40 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು
Team Udayavani, Jun 14, 2021, 7:22 PM IST
ದೇವನಹಳ್ಳಿ: ಬೇರೆ ಬೇರೆ ಜಿಲ್ಲೆಗಳಿಗೆಸೀಮಿತಗೊಂಡಿದ್ದ ಕಪ್ಪು ಶಿಲೀಂಧ್ರ ಸೋಂಕುಕಾಲಿಟ್ಟಿದೆ. ಇದರ ಪರಿಣಾಮವಾಗಿ ಬೆಂಗಳೂರುಗ್ರಾಮಾಂತರ ಜಿಲ್ಲೆಯಲ್ಲಿ 40ಮಂದಿಗೆ ಕಪ್ಪು ಶಿಲೀಂಧ್ರಸೋಂಕು ಪತ್ತೆಯಾಗಿದೆ. ಅದರಲ್ಲಿ 5 ಮಂದಿ ಬಲಿಯಾಗಿದ್ದಾರೆ.
ಕೊರೊನಾದಿಂದ ಗುಣಮುಖರಾದ ಅಥವಾಚಿಕಿತ್ಸೆ ಪಡೆಯುತ್ತಿರುವ ಮಧುಮೇಹ ಇದ್ದವರಿಗೆಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದ್ದು, ಜೀವಕ್ಕೆಸಂಕಷ್ಟ ತಂದಿದೆ. ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆ ಈ ಸೋಂಕು ಕಾಣಿಸಿಕೊಂಡು ಮೂಗು, ಚರ್ಮ, ಕೆನ್ನೆ, ಹಣೆ,ಮೆದುಳು, ಕಣ್ಣಿಗೆ ಹಾನಿ ಮಾಡಿ, ಜೀವ ತೆಗೆಯುವ ಹಂತಕ್ಕೂ ಹೋಗುತ್ತಿದೆ.
ಪ್ರಾರಂಭಿಕ ಹಂತದಲ್ಲಿಸೋಂಕು ದೃಢಪಟ್ಟರೆ ಚಿಕಿತ್ಸೆ ಸುಲಭ. ಆದರೆ,ಮೆದುಳಿಗೆ ಹೋದರೆ ಜೀವಕ್ಕೆ ಅಪಾಯವಿದೆ.
ಶಸ್ತ್ರ ಚಿಕಿತ್ಸೆ ಪರಿಕರವಿದ್ದರೆ ಅನುಕೂಲ: ಜಿಲ್ಲೆಯಲ್ಲಿದೊಡ್ಡಬಳ್ಳಾಪುರ, ದೇವನಹಳ್ಳಿ ಇನ್ನಿತರ ಕಡೆಗಳಲ್ಲಿಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನುಳಿದವರನ್ನು ಬೆಂಗಳೂರಿನ ವಿಕ್ಟೋರಿಯಾ ಮತ್ತುಬೋರಿಂಗ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಪ್ಪು ಶಿಲೀಂಧ್ರ ಬಂದವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲುಹಲವು ಪರಿಕರಗಳು ಜಿಲ್ಲೆಯಲ್ಲಿ ಇಲ್ಲದಿರುವುದರಿಂದಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಉಪಕರಣಗಳು ಜಿಲ್ಲೆಗೆ ಬರುವುದರಿಂದಚಿಕಿತ್ಸೆ ನೀಡಲು ಅನುಕೂಲವಾಗುವುದು ಎಂದುಆರೋಗ್ಯಾಧಿಕಾರಿ ಹೇಳುತ್ತಾರೆ.
ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಿ: ಜಿಲ್ಲೆಯಲ್ಲಿದಿನೇ ದಿನೆ ಕಪ್ಪು ಶಿಲೀಂಧ್ರ ಸೋಂಕು ಹರಡುತ್ತಿದ್ದು,ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿಸೋಂಕು ನಿಯಂತ್ರಿಸಬೇಕು. ಸೋಂಕಿತರು ಬೆಂಗಳೂರು ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ಇದೆ.ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನೂತನವಾಗಿನೇಮಕಗೊಂಡಿದ್ದರೂ, ಯಾವುದೇ ಪ್ರಯೋಜನವಾಗದಂತಾಗಿದೆ. ಕೇವಲ ಕೊರೊನಾ ನಿಯಂತ್ರಣಕ್ಕೆಮಾತ್ರ ಮುಂದಾಗಿರುವ ಆರೋಗ್ಯ ಇಲಾಖೆ, ಕಪ್ಪುಶಿಲೀಂಧ್ರ ಸೋಂಕನ್ನು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ: ಜಿಲ್ಲೆಯಲ್ಲಿ 5 ಕಪ್ಪುಶಿಲೀಂಧ್ರ ಸೋಂಕಿತರು ಬೆಂಗಳೂರಿನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಹೇಳುತ್ತಿದೆ. ಆದರೆ, ಇಲಾಖೆ ಗಮನಕ್ಕೆ ಬಾರದ ಇತರೆಸೋಂಕಿತರು ಲಕ್ಷಂತರ ರೂ. ಖರ್ಚು ಮಾಡಿದ್ದರೂಸಂಪೂರ್ಣವಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರಿಇಲಾಖೆಗಳು ಜಿಲ್ಲೆಯಲ್ಲಿ ಚಿಕಿತ್ಸೆ ಆರಂಭಿಸಲುಮೀನಮೇಷ ಎಣಿಸುತ್ತಿದೆ.
ಬೆಂಗಳೂರಿನ ಬೋರಿಂಗ್,ವಿಕ್ಟೋರಿಯಾ, ಮಾರ್ಥಸ್ ಆಸ್ಪತ್ರೆಗಳಿಗೆ ಹೋಗಲಿರುವಕಪ್ಪು ಶಿಲೀಂಧ್ರ ಸೋಂಕಿತರಿಗೆ ಅಗತ್ಯ ಮಾಹಿತಿ ವಿನಿಮಯಕ್ಕೆ ನೋಡಲ್ ಅಧಿಕಾರಿಯನ್ನು ಆರೋಗ್ಯಾಧಿಕಾರಿ ನೇಮಕ ಮಾಡಿಲ್ಲ. ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರಗೆಸಂಬಂಧಿಸಿದಂತೆ ಸೂಕ್ತ ಜಾಗೃತಿ, ಮಾಹಿತಿ ತಿಳಿಸುವಯಾವುದೇ ಕೆಲಸವನ್ನು ಮಾಡದ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನ ಆಸ್ಪತ್ರೆಗಳಿಗೆ ಮುಖಮಾಡಿ, ಪರದಾಡುವಪರಿಸ್ಥಿತಿ ಬಂದಿದೆ ಎಂದು ಕೇಳಿ ಬರುತ್ತಿದೆ.
ಎಸ್ ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.