ಬಿಜೆಪಿ ಮುಖಂಡನ ಬಂಗಲೆ ಭಸ್ಮ
Team Udayavani, Mar 26, 2019, 1:04 PM IST
ನೆಲಮಂಗಲ: ತಾಲೂಕಿನ ಯಂಟಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಮಲ್ಲರಬಾಣವಾಡಿಯ ತಾಲೂಕು ಬಿಜೆಪಿ ಮುಖಂಡ ಹಾಗೂ ಮಾಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯರ ಐಶಾರಾಮಿ ಬಂಗಲೆ ಬೆಂಕಿಗಾಹುತಿಯಾಗಿದೆ.
ಘಟನೆ ವಿವರ: ಬೆಂಗಳೂರು ಮಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿನ ಮಲ್ಲರಬಾಣವಾಡಿ ಗ್ರಾಮದ ರಂಗಧಾಮಯ್ಯರ ಮನೆಯಲ್ಲಿನ ಹವಾನಿಯಂತ್ರಿತ ಯಂತ್ರೋಪಕರಣದ ಶಾರ್ಟ್ ಸರ್ಕ್ನೂಟ್‌ನಿಂದಾಗಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಬೆಂಕಿ ಅವಘಡ ಸಂಭವಿಸಿದ್ದನ್ನು ಮನೆಗೆಲಸದವರು ನೋಡಿ ಬೆಂಕಿಹಾರಿಸುವ ಪ್ರಯತ್ನ ಮಾಡುವ ಹೊತ್ತಿಗೆ ಬೆಂಕಿ ಕೆನ್ನಾಲಗೆಗೆ ಮನೆಯಲ್ಲಿದ್ದ ಲಕ್ಷಾಂತರ ರೂ.ಗಳು ಬೆಲೆಬಾಳುವ ಪೀಠೊಪಕರಣ,ಪ್ಲಾಸ್ಟಿಕ್-ಮರದ ವಸ್ತುಗಳೆಲ್ಲವೂ ಸುಟ್ಟುಕರಕಲಾಗಿದೆ.
ಪಟ್ಟಣ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಧಾವಿಸಿ 2 ಗಂಟೆ ಕಾಲ ಬೆಂಕಿಯನ್ನು ಹಾರಿಸುವಲ್ಲಿ ಯಶಸ್ವಿಯಾದರು. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಸುಟ್ಟುಕರಕಲಾದರೆ ಲಾಕರ್‌ನಲ್ಲಿಡಲಾಗಿದ್ದ ಬಂಗಾರ ಬೆಲೆಬಾಳುವ ಆಭರಣ, ದಾಖಲೆ, ಬೆಂಕಿಯ ಕೆನ್ನಾಲಗೆಯಿಂದ ಬಚಾವಾಗಿದ್ದು ಮನೆಯೊಡೆಯ ರಂಗಧಾಮಯ್ಯ ಅವರ ಕೈಸೇರಿವೆ ಎನ್ನಲಾಗಿದೆ.
ಅಂತೆಕಂತೆ: ಬೆಂಕಿ ಅವಘಡ ಹವಾನಿಯಂತ್ರಿತ ಯಂತ್ರೋಪರಣದಿಂದ ಆಯಿತಂತೆ, ದೇವರ ಮನೆಯಲ್ಲಿ ಹಚ್ಚಿದ್ದ ದೀಪದಲ್ಲಿ ಸಮಸ್ಯೆ ಉಂಟಾಗಿ ಬೆಂಕಿ ಅವಘಡ ಸಂಭವಿಸದೆಯಂತೆ, ಇನ್ಯಾವುದೋ ಕಡೆ ವಿದ್ಯುತ್ ಅವಘಡದಿಂದ ಬೆಂಕಿ ಅವಘಡ ಸಂಭವಿಸದೆಯಂತೆ ಎಂಬ ಮಾತುಗಳು ಕೇಳಿ ಬಂದವು.
ಸಾವಿರಾರು ಜನ: ಘಟನೆ ತಿಳಿಯುತ್ತಿದ್ದಂತೆ ಒಂದೆಡೆ ಸಾರ್ವಜನಿಕರು ಕುತೂಹಲದಿಂದ ಓಡಿಬಂದರೆ ಮತ್ತೂಂದೆಡೆ ರಂಗಧಾಮಯ್ಯರ ಅಭಿಮಾನಿಗಳು, ಹಿತೈಷಿಗಳು ಧಾವಿಸಿ ಬಂದಿದ್ದರು. ಇನ್ನು ಘಟನೆ ಕುರಿತಾಗಿ ಮಾತನಾಡಲು ಮಾಲಿಕ ರಂಗಧಾಮಯ್ಯ ನಿರಾಕರಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.