ಕೇಂದ್ರ ಬಜೆಟ್: ಸಾರ್ವಜನಿಕರಲ್ಲಿ ಪರ, ವಿರೋಧ ಚರ್ಚೆ
Team Udayavani, Feb 2, 2019, 7:09 AM IST
ನೆಲಮಂಗಲ: ಕೇಂದ್ರ ಬಜೆಟ್ ಸಾರ್ವಜನಿಕ ವಲಯದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ. ತಾಲೂಕು ಕೇಂದ್ರ ನೆಲಮಂಗಲ ಪಟ್ಟಣ ಸೇರಿದಂತೆ ತಾಲೂಕಿನ ತ್ಯಾಮಗೊಂಡ್ಲು, ಡಾಬಸ್‌ಪೇಟೆ ಹಾಗೂ ಮತ್ತಿತರ ಗ್ರಾಮಗಳಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಮೋದಿ ಬಜೆಟ್ ಕುರಿತು ಬಿಸಿಬಿಸಿ ಚರ್ಚೆ ನಡೆದಿತ್ತು.
ಗ್ರಾಮೀಣ ಭಾಗದಿಂದ ಬಂದಂತಹ ಹಳ್ಳಿಗಾಡಿನ ಜನತೆ ರೈತರಿಗೆಏನು ಕೊಟ್ಟಿದ್ದಾರೆ. ಏನಾದರೂ ಸಹಾಯ ಒಳ್ಳೆದು ಅನುಕೂಲ ಆಗಿದೆಯಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಕ್ಕೆ ಅಲ್ಪಸ್ವಲ್ಪ ಬಜೆಟ್ ಬಗ್ಗೆ ತಿಳಿದವರು ಅವರ ಮನಬಂದಂತೆ ತೋಚಿದ್ದನ್ನು ಹೇಳುತ್ತಾ ಚರ್ಚಿಸುತ್ತಿದ್ದರು.
ಮುಖ್ಯಚರ್ಚೆ: ಬಡವರಿಗೆ ರೈತರು ಮಹಿಳೆಯರು ಪರಿಶಿಷ್ಟಜಾತಿ ಪಂಗಡದವರನ್ನು ಸಂತೃಪಿಗೊಳಿಸುವಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮಾಜದ ಎಲ್ಲಾ ಜನರನ್ನು ಓಲೈಸಲು ಅನೇಕ ಕಾರ್ಯಕ್ರಮಗಳನ್ನು ಆರ್ಥಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಷ್ಟ್ರವೇ ಮೋದಿಯತ್ತ ಗಮನ ಹರಿಸುವಂತಾಗಿದೆ.
ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣಬರುತ್ತದೆ, ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರು ವಕೃಷಿಕರಿಗೆ ಇದರಿಂದ ಲಾಭವಾಗಲಿದೆ. ಈವರ್ಷ ಹಣದುಬ್ಬರ ಪ್ರಮಾಣ ಶೇ 3.4ರಷ್ಟು ಇರಲಿದೆ. ದೇಶವನ್ನು ಅಭಿವೃದ್ದಿಯತ್ತಕೊಂಡೊಯ್ಯಲು ಎಲ್ಲಾರೀತಿಯ ಕ್ರಮಗಳನ್ನು ಕೈಗೊಂಡಿದ್ದಾರಂತೆ ಅಂತಾ ವಿತ್ತಸಚಿವರು ಹೇಳಿಕೆ ನೀಡಿದ್ದಾರೆ.
ಬಡವರು ಮಧ್ಯಮವರ್ಗದವರು ಕೃಷಿಕರಿಗೆ ಬಜೆಟ್°ಲ್ಲಿ ಹೆಚ್ಚಿನ ಆದ್ಯೆತೆಯನ್ನು ನೀಡಿ ನವಭಾರತ ನಿರ್ಮಾಣಕ್ಕೆ ಸಂಕಲ್ಪಮಾಡಿದ್ದಾರಂತೆ ಬೆಲೆಏರಿಕೆಗೆ ಕ್ರಮಕೈಗೊಂಡಿದ್ದಾರಂತೆ, ಸಣ್ಣ ಸಣ್ಣ ಕೈಗಾರಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಾರಂತೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ.
ಮೀಸಲಾತಿಯಿಂದ ಎಲ್ಲಾ ವರ್ಗಗಳ ಸಮುದಾಯದವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರದ ಕೊನೆಯ ಬಜೆಟ್ ಇದಾಗಿದ್ದು ಲೋಕಸಭೆಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನುಗಳಿಸಿಕೊಂಡು ಮತ್ತೂಮ್ಮೆ ಮೋದಿ ಪ್ರದಾನಿ ಆಗಲೇ ಬೇಕು ಅನ್ನೋ ವಿಚಾರ ಗಮನದಲ್ಲಿರಿಸಿಕೊಂಡು ಈ ರೀತಿಯ ಬಜೆಟ್ ಮಂಡಿದ್ದಾರೆ.
ಈಗಾಗಲೇ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದಾಗಿ ಬೇಸರೊಂಡಿರುವ ಮೋದಿ ಸರಕಾರ ವಿಪಕ್ಷಗಳ ಮುಖಂಡರು ಮತ್ತು ಮಹಾಘಟಬಂದನಕ್ಕೆ ಮುಕ್ತಿನೀಡಿ ಮುಂದಿನ ಚುನಾವಣೆಯ ಅನುಕೂಲತೆಗೆ ಈರೀತಿಯ ಬಜೆಟ್ ಮಾಡಿಬಹುದೆಂಬ ಮಾತುಗಳು ಕೇಳೀಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.