ಚಿಗರೇನಹಳ್ಳಿ ಬಳಿ ಕೊಳೆಯುತ್ತಿರುವ ಬಿಬಿಎಂಪಿ ಕಸ

ಗ್ರಾಮಗಳಿಗೆ ಹರಿದಕೊಳಚೆ ನೀರು,ಗ್ರಾಮಸ್ಥರಿಗೆ ನರಕ ದರ್ಶನ ; ಈಡೇರದ ಸಿಎಂ ನೀಡಿದ್ದ ಭರವಸೆ

Team Udayavani, Aug 24, 2021, 3:04 PM IST

ಚಿಗರೇನಹಳ್ಳಿ ಬಳಿ ಕೊಳೆಯುತ್ತಿರುವ ಬಿಬಿಎಂಪಿ ಕಸ

ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿ ಸಮೀಪದ ಬಿಬಿಎಂಪಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿನ ಕಸದ ರಾಶಿಯಿಂದ ಹೊರ ಬರುತ್ತಿರುವ ಕೊಳಚೆ ನೀರು ಸುತ್ತಮುತ್ತಲ ಗ್ರಾಮಗಳ ಮೂಲಕ ಹರಿಯುತ್ತಿದ್ದು, ಇದರಿಂದ ದುರ್ವಾಸನೆಯಿಂದ ಗ್ರಾಮಸ್ಥರು ಮೂಗು
ಮುಚ್ಚಿಕೊಂಡು ಬದುಕುವ ದುಸ್ಥಿತಿ ಉಂಟಾಗಿದೆ. ಕಸದಿಂದ ಬರುವ ಕೆಟ್ಟ ಗಾಳಿ ಮತ್ತು ನೊಣಗಳ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ‌ ನರಕ ದರ್ಶನವಾಗಿದೆ.

ಮಳೆಗಾಲದಲ್ಲಿ ಎಂಎಸ್‌ಜೆಪಿ ಘಟಕದಲ್ಲಿನ ಕಸದ ರಾಶಿಯಿಂದ ಬರುವ ವಿಷಯುಕ್ತ ನೀರನ್ನು ತಡೆಯುವ ಕಾರಣಕ್ಕೆ ಮಣ್ಣಿನಿಂದ ಕಟ್ಟೆ
ಕಟ್ಟಲಾಗಿದೆ. ಆದರೆ, ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕಟ್ಟೆ ಒಡೆದು ನೀರು ಕೆರೆಗೆ ಹರಿಯುತ್ತಿದೆ. ಎಂಎಸ್‌ಜಿಪಿ ಘಟಕದಿಂದ ಕೂಗಳತೆಯ ದೂರದಲ್ಲಿರುವ ತಣ್ಣೀರಹಳ್ಳಿ ಸುತ್ತಲು ಹರಿಯುವ ಕಾಲುವೆಗೆ ಬಂದಿದೆ.

ವಿಷಯುಕ್ತ ನೀರು: ಈ ವಿಷಯುಕ್ತ ನೀರು ಹರಿಯುವುದರಿಂದ ಕೆಟ್ಟ ವಾಸನೆ ಗ್ರಾಮದ ಸುತ್ತಲೂ ಆವರಿಸಿದೆ. ವಿಷದ ನೀರು ಅಂತರ್ಜಲ ಸೇರುತ್ತಿದೆ. ಇದೇ ನೀರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಜಾನುವಾರುಗಳು ಸಹ ಇದೇ ನೀರು ಕುಡಿಯಬೇಕು. ವಿಷಯುಕ್ತ
ನೀರು ಕುಡಿಯುವುದರಿಂದ ಜನರು ಮತ್ತು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಸದ ರಾಶಿಯಿಂದ ಕೊಳಚೆ ನೀರು ಹೊರಬರಲು ಆರಂಭವಾಗಿದೆ. ಕಸದ ರಾಶಿಯ ಸುತ್ತಲು ಮಣ್ಣಿನಲ್ಲಿ ಹಾಕಲಾಗಿದ್ದ ಕಟ್ಟೆ ಕೊಳಚೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಹೊಡೆದು ಹೋಗಿದೆ. ಹೀಗಾಗಿ ತಣ್ಣೀರನಹಳ್ಳಿ ಗ್ರಾಮದ
ಸಮೀಪದಲ್ಲಿನ ಹಳ್ಳದ ಮೂಲಕ ಕೊಳಚೆ ನೀರು ಮಾವತ್ತೂರು ಕೆರೆಯಕಡೆಗೆ ಹರಿಯ ತೊಡಗಿದೆ.

ಇದನ್ನೂ ಓದಿ:ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ

ಈಡೇರದ ಭರವಸೆ: ಹಳ್ಳದ ಸಾಲಿನಲ್ಲಿ ಜಮೀನುಗಳಲ್ಲಿ ರೈತರು ಬೆಳೆದಿದ್ದ ಅಡಕೆ, ತೆಂಗು ಸೇರಿದಂತೆ ಮರಗಳು ಒಣಗಲು ಆರಂಭಿಸಿವೆ.
ಎಂಎಸ್‌ಜಿಪಿ ಘಟಕದಲ್ಲಿನ ಬಿಬಿಎಂಪಿ ಕಸದ ಹಾವಳಿಯನ್ನು ತಪ್ಪಿಸುವಂತೆ ಈ ಭಾಗದ ಹತ್ತಾರು ಗ್ರಾಮಗಳ ಜನರು ಪಕ್ಷಾತೀತವಾಗಿ ಏಳುದಿನಗಳ ಕಾಲ ನಡೆಸಿದ್ದ ನಿರಂತರ ಧರಣಿ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಧರಣಿ ನಿರತರು ಹಾಗೂ
ಜನಪ್ರತಿನಿಧಿಗಳೊಂದಿಗೆ ವಿಧಾನ ಸೌಧದಲ್ಲಿ ಸಭೆ ನಡೆಸಿದ್ದರು. ಕೊಳಚೆ ನೀರು ಹಳ್ಳದ ಕಡೆಗೆ ಹರಿದು ಬರದಂತೆ ತಡೆಗೋಡೆ ನಿರ್ಮಿಸುವ ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದ ನೂರಾರು ಸಂಖ್ಯೆಯಲ್ಲಿ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬೇರೆಡೆಗೂಹೋಗುವಂತೆ ಮಾಡುವ ಭರವಸೆ ನೀಡಿದ್ದರು. ಆದರೆ ಸಭೆ ನಡೆಸಿ ಒಂದುವರೆ ವರ್ಷ ಕಳೆದಿದ್ದರು ಯಾವುದೇ ಭರವಸೆಯು ಈಡೇರಿಲ್ಲ.

ಯೋಗ್ಯವಲ್ಲ: ಹಳ್ಳದಲ್ಲಿ ಕೊಳಚೆ ನೀರು ಹರಿದು ಬರುವುದು ತಪ್ಪಿಲ್ಲ. ನಮ್ಮೂರಿನ ಸುತ್ತಲಿನ ಕೊಳವೆ ಬಾವಿಗಳಲ್ಲಿ ಬರುವ ನೀರು ಕುಡಿಯಲು
ಯೋಗ್ಯವೇ ಇಲ್ಲ ಎನ್ನುವ ವರದಿ ಬಂದು ವರ್ಷಗಳೇ ಕಳೆದಿವೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟರೆ ದೂರುದ ಗ್ರಾಮಗಳಿಂದ ಕ್ಯಾನ್‌ಗಳಲ್ಲಿ ನೀರು ತಂದು ಕುಡಿಯುವ ಸ್ಥಿತಿ ಇದೆ. ಮಳೆಗಾಲ ಹೊರತು ಬೇಸಿಗೆಯಲ್ಲಿ ಸಂಪೂರ್ಣವಾಗಿ ಕೊಳವೆ ಬಾವಿ ನೀರನ್ನೇ ಬಳಸಿ ತರಕಾರಿ ಮತ್ತಿತರೆ ಬೆಳೆಯನ್ನು ಬೆಳೆಯುವುದೇ ಕಷ್ಟವಾಗಿದೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಣ್ಣೀರನಹಳ್ಳಿ ಗ್ರಾಮದ ರೈತ ರಾಜಣ್ಣ ದೂರಿದ್ದಾರೆ.

ಟಾಪ್ ನ್ಯೂಸ್

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.