ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿ ಬನ್ನೇರುಘಟ್ಟ ಪಾರ್ಕ್‌ಗೆ
Team Udayavani, Aug 6, 2022, 1:03 PM IST
ಆನೇಕಲ್: ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ವ್ಯಾಪ್ತಿಯ ಮುತ್ತತ್ತಿ ಕಾಡುದಾರಿಯಲ್ಲಿ, ತಾಯಿಯಿಂದ ಬೇರ್ಪಟ್ಟ ಗಂಡಾನೆ ಮರಿಯೊಂದನ್ನು ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದ್ದಾರೆ.
ಆನೆ ಮರಿಯು ಅಂದಾಜು 4 ತಿಂಗಳದ್ದಾಗಿದ್ದು 2-3 ದಿನ ಗಳಿಂದ ತಾಯಿಯ ಹಾಲು ಸಿಗದೇ ನಿತ್ರಾಣವಾಗಿತ್ತು. ಸಿಬ್ಬಂದಿ ಆನೆಮರಿ ಯನ್ನು ಹಲವು ಆನೆಗಳ ಗುಂಪಿಗೆ ಸೇರಿಸಲು ಮಾಡಿದ ಪ್ರಯತ್ನ ಫಲವಾಗಿ ಅದನ್ನು ಸಂರಕ್ಷಿಸಿ ಕರೆತರಲಾಗಿದೆ ಎಂದರು.
ಪಾರ್ಕಿನ ವೈದ್ಯ ಉಮಾಶಂಕರ್ ಮಾಹಿತಿ ನೀಡಿ, ಆನೆ ಮರಿ ಸಾಧಾರಣ ಆರೋಗ್ಯ ಹೊಂದಿದ್ದು, ಕಡಿಮೆ ಎಂದರೂ 6-12 ತಿಂಗಳ ಕಾಲ ತಾಯಿಯ ಹಾಲು ಅವಶ್ಯವಾಗಿದೆ. ಇಲ್ಲಿಗೆ ಬಂದ ಆನೆ ಮರಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿದ್ದು, ನಮ್ಮಲ್ಲಿನ ನುರಿತ ಮಾವುತರು ಅದರ ಆರೈಕೆ ಮಾಡುತ್ತಿದ್ದಾರೆ. ಆನೆ ಮರಿಯ ರಕ್ತದ ಮಾದರಿಯನ್ನು ಹೆಬ್ಟಾಳದ ತಪಾಸಣಾ ಕೇಂದ್ರಕ್ಕೆ ಕಳಿಸಿದ್ದು, ಪಾರ್ಕಿನ ಪಶು ವೈದ್ಯಕೀಯ ತಂಡದ ನಿಗಾವಣೆಯಲ್ಲಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.