ಮತದಾರರ ಪಟ್ಟಿ ಪರಿಷ್ಕರಣೆ ಆರಂಭ
Team Udayavani, Sep 8, 2020, 2:26 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು, ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಹಾಗೂ ಜ.1, 2021ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಆ.10 ರಿಂದ ಅ.31ರವರೆಗೆ 1500 ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳ ವಿಂಗಡಣೆ/ ಮತಗಟ್ಟೆಗಳ ಬದಲಾವಣೆ ಮತದಾರ ಪಟ್ಟಿಯಲ್ಲಿನ ವಿವಿಧ ರೀತಿಯ ತಪ್ಪು ಸರಿಪಡಿಸುವುದು, ಮತದಾರರ ಪಟ್ಟಿಯಲ್ಲಿನ ಭಾಗ, ವಿಭಾಗ ಸರಿಪಡಿಸುವಿಕೆ ಕಾರ್ಯ ನಡೆಸಲಾಗುವುದು. ನ.16 ರಂದು ಕರಡು ಮತದಾರರಪಟ್ಟಿಗಳನ್ನು ಸಾರ್ವಜನಿಕರ ಪರಿಶೀಲನೆಗಾಗಿ ಆಯಾ ಮತಗಟ್ಟೆಗಳಲ್ಲಿ ಪ್ರಕಟಗೊಳಿಸಲಾಗುವುದು. ನ.16 ರಿಂದಡಿ.15ರವರೆಗೆ ಹೆಸರು ಸೇರ್ಪಡೆ ಮಾಡಲು, ತಿದ್ದುಪಡಿ, ಅನರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ಹಕ್ಕು ಆಕ್ಷೇಪಣೆ ಅರ್ಜಿಗಳನ್ನು ನಮೂನೆ 6, 7, 8, 8ಎ ಗಳ ಮುಖಾಂತರ ಸಾರ್ವಜನಿಕರು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅಥವಾ ಸಂಬಂಧಪಟ್ಟ ತಾಲೂಕು ಕಚೇರಿಗೆ ಮತ್ತು ಆನ್‌ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.
ಈ ಮಧ್ಯೆ 2 ಶನಿವಾರ, ಭಾನುವಾರ ಗಳಂದು ವಿಶೇಷ ಆಂದೋಲನ ಕೈಗೊಳ್ಳಲಾಗುವುದು. ಜ.15,2021ರಂದು ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕೆ ಆಯಾ ಮತಗಟ್ಟೆ, ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನೆಗೆ ಪ್ರಕಟಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.