ಬೆಂಗಳೂರು ಗ್ರಾಮಾಂತರ: ಕಮಲ ಅಭ್ಯರ್ಥಿಗಳ ಆಯ್ಕೆ ಕುತೂಹಲ
Team Udayavani, Mar 29, 2023, 3:13 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಚುನಾವಣಾ ಕಾವು ಏರತೊಡಗಿದೆ. ಕಾಂಗ್ರೆಸ್, ಜೆಡಿಎಸ್, ಮತ್ತು ಅಮ್ ಆದ್ಮಿ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರೆ, ಬಿಜೆಪಿ ಹುರಿಯಾಳುಗಳನ್ನು ಕಣಕ್ಕಿಳಿಸಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. 2008ರಲ್ಲಿ ಬಿಜೆಪಿಯು 3 ಕ್ಷೇತ್ರಗಳನ್ನು ಗೆದ್ದಿತ್ತು. 2013 ಮತ್ತು 2018ರಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರು ಗೆದ್ದಿಲ್ಲ. ಈ ಬಾರಿ ಸಾಕಷ್ಟು ಪ್ರಯತ್ನವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಈಗಾಗಲೇ ದೇವನಹಳ್ಳಿ ಮತ್ತು ನೆಲಮಂಗಲ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ದೊಡ್ಡಬಳ್ಳಾ ಪುರ ಮತು ಹೊಸಕೋಟೆಯಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ.
ಹೊಸಬರು, ವಲಸಿಗರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಶಾಸಕರು 4 ತಾಲೂಕುಗಳಲ್ಲಿ ಗೆದ್ದಿರುವುದಿಲ್ಲ. 2013 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರುಗಳು ಗೆದ್ದಿದ್ದರು. 2008ರಲ್ಲಿ ಹೊಸಕೋಟೆ ಕ್ಷೇತ್ರದಿಂದ ಬಿ.ಎನ್.ಬಚ್ಚೇಗೌಡ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ತೊರೆದಿದ್ದ ಜೆ.ನರಸಿಂಹಸ್ವಾಮಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ನೆಲಮಂಗಲ ಕ್ಷೇತ್ರದಲ್ಲಿ ಎಂ.ವಿ.ನಾಗರಾಜು ಶಾಸಕರಾಗಿ ಆಯ್ಕೆಗೊಂಡಿದ್ದರು. ತದನಂತರ ನಡೆದ 2 ಚುನಾವಣೆಗಳಲ್ಲೂ ಬಿಜೆಪಿ ಖಾತೆ ತೆರೆದಿರಲಿಲ್ಲ. 2018ರಲ್ಲಿ ಎಂಟಿಬಿ ನಾಗರಾಜ್ ಕಾಂಗ್ರೆಸ್‌ನಿಂದ ಶಾಸಕರಾಗಿ ಸಚಿವರಾಗಿದ್ದರು.
ಬದಲಾದ ರಾಜಕೀಯದಲ್ಲಿ ಆಪರೇಷನ್ ಕಮಲದ ಮೂಲಕ ರಾಜೀನಾಮೆ ನೀಡಿ ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷೇತರ ಅರ್ಭರ್ಥಿಯಾಗಿದ್ದ ಶರತ್‌ಬಚ್ಚೇಗೌಡ ವಿರುದ್ಧ ಸೋತಿದ್ದರು. ನಂತರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಸ್ಥಾನವನ್ನು ನೀಡಲಾಗಿತ್ತು. ಬಿಜೆಪಿ ಬಲವರ್ಧನೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ರೂಪಿಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಹಮ್ಮಿಕೊಳ್ಳುತ್ತಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಾರಂಭವಾ ದಾಗಿನಿಂದಲೂ ಇದುವರೆಗೆ 2018ರ ವಿಧಾನಸಭಾ ಚುನಾವಣೆವರೆಗೆ ಇಲ್ಲಿ ಬಿಜೆಪಿ ಶಾಸಕರು ಖಾತೆ ತೆರೆದಿಲ್ಲ.
ಈ ಬಾರಿ 4 ತಾಲೂಕುಗಳಲ್ಲೂ ವಿಧಾನಸಭಾ ಚುನಾವಣೆಗಳ ಅಕಾಂಕ್ಷಿಗಳ ಕೊರತೆ ಇಲ್ಲದೆ 3-4 ಆಕಾಂಕ್ಷಿಗಳು ಪ್ರತಿ ಕ್ಷೇತ್ರದಲ್ಲೂ ಇದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷ ಮತ್ತು ಅಧಿ ಕಾರಕ್ಕೆ ಬರಲು ಭರದಿಂದ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಸ್ಥಿತಿ : ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 2013, 2018ರ ಚುನಾವಣೆ ಯಲ್ಲಿ ಕಾಂಗ್ರೆಸ್, ದೇವನಹಳ್ಳಿ ಮತ್ತು ನೆಲಮಂಗಲ ದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿತು. ಹೊಸಕೋಟೆಯಲ್ಲಿ 2013-18ರಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. 2019ರ ಉಪಚುನಾವಣೆಯಲ್ಲಿ ಬಿಜೆಪಿ ಯಿಂದ ಹೊರಬಂದು ಪಕ್ಷೇತರರಾಗಿ ನಿಂತಿದ್ದ ಶರತ್ ಗೆಲುವು ಸಾಧಿಸಿ ಪುನಃ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಹೀಗಾಗಿ ಕಳೆದೆರಡು ಚುನಾವಾಣೆಗಳಲಿ ಬಿಜೆಪಿಗೆ ಜಿಲ್ಲೆಯಲ್ಲಿ ನೆಲೆ ಇಲ್ಲದಂತಾಗಿತ್ತು. ವಿಚಿತ್ರವೆಂದರೆ ಹೊಸಕೋಟೆ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಸರಿ ದಿತ್ತು. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿ ಸಿದ್ದಮಾಜಿ ಶಾಸಕ ಜೆ.ನರಸಿಂಹಸ್ವಾಮಿ 27,612 ಮತಗಳಿಕೆಗೆ ಸೀಮಿತವಾದರೆ ನೆಲಮಂಗಲ ದಲ್ಲೂ ಶಾಸಕ ಎಂ.ವಿ,ನಾಗರಾಜು 42,689 ಮತ ಗಳಿಕೆ ಯೊಂದಿಗೆ 3ನೇ ಸ್ಥಾನಕ್ಕಿಳಿದರು. ದೇವನಹಳ್ಳಿಯಲ್ಲಿ ಕೆ ನಾಗೇಶ್ 9820 ಮತಗಳನ್ನಷ್ಟೇ ಪಡೆದಿದ್ದರು.
ಬೆಂಗಳೂರು ಗ್ರಾಮಾಂತರದ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಗಳಂತೆ ಮಾರ್ಪಟ್ಟಿದ್ದು, ಕಳೆದೆರಡು ಚುನಾವಣೆಗಳಿಂದಲೂ ಬಿಜಿಪಿ ಎರಡು 3ನೇ ಸ್ಥಾನಕ್ಕೆ ಸೀಮಿತಗೊಂಡಿದೆ. ಹೀಗಾಗಿ ಈ ಬಾರಿ ಶತಾಯ ಗತಾಯ ಕಮಲ ಅರಳಿಸುವ ಸಾಮರ್ಥವುಳ್ಳ ಅಭ್ಯರ್ಥಿಗಳಿಗಾಗಿ ಪಕ್ಷದ ವರಿಷ್ಟರು ಚಿತ್ತ ಹರಿಸಿದ್ದಾರೆ. ಜೊತೆಗೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಕಾಂಕ್ಷಿಗಳು ಮತದಾರರನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದು, ಬಣಗಳ ಕಿತ್ತಾಟ ಜೀವಂತವಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಕೊನೆ ಕ್ಷಣದ ಪ್ರಯತ್ನವಾಗಿ ಆಕಾಂಕ್ಷಿಗಳು ಹೆ„ಕಮಾಂಡ್ ಅಂಗಳಕ್ಕೂ ತಮಗೆ ಟಿಕೆಟ್ ನೀಡುವಂತೆ ಮನವಿ ನೀಡಿದ್ದು ಅಂತಿಮವಾಗಿ ಯಾರು ಕಣದಲ್ಲಿ ಉಳಿಯಲಿದ್ದಾರೆ ಎಂಬ ಚರ್ಚೆ ಮತದಾರರಲ್ಲಿ ಆರಂಭವಾಗಿದೆ.
ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ವಲಸಿಗರು : ಒಂದೆಡೆ ಹೊಸ ಅಭ್ಯರ್ಥಿಗಳು, ಮತ್ತೂಂದು ಕಡೆ ಮಾಜಿಗಳು ಮಾತ್ರ ಅಖಾಡದಲ್ಲಿದ್ದಾರೆ. ಉಳಿದಂತ ಪಕ್ಷ ಸಂಘಟನೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಸಮರ್ಥ ನಾಯಕತ್ವ ಗುಣವುಳ್ಳ ಅನುಭವಿಗಳ ಕೊರತೆ ಕಾಡುತ್ತಿದೆ. ನೆಲಮಂಗಲದಲ್ಲಿ 2008ರಲ್ಲಿ ಶಾಸಕರಾಗಿದ್ದ ಎಂ.ವಿ. ನಾಗರಾಜು ಹೊರತುಪಡಿಸಿ ಉಳಿದೆಡೆ ಸಂಪೂರ್ಣ ಹೊಸ ಮುಖಗಳು ವಲಸಿಗರೇ ಆಕಾಂಕ್ಷಿಗಳಾಗಿದ್ದಾರೆ. ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಜ್ ಸಹ ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿಯಾಗಿದ್ದು ಅವರ ಮಗ ಪುರುಷೋತ್ತಮ್ ಕಣಕ್ಕಿಳಿ ಯುವುದು ಬಹುತೇಕ ಖಚಿತವಾಗಿದೆ. ಜಿಲ್ಲೆಯ ಹೊಸಕೋಟೆ ಹೊರತುಪಡಿಸಿ ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಅಭ್ಯರ್ಥಿಗಳು ಟಿಕೆಟ್ ಗಾಗಿ ಸಾಕಷ್ಟು ಪೈಪೋಟಿ ನಡೆಸುತ್ತಿದ್ದು, ಯಾರಿಗೆ ಚುನಾವಣೆ ಎದುರಿಸುವ ಅವಕಾಶ ಸಿಗಲಿದೆ ಎನ್ನುವುದು ನಿಗೂಢವಾಗಿದೆ. ತೆರೆಮರೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಆಕಾಂಕ್ಷಿಗಳು ನಿರಂತರವಾಗಿ ಟಿಕೆಟ್‌ಗಾಗಿ ಸಾಕಷ್ಟು ಲಾಭಿ ನಡೆಸುತ್ತಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು :
ದೇವನಹಳ್ಳಿ: ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ, ತೀರ್ಥ ಇಸ್ಕಾ, ಕೆ.ನಾಗೇಶ್, ಓಬದೇನಹಳ್ಳಿ ಮು ನಿಯಪ್ಪ
ಹೊಸಕೋಟೆ: ಎಂ.ಟಿ.ಬಿ. ನಾಗರಾಜ್ ಅಥವಾ ಪುರುಷೋತ್ತಮ್
ದೊಡ್ಡಬಳ್ಳಾಪುರ: ಧೀರಜ್ ಮುನಿರಾಜು, ಸತ್ಯಪ್ರಕಾಶ್, ಕರೀಗೌಡ ನೆಲಮಂಗಲ: ಎಂ.ವಿ.ನಾಗರಾಜ್, ಸಪ್ತಗಿರಿ ಶಂಕರ್‌ನಾಯಕ್, ಬಿ.ಹೊಂಬಯ್ಯ, ವೆಂಕಟೇಶ್
ಇತರ ಪಕ್ಷಗಳಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು:
ಜೆಡಿಎಸ್: ದೊಡ್ಡಬಳ್ಳಾಪುರ: ಬಿ.ಮುನೇಗೌಡ, ದೇವನಹಳ್ಳಿ: ಎಲ್.ಎನ್ ನಾರಾಯಣಸ್ವಾಮಿ,
ನೆಲಮಂಗಲ: ಡಾ.ಶ್ರೀನಿವಾಸಮೂರ್ತಿ ಕಾಂಗ್ರೆಸ್: ದೊಡ್ಡಬಳ್ಳಾಪುರ: ಟಿ.ವೆಂಕಟರಮಣಯ್ಯ, ದೇವನಹಳ್ಳಿ: ಕೆ.ಎಚ್.ಮುನಿಯಪ್ಪ,
ನೆಲಮಂಗಲ: ಎನ್.ಶ್ರೀನಿವಾಸ್
ಹೊಸಕೋಟೆ: ಶರತ್ ಬಚ್ಚೇಗೌಡ
ಆಮ್ ಆದ್ಮಿ: ದೊಡ್ಡಬಳ್ಳಾಪುರ: ಪುರುಷೋತ್ತಮ್
ದೇವನಹಳ್ಳಿ: ಬಿ.ಕೆ.ಶಿವಪ್ಪ ನೆಲ ಮಂಗಲ: ಗಂಗಬೈಲಪ್ಪ
– ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.