ಬೆಲೆ ಏರಿಕೆಗೆ ಜೆಡಿಎಸ್ ಖಂಡನೆ
Team Udayavani, Jun 23, 2021, 6:18 PM IST
ದೊಡ್ಡಬಳ್ಳಾಪುರ: ಪೆಟ್ರೋಲ್ , ಡಿಸೇಲ್‌ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ,ತಾಲೂಕು ತಹಶೀಲ್ದಾರ್ ಹಾಗೂ ಜಿಲ್ಲಾಆಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಅಧಿಕಾರಕ್ಕೆ ಬರುವಾಗಜನರಿಗೆ ನೀಡಿದ್ದ ಎಲ್ಲಾ ಭರವಸೆಗಳಿಗೂ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸಾಮಾನ್ಯರ ಬದುಕು ದುಸ್ಥರವಾಗುವಂತೆಮಾಡಿರುವ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ.ಸುಳ್ಳು ಭರವಸೆ ನೀಡಿವುದರಲ್ಲಿ ಬಿಜೆಪಿ ಮುಖಂಡರು ಮುಂದಿದ್ದಾರೆ.
ದೇಶವನ್ನು ಆರ್ಥಿಕವಾಗಿ ಮುಂದೆ ತೆಗೆದುಕೊಂಡು ಹೋಗುವುದಕ್ಕೆ ಅಲ್ಲ ಎಂದುಆರೋಪಿಸಿದರು.ಸಾಮಾನ್ಯರ ಬದುಕು ಸಂಕಷ್ಟ:ಪೆಟೊ›àಲ್ ಬೆಲೆ ಹತ್ತು ಪೈಸೆ ಏರಿಕೆಯಾದರು ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿ ಮುಂದಾಳುಗಳು ಈಗ ಕಾಣೆಯಾಗಿದ್ದಾರೆ. ಇಂದು ಜನಜೀವನದಬದುಕಿನ ಒಂದು ಭಾಗವೇ ಆಗಿರುವ ತೈಲಬೆಲೆ ಏರಿಕೆಯಾದರೆ ಪ್ರತಿಯೊಂದುವಸ್ತುಗಳ ಬೆಲೆಯು ತಾನಾಗಿಯೇ ಏರಿಕೆಯಾಗುತ್ತ ಹೋಗುತ್ತವೆ. ಲಾಕ್‌ಡೌನ್‌ಜಾರಿಯಿಂದ ಜನ ಸಾಮಾನ್ಯರ ಬದುಕುಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿಯೇಬೆಲೆ ಏರಿಕೆಯು ಜನರ ಬದುಕು ಮತ್ತಷ್ಟು ದುಸ್ಥರವಾಗುವಂತೆ ಮಾಡಿದೆ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷವಡ್ಡರಹಳ್ಳಿ ರವಿ, ಪ್ರಧಾನ ಕಾರ್ಯದರ್ಶಿನಾಗರಾಜ…, ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಟಿಎಪಿಎಂಸಿಎಸ್ ಉಪಾಧ್ಯಕ್ಷೆಚಂದ್ರಕಲಾ ಮಂಜುನಾಥ್, ನಿರ್ದೇಶಕಕೆ.ಸಿ.ಲಕ್ಷ್ಮೀನಾರಾಯಣ, ಆಂಜನಗೌಡ,ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನಿಲ…, ತಾಲೂಕು ಘಟಕದ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆದೇವರಾಜಮ್ಮ,ಮುಖಂಡರಾದ ತರಿದಾಳ್‌ಶ್ರೀನಿವಾಸ್, ತಳವಾರ್‌ನಾಗರಾಜ…,ಶಿವಕುಮಾರ್, ಮನೋಹರ್, ವಿನಯ…,ಹನುಮಂತು, ಶ್ರೀನಿವಾಸ್, ಮುತ್ತೂರುಮೂರ್ತಿ, ದೊvಬೆಳx ವಂಗಲ ಹೋಬಳಿಅಧ್ಯಕ್ಷ ಸತೀಶ್ ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.