![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 7, 2023, 10:32 AM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿಯನ್ನು ಎದು ರಿಸುತ್ತಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಗಿಂತ ಅನಾವೃಷ್ಟಿ ಕಾಡಿರುವುದೇ ಹೆಚ್ಚು. ಮಳೆ ಆಗದೆ ಬೆಳೆಗಳು ಕೈಕೊಟ್ಟಿವೆ. ರೈತಾಪಿ ವರ್ಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಎರಡು ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು ಇದರಿಂದ ರೈತರು ಸಾಕಷ್ಟು ಅನುಭವಿಸಿದರು ಪ್ರಸ್ತುತ ಸಾಲಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿವೆ.ಬೆಂ.ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ಹೊರಪೀಡಿತ ಪ್ರದೇಶ ಎಂದು ಘೋಷಣೆಯಾಗಿದೆ.
ಅಧಿಕಾರಿಗಳು ನಿಗದಿಪಡಿಸಿರುವ ಪ್ರದೇಶಗಳಿಗೆ ಮಾತ್ರ ಸಮೀಕ್ಷೆಗಾಗಿ ಕೇಂದ್ರ ತಂಡ ಕಳೆ ಕೊಯ್ದು ವಾಪಸ್ ಮೊದಲೇ ಸಿದ್ಧಪಡಿಸಿಕೊಂಡಿರುವ ವಿಡಿಯೋ ಪ್ರಸೆಂಟೇಷನ್ ನಲ್ಲಿ ತಾಲೂಕುಗಳ ಬರವನ್ನು ಅಧಿಕಾರಿಗಳ ತಲೆಗೆ ತುಂಬುವ ಕೆಲಸ ಮಾಡಲಾಗುತ್ತದೆ. ಅಧಿಕಾರಿಗಳು ತೋರಿಸಿದ ದುಷ್ಯ ಸತ್ಯ ಎಂದು ನಂಬುವ ಅಧಿ ಕಾರಿಗಳು ಅದನ್ನೇ ವರದಿ ಮಾಡುತ್ತಿರುವ ಪರಿಣಾಮ ಜಿಲ್ಲೆಯ ರೈತರಿಗೆ ನೈಜವಾಗಿ ಸಿಗಬೇಕಾದ ಪರಿಹಾರ ಸಿಗದೇ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡರುಗಳು ಆರೋಪಿಸುತ್ತಾರೆ.
ಅ.8ರಂದು ಜಿಲ್ಲೆಗೆ 3ನೇ ತಂಡ ಭೇಟಿ: ಬೆಂ. ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮೊದಲು ಕೇಂದ್ರ ಬರ ತಂಡ ಭೇಟಿ ನೀಡಲಿದೆ. ನಂತರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡಿದ್ದಾರೆ. ಅಕ್ಟೋಬರ್ 8ರಂದು ಜಿಲ್ಲೆಗೆ 3ನೇ ತಂಡ ಭೇಟಿ ನೀಡಲಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 71, 000 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದ ರಿಂದ ಬಿತ್ತನೆ ಕಾರ್ಯಕ್ಕೆ ಹೊಡೆತ ಬಿದ್ದಿದೆ. ಶೇ60ರಿಂದ 65ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆಯ ಕೊರತೆ ಇದ್ದಿದ್ದರಿಂದ ಬಿತ್ತನೆ ಕಾರ್ಯ ದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಉತ್ತಮ ಫಸಲು ಬಂದಿತ್ತು. ಬೆಂ.ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ರಾಗಿ ಬೆಳೆಯುವುದರಲ್ಲಿ ರೈತರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ರಾಗಿ ಆಧಾರ ವಾಗಿದೆ. ಅನೇಕ ಕಡೆ ಬಿಸಿಲಿನ ಪರಿಣಾಮದಿಂದ ಸಸಿಗಳು ಒಣಗಿ ಹೋಗುತ್ತಿವೆ. ಸೆಪ್ಟೆಂಬರ್ ತಿಂಗಳಿನ ಪ್ರಾರಂಭದಲ್ಲಿ ಬಿದ್ದ ಮಳೆಗೆ ರೈತರು ಮರು ಬಿತ್ತನೆ ಮಾಡಿದ್ದಾರೆ ಹಾಕಿದ್ದ ಬಂಡವಾಳ ವ್ಯಯಿಸುವಂತಾ ಗಿದೆ. ಬೆಂಗಳೂರು ಮತ್ತು ಜಿಲ್ಲೆಯಲ್ಲಿ ಶೇಕಡ 50ರಷ್ಟು ಫಸಲು ಇಳಿಕೆಯಾಗುವ ಸಾಧ್ಯತೆಗಳು ಕಾಣುತ್ತಿದೆ. ಅಕ್ಟೋಬರ್ 8ರಿಂದ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಕೇಂದ್ರ ತಂಡ ಬಲಪಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಿದೆ.
ರಾಸುಗಳಿಗೂ ಮೇವಿನ ಸಮಸ್ಯೆ: ಅಕ್ಕಿ ದರ ಏರಿಕೆ ಬಗ್ಗೆ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಬಡವರ ಧಾನ್ಯ ಎಂದು ಹೇಳುವ ರಾಗಿ ಬೆಳೆ ಏರಿಕೆಕ್ಕೆ ಯಾಗುವ ಬಗ್ಗೆ ಕೇಳುವುದು ಕಡಿಮೆ ಇದೆ. ಬೆಳೆ ಈ ಬಾರಿ ರಾಗಿ ಬೆಳೆ ಸಾಕಾಷ್ಟು ನೆಲ ಕಚ್ಚಿದೆ. ರಾಸುಗಳಿಗೂ ಮೇವಿನ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಬಿಸಿಲಿಗೆ ಒಣಗುತ್ತಿರುವ ಫಸಲು: ಸರಿಯಾದ ಸಮಯಕ್ಕೆ ಮಳೆ ಬರದೇ ಇರುವುದರಿಂದ ಬಿತ್ತನೆಯಾದರು ಬಿಸಿಲಿಗೆ ಒಣಗಿದೆ. ಎಲ್ಲಾ ಕಾರಣದ ಪರಿಣಾಮದಿಂದ ಜಿಲ್ಲೆಯ ರಾಗಿ ಜೋಳ ಬೆಳೆಗೆ ಭಾರಿ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ತೀವ್ರ ಬರ ತಾಲೂಕು ಎಂದು ಘೋಷಿಸಿದೆ. ಮುಂಗಾರು ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ಬರ ಎದುರಾಗಿದ್ದು ರೈತರು ಭೂಮಿಯನ್ನು ಹಸನ್ನು ಮಾಡುವುದು ಬಿತ್ತನೆ ಮಾಡಲು ಸಕಾಲಕ್ಕೆ ಮಳೆಯಾಗದೆ ತೀವ್ರ ಸಂಕಷ್ಟ ಎದುರಾಗಿತ್ತು. ಧೈರ್ಯ ಮಾಡಿ ಅರೆಕೊರೆಯ ಮಳೆಯನ್ನೇ ನಂಬಿ ಹಲವು ರೈತರು ಬಿತ್ತನೆ ಮಾಡಿದರು ಮಳೆ ಬಾರದೆ ಮೊಳಕೆಯಲ್ಲಿಯೇ ಬೆಳೆಯು ಮೊರಟಿ ಹೋಗಿದೆ.
ಪರಿಹಾರಕ್ಕೆ ರೈತಪರ ಸಂಘಟನೆಗಳ ಒತ್ತಾಯ: ಇತ್ತೀಚೆಗೆ ಬಿದ್ದ ಮಳೆಯಿಂದ ಬೆಳೆಗಳು ಹಸಿರಾಗಿ ಕಂಡು ಬಂದಿದ್ದರೆ ಫಲ ನೀಡುವುದು ಅನುಮಾನ ರೈತರಿಗೆ ಕಾಡುತ್ತಿದೆ ಹೀಗಾಗಿ ಕೇಂದ್ರ ಬರುವ ತಂಡ ನಡೆಸುವ ಅಧ್ಯಯನದಲ್ಲಿ ಎಲ್ಲವನ್ನು ಗಮನಿಸಿ ರೈತರಿಗೆ ಬೇಕಾದ ನೈಜ ಪರಿಹಾರ ನೀಡಬೇಕೆಂದು ರೈತಪರ ಸಂಘಟನೆಗಳು ಒತ್ತಾಯಿಸಿದ್ದಾರೆ. ಜಿಲ್ಲೆಯ ರೈತರು ಪ್ರತಿ ವರ್ಷ ಬೆಳಗೆ ಖರ್ಚು ಮಾಡುವ ಬಂಡವಾಳವನ್ನು ಕೆಲ ರೈತರು ಈ ಬಾರಿ ಎರಡ ರಿಂದ ಮೂರು ಪಟ್ಟು ಹೆಚ್ಚಾಗಿ ಖರ್ಚು ಮಾಡುತ್ತಿದ್ದಾರೆ. ಬಿತ್ತನೆ ಹಂತದ ಸೊಸೆಯಾದ ಮೇಲೆ ಕೆಳಗಡೆ ಬಿಸಿಲಿಗೆ ಒಣಗಿದೆ ಜಳ ದಿನಗಳ ಕಾಲ ಸಾಧಾರಣ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲ ರೈತರು ಭೂಮಿ ಹದ ಮಾಡಿ ಮತ್ತೆ ಬಿತ್ತನೆ ಮಾಡಿದ್ದಾರೆ. ಪ್ರತಿ ವರ್ಷ ಪ್ರತಿ ಎಕರೆಗೆ 20000 ಖರ್ಚು ಮಾಡುತ್ತಿದ್ದವರು ಈ ಬಾರಿ 40,000 ವರೆಗೂ ಖರ್ಚು ಮಾಡಿದ್ದಾರೆ ಬೆಳೆ ಕೂಡ ಎಷ್ಟರ ಮಟ್ಟಿಗೆ ಕೈ ಸೇರುತ್ತದೆ ಎಂದು ರೈತರು ನೋಡಬೇಕಿದೆ.
ಕೇಂದ್ರ ಸರ್ಕಾರದಿಂದ ಬರ ಅಧ್ಯಯನ ತಂಡವು ಬಂದು ಹೋದರೆ ಸಾಲದು. ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳು ಹಾಗೂ ಮಳೆ ಇಲ್ಲದೆ ಬೆಳೆ ನಷ್ಟ ಇತರೆ ಸಮಸ್ಯೆ ಗಳನ್ನು ನೈಜವಾಗಿ ಅಧಿಕಾರಿಗಳು ತಿಳಿಸಬೇಕು. ರೈತರೊಂದಿಗೆ ಅಧ್ಯಯನ ತಂಡ ಮಾಹಿತಿ ಪಡೆದುಕೊಳ್ಳಬೇಕು. –ರಾಮಾಂಜಿನಪ್ಪ, ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಪ್ರಧಾನ ಕಾರ್ಯದರ್ಶಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿದೆ. ಅಕ್ಟೋಬರ್ 8ರಂದು ಕೇಂದ್ರ ಬರ ತಂಡ ಜಿಲ್ಲೆಗೆ ಭೇಟಿ ನೀಡುತ್ತಿದೆ. ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. – ಲಲಿತಾ ರೆಡ್ಡಿ, ಜಂಟಿ ಕೃಷಿ ನಿರ್ದೇಶಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರ ಈಗಾಗಲೇ 4 ತಾಲೂಕುಗಳನ್ನು ಬರಗಾಲ ಘೋಷಣೆ ಮಾಡಿದೆ. ಅಕ್ಟೋಬರ್ 8ರಂದು ಬಲ ಅಧ್ಯಯನ ಕೇಂದ್ರದ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. – ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ
–ಎಸ್.ಮಹೇಶ್
You seem to have an Ad Blocker on.
To continue reading, please turn it off or whitelist Udayavani.