Devanahalli: ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ!


Team Udayavani, Aug 1, 2024, 5:56 PM IST

Devanahalli: ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ!

ದೇವನಹಳ್ಳಿ: ಅಂಗನವಾಡಿಗಳು ಮಕ್ಕಳ ಶಿಕ್ಷಣದ ಬುನಾದಿ ಹಾಕುವ ಹಾಗೂ ಮಕ್ಕಳ ಬೆಳ ವಣಿಗೆಗೆ ಒತ್ತು ನೀಡುವ ಕೇಂದ್ರಗಳಾ ಗಿವೆ. ಆದರೆ, ಸರ್ಕಾರ ಅಂಗನವಾಡಿ ಕೇಂದ್ರ ಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಕ್ರಮವಹಿಸಿದ್ದು. ಬೆಂಗಳೂರು ಗ್ರಾಮಾತರ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲದ ಪರಿಸ್ಥಿತಿ ಇದೆ.

ಜಿಲ್ಲೆಯಲ್ಲಿ ಒಟ್ಟು 157 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಣೆ: ಅಂಗನವಾಡಿಗಳ ದಾಖಲಾತಿಗೂ ಪರಿಣಾಮ ಬೀರುತ್ತಿದೆ. ಅಂಗನವಾಡಿಗಳನ್ನು ಬಲ ಪಡಿಸಲು ಸರ್ಕಾರಗಳು ಹೆಚ್ಚು ಮುಂದಾಗಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 157 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. 988 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಅಂಗನವಾಡಿಗಳಲ್ಲಿ 29,000 ಗಡಿ ದಾಟಿದೆ. ಈ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಒಂದು ರೀತಿ ಸವಾಲು ಎದುರಿಸುವಂತಾಗಿದೆ.

ಬಾಡಿಗೆ ಕಟ್ಟಡಗಳ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಳ: ಪ್ರತಿ ಸಭೆಗಳಲ್ಲಿ ಅಂಗನವಾಡಿ ಕಟ್ಟಡದ ಸಂಬಂಧಪಟ್ಟಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾರೆ. ಎಲ್ಲಿ ಕಟ್ಟಡದ ಜಾಗದ ಕೊರತೆ ಬಗ್ಗೆ ಮಾಹಿತಿಯು ಸಹ ಪಡೆಯುತ್ತಾರೆ. ಪಟ್ಟಣ ಪ್ರದೇಶ ಗಳಲ್ಲಿ ವಾರ್ಡ್‌ವಾರು ಅಂಗನವಾಡಿಗಳಿಗೆ ಜಾಗ ಸಿಗುವುದೇ ಕಷ್ಟವಾಗುತ್ತಿದೆ. ಒಂದು ಕಡೆ ಭೂಮಿ ಬೆಲೆ ಹೆಚ್ಚಾಗಿರುವು ದರಿಂದ ಸರಿಯಾದ ಭೂಮಿ ಸಿಗುತ್ತಿಲ್ಲ. ಸ್ವಂತ ಕಟ್ಟಡವಿಲ್ಲದೇ ಅಂಗನ ವಾಡಿ ಗಳನ್ನು ಇಲಾಖೆ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದೆ. ಒಂದಿಷ್ಟು ಸಮಸ್ಯೆ ಕೂಡ ಎದುರಾಗುತ್ತಿದೆ. ಮುಖ್ಯವಾಗಿ ಬಾಡಿಗೆ ಪಾವತಿಯೇ ಸಮಸ್ಯೆ ಕೆಲವೊಮ್ಮೆ 3-4 ತಿಂಗಳಾದರೂ ಬಾಡಿಗೆ ಹಣ ಪಾವತಿ ಯಾಗದೆ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಸಿಲುಕುವಂತಾಗಿದೆ.

ಬೆಂಗಳೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಾಗುತ್ತಿದ್ದು, ಬಾಡಿಗೆ ಕಟ್ಟಡಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಅಂಗನವಾಡಿ ಕಟ್ಟಡಗಳ ಬಾಡಿಗೆ ಸಹ ಏರಿಕೆಯಾಗುತ್ತಿದೆ. ಮಕ್ಕಳಿಗೂ ಸಹ ಆಟವಾಡಲು ಸ್ಥಳಾವಕಾಶ ಕೊರತೆ ಪೌಷ್ಟಿಕ ಕೈತೋಟಕ್ಕೆ ಹಿನ್ನಡೆಯಾಗುತ್ತಿದೆ. ಶೌಚಾಲಯಗಳ ಸಮಸ್ಯೆ ಕೂಡ ಬಳಿಗೆ ಕಟ್ಟಡಗಳಲ್ಲಿ ಎದುರಾಗುತ್ತದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರಮ ಅಗತ್ಯ: ಸಾಕಷ್ಟು ವರ್ಷದಿಂದ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಬೇಕೆಂಬ ಕೂಗು ಈವರೆಗೂ ಸಂಪೂರ್ಣವಾಗಿ ಪೂರ್ಣಗೊಂಡಿ ಲ್ಲ. ಸಿಎಸ್‌ಆರ್‌ ಅನುದಾನ ಕೆಲವು ವಿಶೇಷ ರೀತಿಯ ಅಂಗಡಿಯಾ ಗಿದ್ದು ಬಿಟ್ಟರೆ ಉಳಿದಂತೆ ಅಂಗನವಾಡಿಗಳು ಶಾಲಾ ಪೂರ್ವ ಶಿಕ್ಷಣ ವಿಷಯದಲ್ಲಿ ಹಿನ್ನಡೆಯಾಗುತ್ತಿದೆ. ಈ ಮೂಲಕ ದಾಖಲಾತಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಸರ್ಕಾರ ಅಂಗನವಾಡಿ ಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರಮಗಳನ್ನು ಕೈಗೊಳ್ಳಬೇಕು.

ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ: ಬೆಂಗಳೂರು ಅಂತ ಜಿಲ್ಲೆಯಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅನ್ಯ ಜಿಲ್ಲೆಗಳಿಂದ ರಾಜ್ಯಗಳ ಕಾರ್ಮಿಕರು ಇಲ್ಲಿಗೆ ವಲಸೆ ಬಂದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈ ವೇಳೆ ಅವರ ಮಕ್ಕಳು ಅಂಗನವಾಡಿಗಳಿಗೆ ಹೆಚ್ಚಾಗಿ ಸೇರುತ್ತಿದ್ದಾರೆ. ಇದರಿಂದ ಅಂಗನವಾ ಡಿಗಳ ದಾಖಲಾತಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. 2024- 25 ನೇ ಸಾಲಿನಲ್ಲಿ ಹುಟ್ಟು 59 ಸಾವಿರಕ್ಕೂ ಹೆಚ್ಚು ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿದ್ದು. ಮತ್ತ ಷ್ಟು ಅಭಿವೃದ್ಧಿಪಡಿಸಿದರೆ ಮಕ್ಕಳ ದಾಖಲಾತಿ ಎಚ್ಚರವಾಗುವ ಸಾಧ್ಯತೆ ಇದೆ. ಸಿಎಸ್‌ಆರ್‌ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಂಗನವಾ ಡಿಗಳಿಗೆ ಹೆಚ್ಚು ಬೇಡಿಕೆ ಇದ್ದು. ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡುವ ಕೆಲಸವಾಗಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿವೆ.

988 ಮಾತ್ರ ಸ್ವಂತ ಕಟ್ಟಡದಲ್ಲಿ ಕೆಲಸ ಮಾಡುತ್ತಿದೆ. ಇನ್ನುಳಿದ 134 ಬಾಡಿಗೆ ಕಟ್ಟಡಗಳಲ್ಲಿ ಹಲವು ವರ್ಷ ಗಳಿಂದಲೂ ಉಳಿಸಿಕೊಂಡಿದೆ. ಪಂಚಾಯತಿ ಕಟ್ಟಡಗಳಲ್ಲಿ ನಾಲ್ಕು, ಸಮುದಾಯ ಭವನಗಳಲ್ಲಿ 53, ಹಾಗೂ ಶಾಲೆಗಳಲ್ಲಿ 94, ಹಾಗೂ ಪರ್ಯಾಯ ವ್ಯವಸ್ಥೆಗಳಲ್ಲಿ ನಾಲ್ಕು ಕಡೆಗಳಲ್ಲಿ ಅಂಗನ ವಾಡಿಗಳು ನಡೆಯುತ್ತಿದೆ. ಇದರಲ್ಲೂ ಕೂಡ ಶೌಚಾಲಯ ಸ್ಥಳಾವಕಾಶ ಕೊರತೆ ಮಕ್ಕಳ ಆಟೋಟಕ್ಕೆ ಜಾಗವಿಲ್ಲದಂತಾಗಿದೆ.

75 ಹುದ್ದೆಗಳು ಖಾಲಿ ಇದೆ: ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಮಂಜೂರಾಗರುವ ಒಟ್ಟು 1212 ಕಾರ್ಯಕರ್ತೆಯರ ಹುದ್ದೆಗಳಲ್ಲಿ 1137 ಭರ್ತಿಯಾಗಿದ್ದು. 75 ಹುದ್ದೆಗಳು ಖಾಲಿ ಇದೆ. ಮಿನಿ ಅಂಗನವಾಡಿ ಕಾರ್ಯಕ ‌ರ್ತೆಯರ 65 ಹುದ್ದೆಗಳಲ್ಲಿ ಹತ್ತು ಹುದ್ದೆಗಳು ಖಾಲಿ ಇದೆ. ಪ್ರಮುಖವಾಗಿ ಮಕ್ಕಳಿಗೆ ಅಡುಗೆ ಮಾಡಿ ಬಡಿಸಿ ಮಕ್ಕಳಿಗೆ ಪಾಲನೆ ಮಾಡುವ ಸಹಾಯಕಿಯರ ಒಟ್ಟು ಸಾವಿರದ1210 ಮಂಜೂರು ಹುದ್ದೆಗಳಲ್ಲಿ 963 ಮಾತ್ರ ಭರ್ತಿಯಾಗಿದೆ . 247 ಹುದ್ದೆಗಳು ಖಾಲಿ ಇದೆ. ಚುನಾವಣಾ ಪ್ರಕ್ರಿಯೆ ಗಳಿಂದ ಹುದ್ದೆಗಳ ಭರ್ತಿ ಕಾರ್ಯ ತಡವಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿ ವೃ ದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕಾಗಿಪಟ್ಟಿ ಸಲ್ಲಿಕೆ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಸಹ ಕ್ರಮ ವಹಿಸಲಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ 134 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದೆ. -ಮುದ್ದಣ್ಣ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

-ಎಸ್‌.ಮಹೇಶ್‌

 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.