ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನ
Team Udayavani, Oct 23, 2019, 3:00 AM IST
ಆನೇಕಲ್: ರಕ್ತದಾನ ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕೆಂದು ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ಸಲಹೆ ನೀಡಿದರು. ತಾಲೂಕಿನ ಸಮಂದೂರಿನ ಸಗೆಯಲ್ಲಿ ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಚಿರಂಜೀವಿ ಸಂಘ ಪ್ರಾರಂಭವಾಗಿ 25 ವರ್ಷ ಪೊರೈಸಿದ ಅಂಗವಾಗಿ ಆಯೋಜಿಸಿದ್ದ ಯಶಸ್ವಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ನಮ್ಮ ಅಭಿಮಾನ ಕೇವಲ ಸಂಘಕ್ಕೆ ಸೀಮಿತವಾಗದೆ ಇತರರಿಗೆ ಮಾದರಿಯಾಗಬೇಕು. 25ವರ್ಷ ಸೇವೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಹಲವಾರು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.
ಅಖೀಲ ಕರ್ನಾಟಕ ಚಿರಂಜೀವಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಸ ಮಾತನಾಡಿ, ಸಿನಿಮಾ ಬಂದಾಗ ಅಭಿಮಾನಿಗಳು ಪ್ರೀತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆನೇಕಲ್ ಸಂಘವು 25 ವರ್ಷಗಳ ನಿರಂತರ ಒಗ್ಗಟ್ಟಿನ ಸೇವೆ ಮುಂದುವರೆದಿದೆ. ನಮ್ಮ ಸಹಕಾರವೂ ಸದಾ ಇರುತ್ತದೆ ಎಂದರು.
ಎಲ್ಲಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಗಿಡವೊಂದು ಬೆಳೆದು ಮರವಾದಂತೆ ನಾವು ಬೆಳೆಯಬೇಕು. ಸಂಘದ ಗೌರವ ಅಧ್ಯಕ್ಷ ಮಂಜುನಾಥ್ ರೆಡಿ ಮಾತನಾಡಿ ಚಿರಂಜೀವಿಯವರು ಕನ್ನಡದ ಅಭಿಮಾನಿಯಾಗಿದ್ದಾರೆ. ಸತತವಾಗಿ ರಕ್ತ ದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದ್ದು,
ಚಿರಂಜೀವಿ ಹೆಸರಿನ ಸಂಸ್ಥೆ ಇನ್ನಷ್ಟು ಬೆಳೆಯಬೇಕು ಎಂದರು.ಯಾರಿಗೇ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘದವನ್ನು ಬೇಡಿಕೆ ಇಟ್ಟಾಗ ಸಿಗುತ್ತದೆ.ಇನ್ನು ಮುಂದೆ ಯಾರಿಗೇ ಆಗಲಿ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘವನ್ನು ಸಂಪರ್ಕಿಸಿದರೆ ಯಾವುದೇ ಸಮಯದಲ್ಲಿ ಸಿದ್ದರಿರುತ್ತೇವೆ ಎಂದರು.
ತಾಲೂಕು ಅಧ್ಯಕ್ಷ ಮುನಿರಾಜು ಮಾತನಾಡಿ ಚಿರಂಜೀವಿ ಸಂಘಕ್ಕೆ ಚಿರಂಜೀವಿ ಅವರು ಯಾವುದೇ ಹಣ ನೀಡುವುದಿಲ್ಲ, ನಮ್ಮ ರಾಜ್ಯಾಧ್ಯಕ್ಷರು ಕೂಡ ಹಣ ನೀಡುವುದಿಲ್ಲ ನಾವು ಅವರ ಅಭಿಮಾನಿಗಳು ಸೇವೆ ಸಲ್ಲಿಸುತ್ತಿದ್ದೇವೆ. ಆನೇಕಲ್ ತಾಲೂಕಿನಲ್ಲಿ ಕಚೇರಿ ತೆರೆದು ಮುಂದಿನ ದಿನಗಳಲ್ಲಿ ಸಮಾಜ ಸೇವೆಗೆ ಮುಂದಾಗಬೇಕು ಎನ್ನುವುದು ನಮ್ಮ ಆಶಯ ಎಂದರು.
ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಜಿ.ನಾಗೇಂದ್ರ, ರಾಮ್ ಚರಣ್ ಯುವಸೇನೆ ರಾಜ್ಯಾಧ್ಯಕ್ಷ ಮಾರ್ಟಿನ್, ಮುರುಗ, ಗೋವಿಂದ ಸ್ವಾಮಿ, ಛಲಪತಿ, ಶ್ರೀನಿವಾಸ್, ಲಕ್ಷ್ಮಿ ನರಸಿಂಹ ಚಿತ್ರಮಂದಿರ ಮಾಲೀಕ ಸೀತಣ್ಣ, ಗೌರವಾದ್ಯಕ್ಷ ಟಿ.ಮಂಜುನಾಥ್ ರೆಡ್ಡಿ, ಪ್ರಶಾಂತ ನಾಯ್ಡು, ಆರ್.ಜಗದೀಶ್, ಆನೇಕಲ್ ತಾಲೂಕು ಉಪಾಧ್ಯಕ್ಷ ಎಮ್.ರಾಮು, ಪ್ರಧಾನ ಕಾರ್ಯದರ್ಶಿ ಎಮ್.ವೆಂಕಟೇಶ, ಕುಮಾರ, ನಾರಾಯಣ, ಮಾದೇಶ, ಗುರುಸ್ವಾಮಿ, ವೇಣುಗೋಪಾಲ ಇದ್ದರು.
ತುರ್ತಾಗಿ ರಕ್ತದ ಬೇಡಿಕೆ ಇದ್ದಾಗ ಸಂಪರ್ಕಿಸಬೇಕಾದ ಸಂಖ್ಯೆ-9663776662.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.