ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಇ-ಕೆವೈಸಿ ಮಾಡಿಸಲು 30 ಕಡೇ ದಿನ
Team Udayavani, Sep 20, 2021, 1:58 PM IST
ದೇವನಹಳ್ಳಿ: ಪಡಿತರ ಚೀಟಿಗೆ ಆಧಾರ್‌ಬೆರಳಚ್ಚಿನೊಂದಿಗೆ ಪಡಿತರ ಚೀಟಿ ಇ-ಕೆವೈಸಿಮಾಡಲು ನ್ಯಾಯಬೆಲೆ ಅಂಗಡಿಗಳಲ್ಲಿ ಸೆ.30 ಕಡೆದಿನವಾಗಿದೆ. ಒಂದು ವೇಳೆ ಇ-ಕೆವೈಸಿಮಾಡದಿದ್ದರೆ ಪಡಿತರ ಚೀಟಿ ರದ್ದಾಗಲಿದೆ.
ಜಿಲ್ಲೆಯಲ್ಲಿ ಕೆವೈಸಿ ಪ್ರಕ್ರಿಯೆ ನಿತ್ಯ ಮಧ್ಯಾಹ್ನ12ರಿಂದ 4ರವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕೆಂಬ ನಿಯಮಗಳಿದ್ದು ಹಲವೆಡೆ ಪ್ರಕ್ರಿಯೆಗೆ ಅಂಗಡಿಗಳು ಸಹಕರಿಸುತ್ತಿಲ್ಲ ಎಂಬದೂರುಗಳಿವೆ. ಕೋವಿಡ್-19 ಹಿನ್ನೆಲೆಯಲ್ಲಿಇ-ಕೆವೈಸಿಯನ್ನು ನಿಲ್ಲಿಸಲಾಗಿತ್ತು. ಪುನಃ ಇದರ ವಿಸ್ತರಣೆಯನ್ನು ಆಹಾರ ಮತ್ತು ನಾಗರಿಕ ಇಲಾಖೆಮರು ವಿಸ್ತರಣೆ ಮಾಡಿದೆ.
ಬೆರಳಚ್ಚು ಅವಶ್ಯ: ಇ-ಕೆವೈಸಿ ಇಲೆಕ್ಟ್ರಾನಿಕಲ್‌ನೋ ಯುವರ್ ಕಸ್ಟಮರ್ ವಿಧಾನದಲ್ಲಿ ಪಡಿತರಚೀಟಿಗೆ ಆಧಾರ್ ಕಾರ್ಡ್ ನವೀಕರಣ ಮಾಡಿಸಿಪಡಿತರ ಬೆರಳಚ್ಚಿನ ಮೂಲಕ ಕ್ರೋಢೀಕರಣಗೊಳಿಸುವ ಬೆರಳಚ್ಚು ವಿಧಾನಕ್ಕೆ ಇ-ಕೆವೈಸಿ ಎನ್ನಲಾಗುತ್ತಿದೆ. ಪ್ರಕ್ರಿಯೆಯಲ್ಲಿ ಮೂಲ ಪಡಿತರದಾರರೇ ನ್ಯಾಯಬೆಲೆ ಅಂಗಡಿಗೆ ಕಡ್ಡಾಯ ಭೇಟಿನೀಡಿ ಕುಟುಂಬದಲ್ಲಿ ಒಬ್ಬರು ಕಡ್ಡಾಯವಾಗಿನವೀಕರಣ ಮಾಡಬೇಕಾಗುತ್ತದೆ. ಇದಕ್ಕೆ ಸೆ.30ಕಡೆ ದಿನವಾಗಿದೆ.
ಪಡಿತರ ನಿಲ್ಲಿಸಲಾಗುವುದು: ಯಾವುದೇದೂರು, ಗೊಂದಲ ಇದ್ದರೆ ಪಡಿತರದಾರರು 1967 ಸಹಾಯವಾಣಿಗೆ ಕರೆ ಮಾಡಬಹುದು.ಕಳೆದ 2ವರ್ಷಗಳಿಂದ ಇ-ಕೆವೈಸಿ ಪ್ರಕ್ರಿಯೆನಡೆಯುತ್ತಿದ್ದು ಕೊರೊನಾ ಹಿನ್ನೆಲೆ ಕೆಲತಿಂಗಳುಸ್ಥಗಿತಗೊಂಡಿತ್ತು. ಕೊರೊನಾ ನಡುವೆ ಈಪ್ರಕ್ರಿಯೆ ಜಿಲ್ಲಾದ್ಯಂತ ಶೇ.85 ಪ್ರಗತಿ ಕಂಡಿದೆ.ಇ-ಕೆವೈಸಿ ಮಾಡಿಸದಿದ್ದಲ್ಲಿ ಮಾಹಿತಿ ನೀಡದಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿಮುಂದಿನ ತಿಂಗಳಿನಿಂದ ಪಡಿತರ ವಿತರಣೆನಿಲ್ಲಿಸಲಾಗುತ್ತದೆ.
ಕುಟುಂಬದ ಸದಸ್ಯರಲ್ಲಿಒಬ್ಬರು ಆಧಾರ್ ಪ್ರತಿಯೊಂದಿಗೆ ಬಯೋಮೆಟ್ರಿಕ್ ನೀಡುವ ಮೂಲಕ ಇ-ಕೆವೈಸಿಮಾಡಿಸಬೇಕಾದ ಅನಿವಾರ್ಯತೆ ಬಂದೊದಗಿದೆ.ಗ್ರಾಮೀಣ ಭಾಗದಲ್ಲಿ ಶೇ.90 ಬಹುತೇಕನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಮುಕ್ತಾಯ ಮಾಡಲಾಗಿದ್ದು ನಗರ ಮತ್ತುಪಟ್ಟಣ ಪ್ರದೇಶಗಳಲ್ಲಿ ಮಾತ್ರ ಬಾಕಿ ಉಳಿದಿದೆ .
ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.