ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ
Team Udayavani, Dec 7, 2019, 12:14 PM IST
ದೇವನಹಳ್ಳಿ : ಹೈದರಾಬಾದ್‌ನಲ್ಲಿ ಪಶು ವೈದ್ಯೆಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ಕು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹೈದ್ರಬಾದ್ ಪೊಲೀಸರ ಕಾರ್ಯಕ್ಕೆ ನಗರದ ಜನತೆ ಹರ್ಷ ವ್ಯಕ್ತಪಡಿಸಿದರು.
ಸರ್ವರ ಬೀದಿಯಲ್ಲಿ ಸಾರ್ವಜನಿಕರ ವತಿಯಿಂದ ಮೇಣದ ಬತ್ತಿ ಹಿಡಿದು ವೈದ್ಯೆ ಪ್ರಿಯಾಂಕ ರೆಡ್ಡಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎನ್‌ಕೌಂಟರ್ ಮಾಡಿದ ತಂಡದ ನೇತೃತ್ವ ವಹಿಸಿದ್ದ ಸೈಬರಾಬಾದ್ ನಗರದ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಸರ್ವರ ಬೀದಿ ಮುಖಂಡ ಎಸ್. ಆರ್. ತ್ಯಾಗರಾಜ್ ಮಾತನಾಡಿ, ಹೈದರಾ ಬಾದ್‌ನಲ್ಲಿ ಪಶು ವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಹೊಡೆದುರುಳಿಸಿರುವದು ಶ್ಲಾಘನೀಯ. ಇಡೇ ದೇಶವೇ ಪೊಲೀಸರ ಕಾರ್ಯವನ್ನು ಸ್ವಾಗತಿಸುತ್ತದೆ. ಅಮಾಯಕ ಹೆಣ್ಣುಮಗಳನ್ನು ಕ್ರೂರವಾಗಿ ಕೊಂದ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಿದೆ.ಇನ್ನು ಮುಂದೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ವೆಸಗುವವರಿಗೆ ಈ ಕಾಮುಕರ ಸಾವು ತಕ್ಕ ಪಾಠವಾಗಲಿದೆ. ಇನ್ನೂ, ರಾಜ್ಯ ಮತ್ತು ಕೇಂದ್ರ ಮುಂದೆ ಅತ್ಯಚಾರ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಘನಘೋರ ಶಿಕ್ಷೆ ವಿಧಿಸಬೇಕು. ಸರ್ಕಾರ ಇದಕ್ಕೆ ಸೂಕ್ತ ಕಾನೂನು ತರಬೇಕು ಎಂದು ಆಗ್ರಹಿಸಿದರು.
ಮಾಜಿ ಪುರಸಭಾ ಅಧ್ಯಕ್ಷ ಎಸ್ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಹೈದರಾಬಾದ್ ಪೊಲೀಸರ ಕಾರ್ಯವನ್ನು ಪ್ರತಿಯೊಬ್ಬರೂ ಮೆಚ್ಚಬೇಕು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅತ್ಯಾಚಾರಿಗಳ ಸಂಬಂಧಿಸಿದಂತೆ ಸೂಕ್ತ ಕಾನೂನು ತರಬೇಕು. ಪೊಲೀಸ್ ಆಯುಕ್ತ ಸಜ್ಜನ್‌ರ ಕನ್ನಡಿ ಗರಾಗಿರುವುದು ಮತ್ತಷ್ಟು ಹೆಮ್ಮೆ ಎಂದರು . ದೊಡ್ಡ ಬಳ್ಳಾಪುರ ಡಿವೈಎಸ್‌ಪಿ ರಂಗಪ್ಪ, ಗೋಪಾಲ್, ಬಾಬಣ್ಣ, ನಾಗರಾಜ್, ರಮೇಶ್, ಶ್ರೀಕಾಂತ್, ಜಯಮ್ಮ, ಅಂಬಿಕ, ಜಯಮ್ಮ, ಲಕ್ಷ್ಮಮ್ಮ, ನಾಗೇಂದ್ರ, ಸುನೀಲ್, ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.