ಗಾಂಜಾ ಮಾರಾಟಗಾರರ ಬಂಧನ
Team Udayavani, Sep 19, 2020, 12:58 PM IST
ನೆಲಮಂಗಲ: ಟೌನ್ ಠಾಣೆ ವ್ಯಾಪ್ತಿ ಬಡಾವಣೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಟೌನ್ ಪೊಲೀಸರು ಬಂಧಿಸಿ 750 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಹಿದ್(20), ದೇವೇಂದ್ರ ಸಿಂಗ್(22) ಬಂಧಿತರು. ಶಾಹಿದ್ ವಾಲ್ಮೀಕಿನಗರದ ನಿವಾಸಿಯಾಗಿದ್ದು ದೇವೇಂದ್ರಸಿಂಗ್ ಅಡಕ ಮಾರನಹಳ್ಳಿಯಲ್ಲಿ ವಾಸವಾಗಿದ್ದನು. ನಗರಸಭೆ ವ್ಯಾಪ್ತಿಯ ಜಕ್ಕಸಂದ್ರ ಸಮೀಪದ ಬಡಾವಣೆಗಳಲ್ಲಿ ಗಾಂಜಾ ಮಾರಾಟ ಮಾಡುತಿರುವ ಖಚಿತ ಮಾಹಿತಿ ಮೇರೆಗೆ ಟೌನ್ ಠಾಣೆ ಪಿಎಸ್‌ಐ ಸುರೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ಮಾಡಿ 750 ಗ್ರಾಂ ಗಾಂಜಾ ವಶಕ್ಕೆ ಪಡೆದಿದೆ.
ನಗರದಲ್ಲಿ ಗಾಂಜಾ ಮಾರಾ ಟ, ಸೇವನೆ, ಮಾದಕ ವಸ್ತು ಮಾರಾಟ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಪೊಲೀಸರ ಗಮನಕ್ಕೆತರಬೇಕು.ಮಾಹಿತಿ ನೀಡಿದವರ ಹೆಸರನ್ನು ಗೌಪ್ಯ ವಾಗಿಡಲಾಗುತ್ತದೆ ಎಂದು ಪಿಎಸ್‌ಐ ತಿಳಿಸಿದ್ದಾರೆ.
ಗಾಂಜಾ ಗಿಡ ವಶ: ಸೆರೆ :
ದೊಡ್ಡಬಳ್ಳಾಪುರ: ಪಿಎಸ್‌ಐ ಗಜೇಂದ್ರ ನೇತೃತ್ವದ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಮಾರು 2 ಕೆ.ಜಿ.ತೂಕದ ಸುಮಾರು 60 ಸಾವಿರ ಮೌಲ್ಯದ ಗಾಂಜಾ ಗಿಡ ವಶಪಡಿಸಿ ಕೊಂಡಿರುವ ಘಟನೆ ತಾಲೂಕಿನ ಹಾಡೋನ ಹಳ್ಳಿಯಲ್ಲಿ ನಡೆದಿದೆ.
ಹಾಡೋನಹಳ್ಳಿ ಗ್ರಾಮದ ವೆಂಕಟೇಶ(45) ಬಂಧಿತ. ತನ್ನ ಮನೆಗೆ ಹೊಂದಿಕೊಂಡಂತಿರುವ ಶೌಚಾಲಯ, ಜಮೀನಿನ ನಡುವೆ ಗಾಂಜಾ ಗಿಡ ಬೆಳೆದಿದ್ದು, ಕುಂಬಳಗಿಡದ ಬಳ್ಳಿಯನ್ನು ಗಾಂಜಾ ಗಿಡಕಾಣದಂತೆ ಮರೆ ಮಾಡಿದ್ದ ಎನ್ನಲಾಗಿದೆ. ಡಿವೈಎಸ್ಪಿ ಟಿ.ರಂಗಪ್ಪ ಅವರಆದೇಶದ ಮೇರೆಗೆ, ಪಿಎಸ್‌ಐ ನೇತೃತ್ವದಲ್ಲಿ ರಾಧಾಕೃಷ್ಣ, ಸುರೇಶ್, ವೆಂಕಟೇಶ್, ಮಧುಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.