ಕಳಂಕ ತರಲಿಕ್ಕೆ ಇಂತಹ ಹುನ್ನಾರ ನಡೆಸಿದ್ದಾರೆ. ನಮ್ಮ ಹಾಲಿವುಡ್ ಟೌನ್‌ನಲ್ಲಿ ಉಪಯೋಗವಾಗುತ್ತಿರುವ ನೀರನ್ನು ನಾವು ಹೊರಗೆ ಬಿಡುತ್ತಿಲ್ಲ, ಈ ನೀರನ್ನು ಶುದ್ಧೀಕರಿಸಿ, ನಾವು ಗಿಡಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ.” – ನಾಗರಾಜ ಪೂಜಾರಿ, ಅನಿವಾಸಿ ಭಾರತೀಯ, ರೋನಾಲ್ಡೋ ಕೊಲಾಸೋ ಆಪ್ತ ಕಾರ್ಯದರ್ಶಿ.
ಆರೋಗ್ಯದ ಮೇಲೆ ಪರಿಣಾಮ: ಕೆರೆಯಲ್ಲೇ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಿಸಿದ್ದು, ಈ ಕೊಳವೆಬಾವಿಯಿಂದಲೇ ಜನರಿಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಆದರೆ, ಈಗ ನೀರು ಕಲುಷಿತ ಆಗುತ್ತಿರುವುದರಿಂದ ಕೊಳವೆಬಾವಿಯಲ್ಲಿನ ನೀರು ಕೂಡಾ ಕಲುಷಿತವಾಗುವಂತಹ ಸಾಧ್ಯತೆ ಹೆಚ್ಚಾಗಿವೆ.
ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಗೆ ಸೇರಿದ ಹಾಲಿವುಡ್ ಟೌನ್ ಅಪಾರ್ಟ್ ಮೆಂಟ್ ನಲ್ಲಿನ ಜನರು ಉಪಯೋ ಗಿಸಿದ ನೀರನ್ನು ಶುದ್ಧೀಕರಣ ಮಾಡಿ ಹೊರಗೆ ಬಿಡುವ ಬದಲಿಗೆ ನೇರವಾಗಿ ಪೈಪುಗಳ ಮೂಲಕ ರಾಜಕಾಲುವೆಗೆ ಬಿಟ್ಟಿದ್ದಾರೆ. ರಾಜಕಾಲುವೆ ಮೂಲಕ ಹರಿದು ಬರುತ್ತಿರುವ ನೀರು ಕೆರೆಗೆ ಸೇರುತ್ತಿವೆ. ಕೆರೆಯ ನೀರೂ ಕೂಡಾ ದುರ್ನಾತ ಬೀರುತ್ತಿದೆ.
ಇದನ್ನೂ ಓದಿ:- ಇಶಾನ್ ಕಿಶನ್ ಓಪನರ್ ವಿವಾದ: ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸ್ಪಷನೆ
ಅಧಿಕಾರಿಗಳೇ ಇತ್ತ ಗಮನ ಹರಿಸಿ: ಗ್ರಾಪಂಗೆ ಸೇರಿದ ಕೊಳವೆಬಾವಿಗಳು ಹೆಚ್ಚು ಇಲತೊರೆ ಕೆರೆಯಲ್ಲಿರು ವುದರಿಂದ ನೀರು ಕಲುಷಿತವಾಗುತ್ತಿದೆ. ದನಕರುಗಳಿಗೆ ಇದರಿಂದ ಸಾಕಷ್ಟು ತೊಂದರೆಗಳಾಗು ತ್ತಿದೆ. ಜನ ಇಂತಹ ನೀರನ್ನೇ ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಏಳೆಂಟು ವರ್ಷದ ಹಿಂದೆ ಕೆರೆ ತುಂಬಿತ್ತು. ಈಗ ಉತ್ತಮ ನೀರು ಬಂದಿದೆ. ಇನ್ನಾ ದರೂ ಸಂಬಂಧಪಟ್ಟವರು ತ್ಯಾಜ್ಯ ನೀರನ್ನು ಕೆರೆಗೆ ಬಿಡಬಾರದು. ರಾಜಕಾಲುವೆಗಳ ಮೂಲಕ ನೀರನ್ನು ಬಿಟ್ಟಿರುತ್ತಾರೆ. ರಾತ್ರಿ ವೇಳೆಯಂತೂ ಹೆಚ್ಚು ಜೋರಾಗಿ ನೀರು ಹರಿಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಸಾರ್ವಜನಿಕರ ಮೌಖೀಕ ದೂರನ್ನು ಆಧರಿಸಿ ಹಾಲಿವುಡ್ ಟೌನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎಸ್‌ಟಿಪಿ ಪ್ಲಾಂಟ್ ನೀರನ್ನು ಅವರೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗೆ ಬಿಡುತ್ತಿಲ್ಲ. ಒಂದು ವೇಳೆ ಶುದ್ಧೀಕರಣ ಮಾಡದೇ ಹೊರಗೆ ಬಿಟ್ಟರೆ ನೊಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ.” – ಆದರ್ಶ್, ಪಿಡಿಒ ಕನ್ನಮಂಗಲ ಗ್ರಾಪಂ.
“ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮಳೆ ನೀರು ಹೊರತುಪಡಿಸಿ, ಹಾಲಿವುಡ್ ಟೌನ್‌ನಲ್ಲಿ ಉಪಯೋಗವಾಗುತ್ತಿರುವ ನೀರು ಶುದ್ಧೀಕರಿಸದೇ ಹೊರಗೆ ಬಿಡುತ್ತಿದ್ದರೆ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ.” – ಎಚ್.ಡಿ. ವಸಂತಕುಮಾರ್, ತಾಪಂ ಇಒ.
“ಹಾಲಿವುಡ್ ಟೌನ್ ಬಹುಮಹಡಿ ಕಟ್ಟಡಗಳಿಂದ ತ್ಯಾಜ್ಯ ನೀರು ಇಲತೊರೆ ಕೆರೆಗೆ ಬಿಡುತ್ತಿದ್ದಾರೆ. ಕೆರೆ ನೀರು ಕಲುಷಿತವಾಗುತ್ತಿದೆ. ಕುಡಿಯಲು ಯೋಗ್ಯವಾಗುತ್ತಿಲ್ಲ. ದನಕರುಗಳಿಗೂ ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.” – ವೆಂಕಟೇಶ್, ಗ್ರಾಪಂ ಸದಸ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.