ಫಲಾನುಭವಿಗೆ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಸಿಬ್ಬಂದಿ ಹಿಂದೇಟು
Team Udayavani, Jan 25, 2019, 6:44 AM IST
ದೊಡ್ಡಬಳ್ಳಾಪುರ: ಸರಕಾರದ ವಿವಿಧ ಇಲಾಖೆ ಗಳ ಸೌಲಭ್ಯಗಳನ್ನು ಅರ್ಹ ಫಲಾನುಭ ವಿಗಳಿಗೆ ತಲುಪಿಸಲು ಬ್ಯಾಂಕ್ ಸಿಬ್ಬಂದಿ ಸ್ಪಂದಿಸು ತ್ತಿಲ್ಲ ಎಂದು ತಾಪಂ ಸದಸ್ಯರಾದ ಶಂಕರಪ್ಪ, ಹಸನ್‌ಘಟ್ಟ ರವಿ ಮತ್ತು ಶಶಿಧರ್ ಆರೋಪಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯಿಂದ ಆಯ್ಕೆಯಾಗುವ ಫಲಾನುಭವಿಗಳಿಗೆ ಬ್ಯಾಂಕ್‌ನ ಮುಲಾಜಿರದೇ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಸರಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರಧ‌್ವಜ ಸರಿಯಾಗಿ ಹಾರಿಸಲ್ಲ: ನ್ಯಾಯಾಲ ಯದ ಆದೇಶದ ಅನ್ವಯ ರಾಷ್ಟ್ರಧ‌್ವಜದ ನೀತಿ ಸಂಹಿತೆ ಅಡಿ ರಾಷ್ಟ್ರಧ‌್ವಜವನ್ನು ಹಾರಿಸಬೇಕು. ಆದರೆ, ತಾಲೂಕಿನ ಅನೇಕ ಗ್ರಾಪಂಗಳಲ್ಲಿ ಅವಿದ್ಯಾ ವಂತ ವಾಟರ್‌ವೆುನ್‌ಗಳಿಗೆ ಈ ಕಾರ್ಯ ಒಪ್ಪಿಸಿ ರುವುದರಿಂದ ರಾಷ್ಟ್ರಧ‌್ವಜದ ಮಹತ್ವ ಅರಿಯದೇ ಬೇಕಾಬಿಟ್ಟಿಯಾಗಿ ಹಾರಿಸುತ್ತಿದ್ದಾರೆ. ಈ ಕುರಿತು ತಾಲೂಕಿನ ಗ್ರಾಪಂ ಒಂದರ ವಿರುದ್ಧ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಶಶಿಧರ್ ಮತ್ತು ಸುನಿಲ್‌ಕುಮಾರ್ ಹೇಳಿದರು.
ಸದಸ್ಯ ಸುನಿಲ್‌ಕುಮಾರ್ ಮಾತನಾಡಿ, ತೂಬಗೆರೆ ಪ್ರೌಢಶಾಲೆಯ ಕೆಲ ಶಿಕ್ಷಕರು ಮಕ್ಕಳಲ್ಲಿ ಮೌಡ್ಯತೆ ಬಿತ್ತುವ ಮೂಲಕ ಬಲವಂತವಾಗಿ ಹಣ ಸುಲಿಗೆ ಮಾಡುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿ ಗಳು ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.
ಸದಸ್ಯರಾದ ಮುತ್ತುಲಕ್ಷ್ಮೀ ವೆಂಕಟೇಶ್ ಹಾಗೂ ಪದ್ಮಾವತಿ ಅಣ್ಣಯಪ್ಪ ಮಾತನಾಡಿ, ಹೊಸಹಳ್ಳಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ, ಬನವತಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಾಂತರ ಮುಂತಾದ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮುಂದಿನ ಸಭೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಸಭೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಕ್ರಮಕ್ಕೆ ಸೂಚನೆ: ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ರೀವತ್ಸ ಮಾತನಾಡಿ, ರಾಷ್ಟ್ರಧ‌್ವಜಕ್ಕೆ ಅಗೌರವ ತೋರಿದರೆ ಸಹಿಸಲು ಅಸಾಧ್ಯ. ಇಂತಹ ಘಟನೆ ಮರುಕಳಿಸಿದರೆ ಪಿಡಿಒ ರನ್ನು ನೇರ ಹೊಣೆಗಾರರನ್ನಾಗಿಸಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ತೂಬಗೆರೆ ಶಾಲೆಯಲ್ಲಿ ಪಾಠ ಮಾಡುವುದ ಬಿಟ್ಟು ವ್ಯಾಪಾರ ಮಾಡುತ್ತಿರುವ ಶಿಕ್ಷಕರ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಕಲಿ ವೈದ್ಯರ ಹಾವಳಿ ತಡೆಯಲು ವಿಫಲರಾದ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಯನ್ನು ವರ್ಗಾಯಿಸುವುದು. ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುಂಜಾಗ್ರತೆಗೆ ಕ್ರಮ, ತಾಯಿ, ಮಗು ಆಸ್ಪತ್ರೆಗೆ ರಸ್ತೆ ಕಾಮಗಾರಿ ಹಾಗೂ ಬಸ್ ವ್ಯವಸ್ಥೆ, ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಜಮೀನು ನೀಡಲು ಮನವಿ.
ಗ್ರಾಮ ವಿಕಾಸ ಯೋಜನೆಯ ತ್ವರಿತ ಅನುಷ್ಠಾನ, ಕಾಲು ಬಾಯಿ ರೋಗ ತಡೆಗೆ ವ್ಯಾಪಕ ಪ್ರಚಾರದ ಮೂಲಕ 15ನೇ ಸುತ್ತಿನ ಅಭಿಯಾನಕ್ಕೆ ಚಾಲನೆ ನೀಡಲು ಸೂಚನೆ, ಮೇವಿನ ಕೊರತೆ ಉಂಟಾ ಗದಂತೆ ನಿಗಾವಹಿ ಸುವುದು, ಹೆಗ್ಗಡಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣಕ್ಕೆ ಒತ್ತಾಯ ಸೇರಿದಂತೆ ವಿವಿಧ ಇಲಾಖೆ ಯೋಜನೆಗಳ ಚರ್ಚೆ ನಡೆಯಿತು.
ಇಒ ದ್ಯಾಮಪ್ಪ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್,ಸಹಾಯಕ ಕೃಷಿ ನಿರ್ದೇಶಕ ಪಿ.ಎಸ್.ನಾರಾಯಣಸ್ವಾಮಿ ಸೇರಿದಂತೆ ತಾಪಂ ಸದಸ್ಯರು ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.